ಚಾಮರಾಜನಗರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿ

Team Newsnap
1 Min Read

ಚಾಮರಾಜನಗರ: ಚಾರ್ಜ್ ಮಾಡಿ ಮನೆ ಮುಂದೆ ನಿಲ್ಲಿಸಿದ್ದ ಎಲೆಕ್ಟ್ರಿಕ್ ಬೈಕ್ ಸ್ಟಾರ್ಟ್ ಮಾಡಿದ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡು ಧಗಧಗನೇ ಹೊತ್ತಿ ಉರಿದಿದೆ. ಈ ಘಟನೆ ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಭಾನುವಾರ ಜರುಗಿದೆ.

ಕೊತ್ತಲವಾಡಿ ಗ್ರಾಮದ ಬಸವರಾಜಪ್ಪ ಎಂಬುವರಿಗೆ ಸೇರಿದ ಬೈಕ್‌ ಬೆಂಕಿಗೆ ಆಹುತಿ ಆಗಿದೆ.

ಚಾರ್ಜ್ ಮಾಡಿದ ನಂತರ ಬೈಕ್ ಸ್ಟಾರ್ಟ್ ಮಾಡಿದ ವೇಳೆ ಹೊಗೆ ಕಾಣಿಸಿಕೊಂಡು ಕ್ಷಣಾರ್ಧದಲ್ಲೇ ದಿಢೀ‌ರ್ ಬೆಂಕಿಯ ಜ್ವಾಲೆ ಕಾಣಿಸಿಕೊಂಡು ಹೊತ್ತಿ ಉರಿದಿದೆ.ಮದ್ರಾಸ್ ಐ : ಲಕ್ಷಣಗಳು ಮುನ್ನೆಚ್ಚರಿಕೆ ಮತ್ತು ರಕ್ಷಣೆ

ಕೂಡಲೇ, ಕೆಲ ಯುವಕರು ಸೇರಿ ಉರಿಯುತ್ತಿದ್ದ ಬೈಕ್‌ಗೆ ನೀರು ಹಾಯಿಸಿ ಬೆಂಕಿ ನಂದಿಸಿದ್ದಾರೆ.

Share This Article
Leave a comment