ಚಂದ್ರನ ಅಂಗಳಕ್ಕೆ ಇಳಿದ ಭಾರತದ ವಿಕ್ರಮ್ ಲ್ಯಾಂಡರ್ – ಭಾರತಕ್ಕೆ ಸಂಭ್ರಮದ ದಿನ

Team Newsnap
1 Min Read

ಬೆಂಗಳೂರು : ಕೊನೆಗೂ ಚಂದ್ರಲೋಕಕ್ಕೆ ಭಾರತ ಹೆಜ್ಜೆ ಇಟ್ಟಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಹೆಜ್ಜೆ ಇಟ್ಟ ಪ್ರಜ್ಞಾನ್​​ ರೋವರ್ ಬರೋಬ್ಬರಿ 40 ದಿನದ ಸುದೀರ್ಘ ಪಯಣದ ಬಳಿಕ ಸುರೀಕ್ಷಿತವಾಗಿ ಲ್ಯಾಂಡ್ ಆಗಿದೆ. ಈ ಐತಿಹಾಸಿಕ ಕ್ಷಣಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿ ಸಾಕ್ಷಿಯಾಗಿದ್ದರು ಬಹುನಿರೀಕ್ಷಿತ ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದಿದೆ.

ಪ್ರಜ್ಞಾನ್​​ ರೋವರ್ ಹೊತ್ತ ಈ ವಿಕ್ರಮ್ ಲ್ಯಾಂಡರ್ ಬರೋಬ್ಬರಿ 40 ದಿನಗಳ ಸುದೀರ್ಘ ಪಯಣದ ನಂತರ ದಕ್ಷಿಣ ಧ್ರುವದ ಮೇಲೆ ಯಾವುದೇ ಅಡೆತಡೆ ಇಲ್ಲದೆ ನಿಧಾನವಾಗಿ ಲ್ಯಾಂಡ್​​ ಆಗುವ ಮೂಲಕ ಇತಿಹಾಸ ನಿರ್ಮಿಸಿದೆ. ಗಗನಯಾತ್ರಿಯಾಗುವುದು ಹೇಗೆ ( How to become Astronaut )

chandryaan sucess india

ಈ ಕ್ಷಣವನ್ನು ಇಡೀ ಜಗತ್ತೇ ಕಣ್ತುಂಬಿಕೊಂಡಿದೆ. ಇಂದು ಭಾರತಕ್ಕೆ ಐತಿಹಾಸಿಕ ದಿನ. ಈ ಹೆಮ್ಮೆಯ ದಿನಕ್ಕಾಗಿ ಇಡೀ ದೇಶ‌‌ವೇ ಕಾಯುತ್ತಿತ್ತು. ಚಂದ್ರಯಾನ 3 ಯಶಸ್ವಿಯಾಗಲಿ‌ ಎಂದು ಇಡೀ ಭಾರತ ಪ್ರಾರ್ಥನೆ ಮಾಡಿತ್ತು. ಕೋಟ್ಯಾಂತರ ಭಾರತೀಯರ ಕನಸು ನನಸಾಗಿದೆ.

ಇದುವರೆಗೂ ಚಂದ್ರನ ಅಂಗಳಕ್ಕೆ ರಷ್ಯಾ, ಅಮೆರಿಕ ಮತ್ತು ಚೀನಾ ಮಾತ್ರ ರೋವರ್​ ಕಳುಹಿಸಿತ್ತು. ಆದರೆ, ಚಂದ್ರನ ದಕ್ಷಿಣ ಧ್ರುವಕ್ಕೆ ಯಾವ ರಾಷ್ಟ್ರವೂ ಕಾಲಿಟ್ಟಿರಲಿಲ್ಲ. ಈಗ ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಮೊದಲ ರಾಷ್ಟ್ರ ಎನ್ನುವ ಖ್ಯಾತಿಗೆ ಭಾರತ ಪಾತ್ರವಾಗಿದೆ.

ಚಂದ್ರನ ಅಂಗಳಕ್ಕೆ ಇಳಿದ ಭಾರತದ ವಿಕ್ರಮ್ ಲ್ಯಾಂಡರ್ – ಭಾರತಕ್ಕೆ ಸಂಭ್ರಮದ ದಿನ – India’s Vikram lander lands on the moon – a day of celebration for India #ISRO #DRDO #Chandryaan3 #Chandryaanupdate #kannada #news #india #bengaluru #vikramlander #pragyanrover

Share This Article
Leave a comment