ಬೆಂಗಳೂರು : ಕೊನೆಗೂ ಚಂದ್ರಲೋಕಕ್ಕೆ ಭಾರತ ಹೆಜ್ಜೆ ಇಟ್ಟಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆ ಇಟ್ಟ ಪ್ರಜ್ಞಾನ್ ರೋವರ್ ಬರೋಬ್ಬರಿ 40 ದಿನದ ಸುದೀರ್ಘ ಪಯಣದ ಬಳಿಕ ಸುರೀಕ್ಷಿತವಾಗಿ ಲ್ಯಾಂಡ್ ಆಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದರು ಬಹುನಿರೀಕ್ಷಿತ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿದೆ.
ಪ್ರಜ್ಞಾನ್ ರೋವರ್ ಹೊತ್ತ ಈ ವಿಕ್ರಮ್ ಲ್ಯಾಂಡರ್ ಬರೋಬ್ಬರಿ 40 ದಿನಗಳ ಸುದೀರ್ಘ ಪಯಣದ ನಂತರ ದಕ್ಷಿಣ ಧ್ರುವದ ಮೇಲೆ ಯಾವುದೇ ಅಡೆತಡೆ ಇಲ್ಲದೆ ನಿಧಾನವಾಗಿ ಲ್ಯಾಂಡ್ ಆಗುವ ಮೂಲಕ ಇತಿಹಾಸ ನಿರ್ಮಿಸಿದೆ. ಗಗನಯಾತ್ರಿಯಾಗುವುದು ಹೇಗೆ ( How to become Astronaut )
ಈ ಕ್ಷಣವನ್ನು ಇಡೀ ಜಗತ್ತೇ ಕಣ್ತುಂಬಿಕೊಂಡಿದೆ. ಇಂದು ಭಾರತಕ್ಕೆ ಐತಿಹಾಸಿಕ ದಿನ. ಈ ಹೆಮ್ಮೆಯ ದಿನಕ್ಕಾಗಿ ಇಡೀ ದೇಶವೇ ಕಾಯುತ್ತಿತ್ತು. ಚಂದ್ರಯಾನ 3 ಯಶಸ್ವಿಯಾಗಲಿ ಎಂದು ಇಡೀ ಭಾರತ ಪ್ರಾರ್ಥನೆ ಮಾಡಿತ್ತು. ಕೋಟ್ಯಾಂತರ ಭಾರತೀಯರ ಕನಸು ನನಸಾಗಿದೆ.
ಇದುವರೆಗೂ ಚಂದ್ರನ ಅಂಗಳಕ್ಕೆ ರಷ್ಯಾ, ಅಮೆರಿಕ ಮತ್ತು ಚೀನಾ ಮಾತ್ರ ರೋವರ್ ಕಳುಹಿಸಿತ್ತು. ಆದರೆ, ಚಂದ್ರನ ದಕ್ಷಿಣ ಧ್ರುವಕ್ಕೆ ಯಾವ ರಾಷ್ಟ್ರವೂ ಕಾಲಿಟ್ಟಿರಲಿಲ್ಲ. ಈಗ ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗಿದೆ.
ಚಂದ್ರನ ಅಂಗಳಕ್ಕೆ ಇಳಿದ ಭಾರತದ ವಿಕ್ರಮ್ ಲ್ಯಾಂಡರ್ – ಭಾರತಕ್ಕೆ ಸಂಭ್ರಮದ ದಿನ – India’s Vikram lander lands on the moon – a day of celebration for India #ISRO #DRDO #Chandryaan3 #Chandryaanupdate #kannada #news #india #bengaluru #vikramlander #pragyanrover
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