February 20, 2026

Newsnap Kannada

The World at your finger tips!

mandya nagarasabha

ಮಂಡ್ಯ ನಗರಸಭೆಯಿಂದ ದಾಳಿ: 364 ಕೆ.ಜಿ ಪ್ಲಾಸ್ಟಿಕ್ ವಶ -23820 ರು ದಂಡ

Spread the love

ಮಂಡ್ಯ ನಗರಸಭೆ‌ ವತಿಯಿಂದ ನಗರದ ಪೇಟೆ ಬೀದಿಯಲ್ಲಿ‌ರುವ ಅಂಗಡಿಗಳು ಹಾಗೂ ಬೀದಿ ‌ಬದಿ ವ್ಯಾಪಾರದ ಅಂಗಡಿಗಳ ಮೇಲೆ‌ ದಾಳಿ‌ ನಡೆಸಿ 364 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ ಗಳನ್ನು ‌ವಶ ಪಡಿಸಿಕೊಂಡು 23820 ರು ದಂಡ ವಿಧಿಸಲಾಗಿದೆ ಎಂದು ಮಂಡ್ಯ ನಗರಸಭೆ ಆಯುಕ್ತ ಮಂಜುನಾಥ್ ಅವರು ತಿಳಿಸಿದ್ದಾರೆ.

ದಾಳಿ‌ಯನ್ನು ಸೋಮವಾರ‌ ಸಂಜೆ ನಡೆಸಿದ್ದಾರೆ, ದಾಳಿ‌ ಸಂದರ್ಭದಲ್ಲಿ ನಗರಸಭೆ ಸಹಾಯಕ‌ ಕಾರ್ಯಪಾಲಕ ಅಭಿಯಂತರ ರವಿ ಕುಮಾರ್, ಆರೋಗ್ಯ ನಿರೀಕ್ಷಕ ಶಿವಶಂಕರ್, ಅಶ್ವಥ್, ಚಲುವರಾಜು, ಪ್ಲಾಸ್ಟಿಕ್ ವಿರೋಧಿ ಹೋರಾಟಗಾರ ಜಯಶಂಕರ್ , ನಗರಸಭೆ‌ ಸಿಬ್ಬಂದಿಗಳು ಉಪಸ್ಥಿತರಿದ್ದರು.

error: Content is protected !!