December 19, 2024

Newsnap Kannada

The World at your finger tips!

WhatsApp Image 2023 07 30 at 4.43.12 PM

ಮದ್ರಾಸ್ ಐ : ಲಕ್ಷಣಗಳು ಮುನ್ನೆಚ್ಚರಿಕೆ ಮತ್ತು ರಕ್ಷಣೆ

Spread the love

ಸಾಮಾನ್ಯವಾಗಿ ಕಣ್ಣು ಕೆಂಪಾಗಿ, ಬಿಳಿ ಪದರಗಳು ಕಾಣಿಸಿಕೊಂಡು, ತುರಿಕೆಯೊಂದಿಗೆ ನೀರು ಸುರಿಯುವುದನ್ನು ಮದ್ರಾಸ್ ಐ ಎನ್ನುತ್ತೇವೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು “ಕಾಂಜಂಕ್ಟಿವಿಟಿಸ್” ಎಂದೂ ಕರೆಯುತ್ತಾರೆ. ಇದು ಕಾಂಜಂಕ್ಟಿವಾ ಉರಿಯೂತವಾಗಿದೆ, ಇದು ತೆಳುವಾದ, ಪಾರದರ್ಶಕ ಅಂಗಾಂಶದ ಪದರವಾಗಿದ್ದು ಅದು ಕಣ್ಣಿನ ಬಿಳಿ ಭಾಗವನ್ನು ಆವರಿಸುತ್ತದೆ ಮತ್ತು ಕಣ್ಣುರೆಪ್ಪೆಗಳ ಒಳ ಮೇಲ್ಮೈಯನ್ನು ಬಾಧಿಸುತ್ತದೆ.

ಕಾಂಜಂಕ್ಟಿವಿಟಿಸ್ ಎರಡು ರೀತಿಯಲ್ಲಿ ಉಂಟಾಗುತ್ತದೆ. ಇದು ಬ್ಯಾಕ್ಟೀರಿಯಾ ಅಥವಾ ವೈರಸ್‌ನಿಂದ ಉಂಟಾಗುತ್ತದೆ. ಮದ್ರಾಸ್ ಐ ಸೋಂಕು ಜನರಲ್ಲಿ ವೇಗವಾಗಿ ಹರಡುತ್ತದೆ. ಇದು ಕಣ್ಣಿನಿಂದ ಸ್ರವಿಸುವ ಮೂಲಕ ಹರಡುತ್ತದೆ. ಕಾಂಜಂಕ್ಟಿವಿಟಿಸ್‌ನಿಂದ ಬಳಲುತ್ತಿರುವ ಜನರ ಸಾಮಾನ್ಯ ಅಭ್ಯಾಸವೆಂದರೆ ಅವರ ಕಣ್ಣನ್ನು ಸ್ಪರ್ಶಿಸುವುದು. ಇದು ಸ್ರವಿಸುವಿಕೆಯೊಂದಿಗೆ ಸಂಪರ್ಕಕ್ಕೆ ಬರುವ ಇನ್ನೊಬ್ಬ ವ್ಯಕ್ತಿ ಅಥವಾ ವಸ್ತುವಿಗೆ ಸಾಂಕ್ರಾಮಿಕ ವೈರಸ್ ಅಥವಾ ಬ್ಯಾಕ್ಟೀರಿಯಾದ ಹರಡುವಿಕೆಗೆ ಕಾರಣವಾಗಬಹುದು.

.ಮದ್ರಾಸ್‌ ಐ ಸೋಂಕು ಅಂಟುರೋಗವಿದ್ದಂತೆ. ಒಬ್ಬರಿಂದ ಮತ್ತೊಬ್ಬರಿಗೆ ಸಾಂಕ್ರಾಮಿಕದ ರೀತಿಯಲ್ಲಿ ಹರಡುತ್ತದೆ.

ಲಕ್ಷಣಗಳು:
ಕಣ್ಣು ಕೆಂಪಗಾಗುವುದು
ಕಣ್ಣಿನಿಂದ ನೀರು ಸೋರುವುದು
ಕಣ್ಣಿನ ತುರಿಕೆ
ನಿರಂತರವಾಗಿ ಕಣ್ಣು ನೋವು, ಚುಚ್ಚಿದಂತಹ ಅನುಭವ
ದೃಷ್ಟಿ ಮಂಜಾಗುವುದು
ಬೆಳಕು ನೋಡಲು ಸಾಧ್ಯವಾಗದ ಸ್ಥಿತಿ
ಕಣ್ಣಿನ ಎರಡು ರಪ್ಪೆಗಳಲ್ಲಿ ಕೀವು ಮಿಶ್ರಿತದಿಂದ ಕೂಡಿರುವುದು.

ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮ:
ಸ್ವಚ್ಛತೆ
ಸೋಂಕು ಇರುವ ವ್ಯಕ್ತಿಯ ಕಣ್ಣಿನ ನೇರ ಸಂಪರ್ಕ ಮಾಡಬಾರದು
ಮದ್ರಾಸ್ ಐ ಸೋಂಕಿತ ವ್ಯಕ್ತಿ ಬಳಸುವ ಕರವಸ್ತ್ರ, ಇತರ ವಸ್ತುಗಳನ್ನು ಬಳಸಬಾರದು
ಆಗಾಗ್ಗೆ ಸೋಪು ನೀರಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು
ಸೋಂಕಿತ ವ್ಯಕ್ತಿಗೆ ಜ್ವರ, ಶೀತ, ಕೆಮ್ಮು ಇದ್ದಲ್ಲಿ ತಕ್ಷಣ ಚಿಕಿತ್ಸೆ ಪಡೆಯಬೇಕು.

ಈ ರೀತಿ ಮಾಡಬಾರದು:
ಪದೇ ಪದೇ ಕಣ್ಣುಗಳನ್ನು ಮುಟ್ಟಬೇಡಿ
ಸ್ವಯಂಚಿಕಿತ್ಸಾ ವಿಧಾನಗಾನ್ನು ಅನುಸರಿಸಬೇಡಿ
ಸೋಂಕಿತ ವ್ಯಕ್ತಿಯ ಸನಿಹದಿಂದ ದೂರವಿರಿ
ಸೋಂಕಿತ ವ್ಯಕ್ತಿ ಬಳಸುವ ವಸ್ತು ಮುಟ್ಟಬೇಡಿ

ಮನೆ ಮದ್ದು :

ಕಣ್ಣುಗಳು ಕೆಂಪಾಗಿ ಉರಿಯುತ್ತಿದ್ದರೆ ಅಲೋವೆರಾ ಜೆಲ್‌ ಅನ್ನು ರೆಪ್ಪೆಗಳ ಮೇಲೆ ಲೇಪಿಸಿ 15 ನಿಮಿಷದ ನಂತರ ನೀರಿನಿಂದ ತೊಳೆಯಿರಿ. ಧನಿಯಾ ಬೀಜವನ್ನು ರಾತ್ರಿ ನೀರಲ್ಲಿ ನೆನೆಸಿ ಬೆಳಗ್ಗೆ ಆ ನೀರನ್ನು ಸೇವಿಸಿದರೆ ಪಿತ್ತ ಹೆಚ್ಚಾಗಿ ಮದ್ರಾಸ್‌ ಐ ಆಗಿದ್ದರೆ ಬೇಗ ಕಡಿಮೆಯಾಗುತ್ತದೆ. ಐದು ತುಳಸಿ ಎಲೆಗಳನ್ನು ಬಿಸಿ ನೀರಲ್ಲಿ ನೆನೆಸಿ ಆ ನೀರಲ್ಲಿ ಪದೇ ಪದೆ ಕಣ್ಣುಗಳನ್ನು ತೊಳೆದರೆ ಮದ್ರಾಸ್‌ ಐ ಬೇಗ ಕಡಿಮೆಯಾಗುತ್ತದೆ. ಎರಡು ಚಮಚ ಅರಿಶಿನವನ್ನು ಒಂದು ಕಪ್‌ ಬಿಸಿ ನೀರಿಗೆ ಹಾಕಿ. ಹತ್ತಿಯನ್ನು ಆ ನೀರಲ್ಲಿ ಅದ್ದಿ ಕಣ್ಣುಗಳ ಮೇಲಿಟ್ಟರೆ ಕಣ್ಣಿನ ಸೋಂಕು ಕಡಿಮೆಯಾಗುತ್ತದೆ. ತಣ್ಣೀರಿನಲ್ಲಿ ನೆನೆಸಿದ ಸೌತೆಕಾಯಿ ತುಂಡನ್ನು ಕಣ್ಣಿನ ಮೇಲಿಟ್ಟರೆ ಉರಿ, ನೋವು ಕಡಿಮೆಯಾಗುತ್ತವೆ. ಪಾಲಾಕ್‌ ಮತ್ತು ಕ್ಯಾರೆಟ್‌ ಹಾಕಿ ಮಾಡಿದ ಜ್ಯೂಸ್‌ ಅನ್ನು ಜ್ಯೂಸ್‌ ಪ್ರತಿ ದಿನ ಸೇವಿಸಿದರೆ ಕಣ್ಣಿನ ಆರೋಗ್ಯ ಹೆಚ್ಚಾಗುತ್ತದೆ. ಬಿಸಿ ನೀರಿಗೆ ಸಮ ಪ್ರಮಾಣದ ಅರಿಶಿನದ ಪುಡಿ ಮತ್ತು ಬೇವಿನ ಪುಡಿ ಸೇರಿಸಿ ಊಟದ ನಂತರ ಕುಡಿದರೆ ಎಲ್ಲಾ ತರಹದ ಕಣ್ಣಿನ ಸೋಂಕು ಶಮನವಾಗುತ್ತದೆ. ಪದೇ ಪದೆ ಕಣ್ಣಿನ ಸುತ್ತಲೂ ಕೊಬ್ಬರಿ ಎಣ್ಣೆ ಹಚ್ಚುತ್ತಿದ್ದರೆ ಉಪಯೋಗವಿದೆ.

Copyright © All rights reserved Newsnap | Newsever by AF themes.
error: Content is protected !!