October 18, 2024

Newsnap Kannada

The World at your finger tips!

CM

ಪತ್ರಕರ್ತರ ಬೇಡಿಕೆ ಈಡೇರಿಕೆಗೆ ಕ್ರಮ : ಸಿಎಂ

Spread the love

ಬೆಂಗಳೂರು : ಪತ್ರಕರ್ತರ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ಪತ್ರಕರ್ತರ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆಸಿ ಮನವಿ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.

ಇದೇ ವೇಳೆ ಜಾಹಿರಾತು ನೀತಿ, ಜಾಹೀರಾತು ತಾರತಮ್ಯ, ದರ ಪರಿಷ್ಕರಣೆ, ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಮಾಡಲಾಯಿತು.

ಪತ್ರಕರ್ತರನ್ನು ಯಶಸ್ವಿನಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು. ಪತ್ರಕರ್ತರ ಪಿಂಚಣಿಗೆ ಕಠಿಣ ಷರತ್ತು ವಿಧಿಸಿರುವುದನ್ನು ಸಡಿಲಿಸಿ, ಸರಳೀಕರಣ ಮಾಡಬೇಕು. ಈ ಮೊದಲಿದ್ದಂತೆ ಖಜಾನೆ ಮೂಲಕವೇ ಮಾಸಾಶನ ಪಾವತಿಯಾಗಬೇಕು ಎಂದು ಕೆಯುಡಬ್ಲ್ಯಜೆ ಅಧ್ಯಕ್ಷ ಶಿವಾನಂದ ತಗಡೂರು ಆಗ್ರಹಿಸಿದರು.

ತಾಲ್ಲೂಕು ಮಟ್ಟದಲ್ಲಿ ಪತ್ರಕರ್ತರ ಭವನ ನಿರ್ಮಾಣಕ್ಕೆ ಅನುದಾನ‌ ನೀಡಬೇಕು. ಸ್ಥಳೀಯ ಸಂಸ್ಥೆಗಳು, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪತ್ರಕರ್ತರಿಗೆ ನಿವೇಶನ/ಮನೆಗಳನ್ನು ಶೇ.50 ರಿಯಾಯಿತಿ ದರದಲ್ಲಿ ಕೊಡಬೇಕು ಎಂದು ಮನವಿ ಮಾಡಲಾಯಿತು.

ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ 100 ಕೋಟಿ ರೂ ಮೀಸಲಿಡಬೇಕು. ಜಿಲ್ಲಾ, ಪ್ರಾದೇಶಿಕ ಮತ್ತು ರಾಜ್ಯ ಮಟ್ಟದ ಪತ್ರಿಕೆಗಳಿಗೆ ಮತ್ತು ಮಾಧ್ಯಮಗಳಿಗೆ ಕ್ರಮಬದ್ದವಾಗಿ ಜಾಹೀರಾತು ನೀಡಬೇಕು ಎನ್ನುವ ಪ್ರಸ್ತಾಪ ವ್ಯಕ್ತವಾಯಿತು.
ಜಾಹೀರಾತುಗಳನ್ನು ಈ ಮೊದಲಿದ್ದಂತೆ ವಾರ್ತಾ ಇಲಾಖೆ ಮತ್ತು ಸರ್ಕಾರಿ ಏಜೆನ್ಸಿ ಮೂಲಕವೇ ನಿಭಾಯಿಸಬೇಕು. ಪತ್ರಿಕಾ ವಿತರಕರಿಗಾಗಿ ಹಿಂದೆ ಬಜೆಟ್ ನಲ್ಲಿ ಮೀಸಲಿಟ್ಟ 2 ಕೋಟಿ ಯಲ್ಲಿ ನಯಾ ಪೈಸೆ ಬಳಕೆಯಾಗಿಲ್ಲ. ಅದನ್ನು ಕಾರ್ಮಿಕ ಇಲಾಖೆ ಮೂಲಕ ನಿರ್ವಹಣೆ ಮಾಡಬೇಕು ಮತ್ತು ಪತ್ರಿಕಾ ವಿತರಕರ ಕ್ಷೇಮ ನಿಧಿ ಹೆಚ್ಚಿಸಬೇಕು ಎಂದು ಕೋರಲಾಯಿತು.IPS ಡಿ.ರೂಪಾ ಗೆ ಬಿಗ್ ಶಾಕ್: ಕೇಸ್ ರದ್ದು ಕೋರಿ ಹೈಕೋರ್ಟ್ ಗೆ ಸಲ್ಲಿಸಲಾಗಿದ್ದ ಅರ್ಜಿ ವಜಾ

ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ವಾರ್ತಾ ಮತ್ತು ಪ್ರಚಾರ ಇಲಾಖೆ ಕಾರ್ಯದರ್ಶಿ ಎನ್.ಜಯರಾಮ್, ಆಯುಕ್ತ ಹೇಮಂತ ನಿಂಬಾಳ್ಕರ್, ಪತ್ರಕರ್ತರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Copyright © All rights reserved Newsnap | Newsever by AF themes.
error: Content is protected !!