ಬಂಕ್​ಗೆ ನುಗ್ಗಿ 10 ಲಕ್ಷ ರೂ. ಮೌಲ್ಯದ ಪೆಟ್ರೋಲ್​, ಡೀಸೆಲ್​ ರಸ್ತೆಗೆ ಹರಿಬಿಟ್ಟ ದುಷ್ಕರ್ಮಿಗಳು

Team Newsnap
1 Min Read

ರಾತ್ರಿ ಬಂಕ್​ಗೆ ನುಗ್ಗಿ 10 ಲಕ್ಷ ರೂ. ಮೌಲ್ಯದ ಪೆಟ್ರೋಲ್​, ಡೀಸೆಲ್​ ರಸ್ತೆಗೆ ಕಿಡಿಗೇಡಿಗಳ ಹರಿಬಿಟ್ಟ ಘಟನೆ ಪಾಂಡವಪುರ ತಾಲ್ಲೂಕಿನ ಬೇಬಿ ಗ್ರಾಮದ ಬಳಿಯ ಇಂಡಿಯನ್ ಪೆಟ್ರೋಲ್​ ಬಂಕ್​ನಲ್ಲಿ ನಡೆದಿದೆ.

ನಿನ್ನೆ ರಾತ್ರಿ ಬಂಕ್​ನ ಸಿಬ್ಬಂದಿ, ರಾತ್ರಿ ಊಟಕ್ಕೆ ತೆರಳಿದ ಸಮಯದಲ್ಲಿ ಕಿಡಿಗೇಡಿಗಳು ಪೆಟ್ರೋಲ್ ಹಾಗೂ ಡೀಸೆಲ್ ಪಂಪ್​ ಓಪನ್​ ಮಾಡಿ ಹೊರಗೆ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕಳೆದ ಎರಡು ತಿಂಗಳ ಹಿಂದೆಯಷ್ಟೆ ಪೆಟ್ರೋಲ್ ಬಂಕ್ ಶುರುವಾಗಿದೆ ಎನ್ನಲಾಗಿದೆ. ಈ ನಡುವೆ ಎಂಟು ಸಾವಿರ ಲೀಟರ್ ಪೆಟ್ರೋಲ್ ಹಾಗೂ ಎರಡು ಸಾವಿರ ಲೀಟರ್ ಡೀಸೆಲ್ ಸಂಪೂರ್ಣ ನಾಶವಾಗಿದೆ. .

ಭಸ್ತಿರಂಗಪ್ಪ ಎಂಬುವವರಿಗೆ ಸೇರಿದ ಪೆಟ್ರೋಲ್ ಬಂಕ್​ನಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಘಟನೆ ಸಂಬಂಧ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a comment