ಮನದಲಿ ಮನೆಮಾಡಿ ನಿಂದಿರುವೆ
ನಿಮ್ಮ ನೋಡಲು ಕಂಗಳು ಕಾತರಿಸುತಿವೆ
ಅಂಬಾರಿಯಾದ ಹೆಗಲ ಬಯಸಿದೆ
ಅಪ್ಪಾ ಎಲ್ಲಿರುವೆ?
ನಿಮ್ಮ ಮೊಗಲಗಲದೆ ಆ ನಗುವು
ರಾಜನವೋಲ್ ನಡೆವ ಆ ನಡೆಯು
ನೋಡಲೆರಡು ಕಣ್ಣು ಸಾಲದು
ಅಪ್ಪಾ ಎಲ್ಲಿರುವೆ?
ಬಂಧು ಬಳಗವ ಆದರಿಪ ಪರಿಯು
ಸತ್ಕರಿಪ ನಿಮ್ಮ ಗುಣಧರ್ಮವು
ನೆನಪಾಗುತಿವೆ ಚಣಚಣವೂ
ಅಪ್ಪಾ ಎಲ್ಲಿರುವೆ?
ಮಂಕಾಗಿದೆ ಮನ, ಮುದುಡಿದೆ ಈ ಜೀವ
ಕಂಗಳು ತೊಯ್ದಿವೆ, ಮರೆತಿಹೆ ನಗಲು
ಮಿಡಿಯುತಿಗೆ ನಿನ್ನ ತೇಜ ನೋಡಲು
ಅಪ್ಪಾ ಎಲ್ಲಿರುವೆ?
- ₹450 ಕೋಟಿ ವಂಚನೆ ಹಗರಣ: ಟೀಂ ಇಂಡಿಯಾ ಆಟಗಾರ ಶುಭಮನ್ ಗಿಲ್ಗೆ CID ಸಮನ್ಸ್
- ಮನು ಭಾಕರ್, ಡಿ ಗುಕೇಶ್ ಸೇರಿದಂತೆ ನಾಲ್ವರಿಗೆ 2024ರ ಖೇಲ್ ರತ್ನ ಪ್ರಶಸ್ತಿ
- 2025ರ ಕರ್ನಾಟಕ SSLC ಮಾದರಿ ಪ್ರಶ್ನೆಪತ್ರಿಕೆ ಪ್ರಕಟ
- KPSC ಮೂಲಕ ಕೃಷಿ ಇಲಾಖೆಯಲ್ಲಿ 945 ಹುದ್ದೆಗಳ ನೇಮಕಾತಿ: ಅರ್ಜಿ ಆಹ್ವಾನ
- 1.20 ಲಕ್ಷ ಲಂಚ ಸ್ವೀಕಾರ : ಲೋಕಾಯುಕ್ತ ಬಲೆಗೆ ಬಿದ್ದ ನೀರಾವರಿ ನಿಗಮದ ಅಧಿಕಾರಿಗಳು
- ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವಾಗ ಕೆರೆಗೆ ಉರುಳಿದ ಕಾರು : ಇಬ್ಬರ ಸಾವು
More Stories
ನಮ್ಮ ಸಮೃದ್ಧ ಚಾಮರಾಜನಗರದ ಮಹದೇಶ್ವರ ಮಲೆಯ ಸುತ್ತಾಮುತ್ತಾ
ತಾಯ್ತನ ಮತ್ತು ಗಟ್ಟಿತನ
ಶತಮಾನ ಕಂಡ ಸಂತ: “ಜ್ಞಾನಯೋಗಾಶ್ರಮದ ಪರಮಪೂಜ್ಯ ಸಿದ್ದೇಶ್ವರ ಮಹಾಸ್ವಾಮೀಜಿಗಳು”.