December 25, 2024

Newsnap Kannada

The World at your finger tips!

festive , god , mandya

Hemagiri's Kalyanavenkataramana Brahmarathotsava: Thousands of Devotees Participated ಹೇಮಗಿರಿಯ ಕಲ್ಯಾಣವೆಂಕಟರಮಣನ ಬ್ರಹ್ಮರಥೋತ್ಸವ : ಸಾವಿರಾರು ಭಕ್ತಾದಿಗಳು ಭಾಗಿ

ಹೇಮಗಿರಿಯ ಕಲ್ಯಾಣವೆಂಕಟರಮಣನ ಬ್ರಹ್ಮರಥೋತ್ಸವ : ಸಾವಿರಾರು ಭಕ್ತಾದಿಗಳು ಭಾಗಿ

Spread the love

ಕೃಷ್ಣರಾಜಪೇಟೆ ತಾಲ್ಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೃಗು ಮಹರ್ಷಿಗಳ ತಪೋಭೂಮಿ ಹೇಮಗಿರಿಯ ಕಲ್ಯಾಣ ವೆಂಕಟರಮಣಸ್ವಾಮಿ ಯವರ ಬ್ರಹ್ಮರಥೋತ್ಸವವು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.

ಸಾಂಪ್ರದಾಯಿಕ ಪೇಟ ಧರಿಸಿ ನಾದಸ್ವರದ ಮೆರವಣಿಗೆಯ ಮೂಲಕ ಶ್ರೀ ರಥದ ಬಳಿ ಆಗಮಿಸಿ ಶ್ರೀರಥದಲ್ಲಿ ವಿರಾಜಮಾನವಾಗಿದ್ದ ಉತ್ಸವಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದ ಸಚಿವ ಡಾ.ನಾರಾಯಣಗೌಡ ಚಾಲನೆ ನೀಡಿದರು.ಸುಮಲತಾ – ಪುಟ್ಟರಾಜು ವಾಕ್ ಸಮರ : ಲೀಡರ್ ಆಗಬೇಕಾದರೆ ಜೆಡಿಎಸ್ ವಿರುದ್ದ ಮಾತನಾಡಲಿ : ಸಿಎಸ್ ಪಿ 

ಜಾತ್ರೆ ರಥೋತ್ಸವಗಳು ನಮ್ಮ ಸಂಸ್ಕೃತಿಯ ಪ್ರತಿಬಿಂಬವಾಗಿವೆ. ಹಬ್ಬದ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಭಾಗವಹಿಸುವುದರಿಂದ ಸ್ನೇಹ ಸಹಬಾಳ್ವೆಯು ಹೆಚ್ಚಾಗುವ ಮೂಲಕ ನೆಮ್ಮದಿಯ ಜೀವನಕ್ಕೆ ನಾಂಧಿಯಾಗಲಿದೆ ಎಂದು ಸಚಿವ ನಾರಾಯಣಗೌಡ ಹೇಳಿದರು.

ತಹಶೀಲ್ದಾರ್ ಎಂ.ವಿ.ರೂಪ ಶ್ರೀ ಕಲ್ಯಾಣವೆಂಕಟರಮಣ ಸ್ವಾಮಿಯವರ ಬ್ರಹ್ಮರಥೋತ್ಸವ ಹಾಗೂ ಹೇಮಗಿರಿ ಜಾತ್ರೆಯ ನೇತೃತ್ವ ವಹಿಸಿದ್ದರು.

ಬಂಡಿಹೊಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಸುನಿಲ್, ಕಸಬಾ ಹೋಬಳಿಯ ರಾಜಸ್ವನಿರೀಕ್ಷಕಿ ಚಂದ್ರಕಲಾ, ಗ್ರಾಮಲೆಕ್ಕಾಧಿಕಾರಿ ಪೂಜಾ, ಗ್ರೇಡ್-೨ ತಹಶೀಲ್ದಾರ್ ವಿಖಾರ್ ಅಹಮದ್, ಮಂಡ್ಯ ಜಿಲ್ಲಾ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ಮುಖಂಡರಾದ ಬಂಡಿಹೊಳೆ ಅಶೋಕ್, ಗದ್ದೆಹೊಸೂರು ಮಂಜೇಗೌಡ, ರಾಮೇಗೌಡ, ಕುಪ್ಪಹಳ್ಳಿ ಶೇಷಾದ್ರಿ, ಲಕ್ಷ್ಮೀಪುರ ಕುಮಾರಸ್ವಾಮಿ ಸೇರಿದಂತೆ ಸಾವಿರಾರು ಭಕ್ತಾದಿಗಳು ಬ್ರಹ್ಮರಥೋತ್ಸವದಲ್ಲಿ ಭಾಗವಹಿಸಿ ಶ್ರೀರಥದ ಕಳಸಕ್ಕೆ ಬಾಳೆಹಣ್ಣು ಜವನವನ್ನು ಎಸೆದು ಭಕ್ತಿಬಾವ ಪ್ರದರ್ಶಿಸಿದರು.

ರಥೋತ್ಸವದ ಸಂಭ್ರಮಕ್ಕೆ ಜಾನಪದ ಕಲಾತಂಡಗಳು ವಿಶೇಷ ರಂಗು ತಂದವು, ವೀರಭದ್ರ ನೃತ್ಯ, ಪೂಜಾ, ಪಟಕುಣಿತ ಹಾಗೂ ಡೊಳ್ಳು ಕುಣಿತವು ನೆರೆದಿದ್ದ ಭಕ್ತರನ್ನು ಆಕರ್ಷಿಸಿತು..ಹೇಮಗಿರಿ ಬೆಟ್ಟದ ಮೇಲೆ ನೆಲೆಸಿರುವ ಶ್ರೀ ರಂಗನಾಥಸ್ವಾಮಿಯ ದರ್ಶನ ಪಡೆದ ಭಕ್ತರು ಪುಳಕಿತರಾದರು.

ಪಶ್ಚಿಮವಾಹಿನಿಯಾಗಿ ಹೇಮಗಿರಿ ಬೆಟ್ಟದ ತಪ್ಪಲಿನಲ್ಲಿ ಹರಿಯುತ್ತಿರುವ ಹೇಮಾವತಿ ನದಿಯಲ್ಲಿ ಫೆಬ್ರವರಿ ೧ ರಂದು ರಾತ್ರಿ ೮ ಗಂಟೆಗೆ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ ಯವರ ಉತ್ಸವಮೂರ್ತಿಗಳ ತೆಪ್ಪೋತ್ಸವವು ಸಡಗರ ಸಂಭ್ರಮದಿಂದ ಬಾಣಬಿರುಸುಗಳ ಪ್ರದರ್ಶನ ಹಾಗೂ ಬಣ್ಣಬಣ್ಣದ ವಿದ್ಯುದ್ಧೀಪಗಳ ಬೆಳಕಿನಲ್ಲಿ ನಡೆಯಲಿದ್ದು ತೆಪ್ಪೋತ್ಸವ ಕಾರ್ಯಕ್ರಮಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಹಾಗೂ ಬಂಡಿಹೊಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾರ್ವಜನಿಕರು ಭಾಗವಹಿಸಬೇಕು ಎಂದು ತಹಶೀಲ್ದಾರ್ ಎಂ.ವಿ.ರೂಪ ಮನವಿ ಮಾಡಿದರು.

ಈ ಬಾರಿ ರಾಸುಗಳ ಜಾತ್ರೆಯನ್ನು ತಾಲ್ಲೂಕು ಹಾಗೂ ಜಿಲ್ಲಾಡಳಿತವು ನಿಷೇಧಿಸಿದ್ದ ಹಿನ್ನೆಲೆಯಲ್ಲಿ ಜಾತ್ರೆಯ ರಂಗು ಕಡಿಮೆಯಾಗಿತ್ತು.

Copyright © All rights reserved Newsnap | Newsever by AF themes.
error: Content is protected !!