November 22, 2024

Newsnap Kannada

The World at your finger tips!

WhatsApp Image 2022 12 06 at 3.09.02 PM 1

ಕಡಲ ಅಲೆಗಳಿಂದಲೂ ವಿದ್ಯುತ್ : ಹೊಸ ಅವಿಷ್ಕಾರ

Spread the love
  • 2023 ಕ್ಕೆ ಪ್ರಯೋಗ ಯಶಸ್ವಿ
  • ಸಿಂಧೂಜಾ ಉತ್ಪಾದನಾ ಯಂತ್ರದಿಂದ ಈಗ 100 ಕಿಲೋ ವ್ಯಾಟ್ ಉತ್ಪಾದನೆ
  • ಐಐಟಿ ( ಮದ್ರಾಸ್ ) ಪ್ರಾಧ್ಯಾಪಕ ಅಬ್ದಸ್ ಸಮದ್ ನೇತೃತ್ವದ ಸಂಶೋದಕರ ತಂಡ

ಐಐಟಿ ಮದ್ರಾಸ್​ ಶಕ್ತಿ ಸಂಚಲನಕ್ಕೆ ಹೊಸ ಸಾಧನವನ್ನ ಆವಿಷ್ಕರಿಸಿದ್ದಾರೆ. ಜಗತ್ತು ಹೈಸ್ಪೀಡ್​ ವೇಗದಲ್ಲಿ ಸಾಗುತ್ತಿದೆ. ಈ ವೇಗಕ್ಕೆ ಅತೀ ಮುಖ್ಯವಾಗಿ ಬೇಕಾಗುವ ಶಕ್ತಿ ಅಂದರೆ ವಿದ್ಯುತ್. ಈ ಶಕ್ತಿ ಸಂಚಯನದಲ್ಲಿ ಕಡಿಮೆಯಾದ್ರೆ ದೇಶದ ಅರ್ಥ ವ್ಯವಸ್ಥೆಯೇ ಏರಳಿತವಾಗಬಹುದು. ಹೀಗಾಗೇ ಶಕ್ತಿ ಕ್ರೋಡಿಕರಿಸಲು ಹಲವಾರು ಮಾರ್ಗಗಳನ್ನು ಸಾಧನಗಳನ್ನು ಆವಿಷ್ಕರಿಸಲಾಗುತ್ತಿದೆ.

ಇದರ ಭಾಗವಾಗಿ ಐಐಟಿ ಮದ್ರಾಸ್‌ನ ಸಂಶೋಧಕರು ಮಹತ್ವದ ಸಾಧನೆ ಮಾಡಿದ್ದಾರೆ. ಪವನಶಕ್ತಿ, ಜಲಶಕ್ತಿ, ಸೌರಶಕ್ತಿಯಿಂದ ಕರೆಂಟ್​ ಪಡೆದು ಬಳಸುತ್ತಿರುವಾಗ ಹೊಸದಾಗಿ ಶಕ್ತಿ ಪಡೆಯುವ ಸಾಧನವನ್ನ ಐಐಟಿ ಅಭಿವೃದ್ಧಿಪಡಿಸಿದೆ.

2030ರ ವೇಳೆಗೆ 500 GW ವಿದ್ಯುತ್ ಉತ್ಪಾದಿಸಬಹುದು

ಸಮುದ್ರದ ಅಲೆಯಿಂದ ವಿದ್ಯುತ್​ ಉತ್ಪಾದನ ಯಂತ್ರ.. ಸಿಂಧೂಜಾ-I ಪ್ರಸ್ತುತ 100 ವ್ಯಾಟ್‌ಗಳಷ್ಟು ಶಕ್ತಿಯನ್ನು ಉತ್ಪಾದಿಸುವ ಶಕ್ತಿ ಹೊಂದಿದೆ. ಮುಂದಿನ ಮೂರು ವರ್ಷಗಳಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಸಾಮರ್ಥ್ಯ ಹೆಚ್ಚಿಸಲಾಗುವುದು. 2030 ರ ವೇಳೆಗೆ 500 ಗಿಗಾ ವ್ಯಾಟ್​ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದೆ.

