ಅಕ್ಕಿ ಕೊಡಲ್ಲ :ಎರಡು ರಾಜ್ಯಗಳ ಸ್ಪಷ್ಟನಿಲುವು – ಸರ್ಕಾರಕ್ಕೆ ತಲೆನೋವು

Team Newsnap
1 Min Read
Akki Kodalla: Clear stand of two states - a headache for the government ಅಕ್ಕಿ ಕೊಡಲ್ಲ :ಎರಡು ರಾಜ್ಯಗಳ ಸ್ಪಷ್ಟನಿಲುವು - ಸರ್ಕಾರಕ್ಕೆ ತಲೆನೋವು

ಬೆಂಗಳೂರು: ಅನ್ನಭಾಗ್ಯ ಯೋಜನೆಯನ್ನು ಜಾರಿ ಮಾಡಿದ ರಾಜ್ಯ ಸರ್ಕಾರ ಈಗ ಸಂಕಷ್ಟಕ್ಕೆ ಸಿಲುಕಿದೆ. ಅಕ್ಕಿ ಉತ್ಪಾದಿಸುವ ರಾಜ್ಯಗಳ ಪರ ಹೋದರೂ ಸಹಕಾರ ಸಿಗುವುದು ಅನುಮಾನವಾಗಿದೆ

ನಾಲ್ಕು ರಾಜ್ಯಗಳ ಜತೆ ಸರ್ಕಾರ ಅಕ್ಕಿ ಖರೀದಿ ಕುರಿತು ಮಾತುಕತೆ ನಡೆಸಿದೆ. ಈ ಪೈಕಿ ರಾಜ್ಯಕ್ಕೆ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಪಂಜಾಬ್, ತೆಲಂಗಾಣ ರಾಜ್ಯಗಳು ಈಗಾಗಲೇ ತಿಳಿಸಿದೆ.

ಛತ್ತೀಸ್‍ಗಢ ರಾಜ್ಯದಿಂದ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಸಿಗುವ ಭರವಸೆ ನೀಡಿದರೂ ಅಂದುಕೊಂಡಷ್ಟು ಪೂರೈಕೆ ಮಾಡುವುದು ಅನುಮಾನ ಎನ್ನಲಾಗುತ್ತಿದೆ.

ಸದ್ಯ ನಮ್ಮ ರಾಜ್ಯಕ್ಕೆ ಮಾಸಿಕ 2.28 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ಛತ್ತೀಸ್‌ಗಢ ಕೊಡುತ್ತೇವೆ ಎಂದು ಹೇಳಿರುವುದು 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾತ್ರ. ಆದರೆ ಉಳಿದ 1 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊರತೆ ಎದುರಾಗಲಿದೆ. ಅಕ್ಕಿ ಖರೀದಿ ಸಂಬಂಧ ಆಂಧ್ರಪ್ರದೇಶ ಸರ್ಕಾರದ ಜೊತೆಯೂ ಮಾತುಕತೆ ನಡೆಸಿದ್ದು, ಇಂದು ಅಥವಾ ನಾಳೆ ಉತ್ತರ ಬರಲಿದೆ.

ಛತ್ತೀಸ್‍ಗಡ ರಾಜ್ಯದ ಅಕ್ಕಿಯೂ ಸ್ವಲ್ಪ ದುಬಾರಿ ಮತ್ತು ಸಾಗಣೆ ವೆಚ್ಚವೂ ಹೆಚ್ಚಾಗುತ್ತದೆ. ಇದು ರಾಜ್ಯ ಸರ್ಕಾರಕ್ಕೆ ಇನ್ನಿಲ್ಲದ ತಲೆಬಿಸಿಗೆ ಕಾರಣವಾಗಿದೆ.ದೇವನಹಳ್ಳಿ ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರುಪಾಲು

ಕಳೆದ ವರ್ಷದವರೆಗೆ 1 ಕೆಜಿ ಅಕ್ಕಿಗೆ ಕೇಂದ್ರ ಸರ್ಕಾರ 34.28 ರೂ. ಸಬ್ಸಿಡಿ ನೀಡಿದ್ದರೆ, ರಾಜ್ಯ ಸರ್ಕಾರಗಳು 2 ಕೆಜಿ ನೀಡುತ್ತಿತ್ತು. ಈ ವರ್ಷದ ಜನವರಿಯಿಂದ ರಾಜ್ಯ ಸರ್ಕಾರದ ಯಾವುದೇ ಸಬ್ಸಿಡಿ ಇಲ್ಲದೇ ಕೇಂದ್ರ ಸರ್ಕಾರ ಪೂರ್ಣ ಪ್ರಮಾಣದಲ್ಲಿ 1 ಕೆಜಿ ಅಕ್ಕಿಯನ್ನು ಬಡವರಿಗೆ ಉಚಿತವಾಗಿ ನೀಡಲು ಆರಂಭಿಸಿದೆ.

Share This Article
Leave a comment