IPS ಡಿ.ರೂಪಾ ಗೆ ಬಿಗ್ ಶಾಕ್: ಕೇಸ್ ರದ್ದು ಕೋರಿ ಹೈಕೋರ್ಟ್ ಗೆ ಸಲ್ಲಿಸಲಾಗಿದ್ದ ಅರ್ಜಿ ವಜಾ

Team Newsnap
1 Min Read
Not to make a defamatory statement : Court ban for Rupa - Big relief for Rohini ಮಾನಹಾನಿ ಹೇಳಿಕೆ ನೀಡದಂತೆ ಡಿ. ರೂಪಾಗೆ ಕೋರ್ಟ್ ನಿರ್ಬಂಧ - ರೋಹಿಣಿಗೆ ಬಿಗ್ ರಿಲೀಫ್

IAS ರೋಹಿಣಿ ಸಿಂಧೂರಿ ಹಾಗೂ IPS ಡಿ.ರೂಪಾ ಮೌದ್ಗಿಲ್ ನಡುವಿನ ಶೀತಲ ಸಮರಕ್ಕೆ ಮಾನಹಾನಿ ಕೇಸ್ ಬ್ರೇಕ್ ಹಾಕಿತ್ತು. ಈ ಕೇಸ್ ನಲ್ಲಿ ಡಿ.ರೂಪಾ ಜಾಮೀನು ಪಡೆದಿದ್ದರು. ಕೇಸ್ ರದ್ದು ಕೋರಿ ಹೈಕೋರ್ಟ್ ಗೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಪೋಸ್ಟ್ ಮಾಡಿದ್ದ ಸಂಬಂಧ ಐಪಿಎಸ್ ಅಧಿಕಾರಿ ಡಿ.ರೂಪಾ ವಿರುದ್ಧ ಮಾನನಷ್ಟ ಮೊಕದ್ದಮ್ಮೆ ದಾಖಲಿಸಲಾಗಿತ್ತು.

ರೋಹಿಣಿ ಸಿಂಧೂರಿ ದಾಖಲಿಸಿದ್ದ ಮಾನನಷ್ಟ ಪ್ರಕರಣದಲ್ಲಿ ಡಿ.ರೂಪಾಗೆ ಕೋರ್ಟ್ ಸಮನ್ಸ್ ಕೂಡ ನೀಡಿತ್ತು. ಆಗ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿದ್ದ ಅವರು, ಪ್ರಕರಣದಲ್ಲಿ ಜಾಮೀನು ಪಡೆದಿದ್ದರು.

ಇಂದು ಡಿ.ರೂಪಾ ಮಾನನಷ್ಟ ಪ್ರಕರಣ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠವು, ಅರ್ಜಿ ರದ್ದುಗೊಳಿಸಲು ನಕಾರ ವ್ಯಕ್ತಪಡಿಸಿ, ವಜಾಗೊಳಿಸಿದೆ. ಈ ಮೂಲಕ ಐಪಿಎಸ್ ಅಧಿಕಾರಿ ಡಿ.ರೂಪಾಗೆ ಬಿಗ್ ಶಾಕ್ ನೀಡಲಾಗಿದೆ.

Share This Article
Leave a comment