ಐಐಟಿ ಮದ್ರಾಸ್‌ನಿಂದ ‘ಸಿಂಧುಜಾ-I’ ಉಪಕರಣ

ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಮದ್ರಾಸ್‌ ಸಂಶೋಧಕರು ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಉಪಕರಣವನ್ನು ಅಭಿವೃದ್ಧಿಪಡಿಸಿದ್ದಾರೆ. ಸಾಗರದ ಅಲೆಗಳನ್ನು ವಿದ್ಯುತ್‌ ಆಗಿ ಪರಿವರ್ತಿಸುವ ಉಪಕರಣಕ್ಕೆ ‘ಸಿಂಧುಜಾ-ಐ’ ಎಂದು ಹೆಸರಿಟ್ಟಿದ್ದಾರೆ. ಮಾತ್ರವಲ್ಲದೆ ತಮಿಳುನಾಡಿನ ತೂತುಕುಡಿ ಕರಾವಳಿಯ ಸುಮಾರು 6 ಕೀ.ಮೀ. ದೂರದಲ್ಲಿ ಸಾಗರದ 20 ಮೀಟರ್ ಆಳದಲ್ಲಿ ‘ಸಿಂಧುಜಾ–ಐ’ ಉಪಕರಣವನ್ನು ಪ್ರಾಯೋಗಿಕ ಪರೀಕ್ಷೆಗಾಗಿ ಅಳವಡಿಸಿದ್ದಾರೆ.

ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಉಪಕರಣ

ಐಐಟಿ ಮದ್ರಾಸ್‌ನ ಸಂಶೋಧಿಸಿದ ‘ಸಿಂಧುಜಾ-I’ ತೂತುಕುಡಿ ಕರಾವಳಿಯ ಸಾಗರದಲ್ಲಿ ಅಳವಡಿಸಿದ್ದಾರೆ. ಮೂರು ವರ್ಷಗಳಲ್ಲಿ ಸಮುದ್ರದ ಅಲೆಗಳಿಂದ ಒಂದು ಮೆಗಾವಾಟ್ ವಿದ್ಯುತ್‌ ಉತ್ಪಾದಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಂಶೋಧಕರು ಐಐಟಿ ಮದ್ರಾಸ್‌ನ ಸಂಶೋಧಕರು ಹೊಂದಿದ್ದಾರೆ. ಐಐಟಿ–ಎಂ ಪ್ರಾಧ್ಯಾಪಕ ಪ್ರೊ. ಅಬ್ದಸ್‌ ಸಮದ್‌ ಅವರ ನೇತೃತ್ವದ ಸಂಶೋಧಕರ ತಂಡವು ಈ ಉಪಕರಣ ಅಭಿವೃದ್ಧಿಪಡಿಸಲು ಒಂದು ದಶಕದಿಂದ ಶ್ರಮಿಸುತ್ತಿದೆ. 33 ವಾರಗಳ ಗರ್ಭಿಣಿಯ ಗರ್ಭಪಾತಕ್ಕೆ ಹೈಕೋರ್ಟ್ ಹಸಿರು ನಿಶಾನೆ : ತಾಯಿಯ ಆಯ್ಕೆಯೇ ಅಂತಿಮ – ಕೋರ್ಟ್ ಪ್ರತಿಪಾದನೆ

ದೇಶ ತನ್ನ ಸುತ್ತಮುತ್ತ 7 ಸಾವಿರದ 500 ಕಿಲೋ ಮೀಟರ್​ ಉದ್ದದ ಕರಾವಳಿ ಹೊಂದಿದೆ. ಈ ಪೈಕಿ 54 ಗಿಗಾ ವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 2030ರ ವೇಳೆಗೆ ಹವಾಮಾನ ಬದಲಾವಣೆ ಸಂಬಂಧ ನವೀಕರಿಸಬಹುದಾದ ಇಂಧನ ಮೂಲದಿಂದ 500 ಗಿಗಾ ವ್ಯಾಟ್‌ ವಿದ್ಯುತ್ ಉತ್ಪಾದಿಸುವ ಗುರಿ ಸಾಧಿಸಲು ಈ ಸಿಂಧೂಜಾ ಐ ದೇಶಕ್ಕೆ ನೆರವಾಗಲಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!