ಅಪ್ಪಾ…. ಎಲ್ಲಿರುವೆ?

Team Newsnap
0 Min Read
fathers day 2023
WhatsApp Image 2023 06 18 at 11.38.06 AM 1
ರಾಜಲಕ್ಷ್ಮಿ ಮುರಳೀಧರ್, ಉಡುಪಿ

ಮನದಲಿ ಮನೆಮಾಡಿ ನಿಂದಿರುವೆ
ನಿಮ್ಮ ನೋಡಲು ಕಂಗಳು‌ ಕಾತರಿಸುತಿವೆ
ಅಂಬಾರಿಯಾದ ಹೆಗಲ ಬಯಸಿದೆ
ಅಪ್ಪಾ ಎಲ್ಲಿರುವೆ?

ನಿಮ್ಮ ಮೊಗಲಗಲದೆ ಆ ನಗುವು
ರಾಜನ‌ವೋಲ್ ನಡೆವ ಆ ನಡೆಯು
ನೋಡಲೆರಡು ಕಣ್ಣು ಸಾಲದು
ಅಪ್ಪಾ ಎಲ್ಲಿರುವೆ?

ಬಂಧು ಬಳಗವ ಆದರಿಪ ಪರಿಯು
ಸತ್ಕರಿಪ ನಿಮ್ಮ‌ ಗುಣಧರ್ಮವು
ನೆನಪಾಗುತಿವೆ ಚಣಚಣವೂ
ಅಪ್ಪಾ ಎಲ್ಲಿರುವೆ?

ಮಂಕಾಗಿದೆ ಮನ, ಮುದುಡಿದೆ ಈ ಜೀವ
ಕಂಗಳು ತೊಯ್ದಿವೆ, ಮರೆತಿಹೆ ನಗಲು
ಮಿಡಿಯುತಿಗೆ ನಿನ್ನ ತೇಜ ನೋಡಲು
ಅಪ್ಪಾ ಎಲ್ಲಿರುವೆ?

Share This Article
Leave a comment