ಭಾರತ ಕಂಡ ಶ್ರೇಷ್ಠ ವಿಜ್ಞಾನಿಗಳಲ್ಲಿ ಜಗದೀಶ್ ಚಂದ್ರ ಬೋಸ್ ಒಬ್ಬ ಅಸಮಾನ್ಯ ವ್ಯಕ್ತಿ. ಒಬ್ಬ ಬಹುಮುಖ ಪ್ರತಿಭೆ, ಜಗದೀಶ್ ಚಂದ್ರಬೋಸ್ ಅವರು ಬಂಗಾಲ ಪ್ರಾಂತ್ಯ (ಈಗಿನ ಬಾಂಗ್ಲಾದೇಶ)ದ ಮುಷಿಗಂಜ್ ನಲ್ಲಿ 1858 ನವೆಂಬರ್ 30ರಂದು ಜನಿಸಿದರು.
ಜಗದೀಶರು ಹೈಸ್ಕೂಲು ವಿದ್ಯಾಭ್ಯಾಸ ಕಲ್ಕತ್ತೆಯಲ್ಲಿ ಮುಗಿಸಿ, ಹೆಚ್ಚಿನ ವ್ಯಾಸಂಗಕ್ಕೆ ಇಂಗ್ಲೆಂಡಿಗೆ ತೆರಳಿದರು (1880). ಐದು ವರ್ಷದ ನಂತರ ಲಂಡನ್ ವಿಶ್ವವಿದ್ಯಾಲಯದಿಂದ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ ಮತ್ತು ಭೌತಶಾಸ್ತ್ರಗಳಲ್ಲಿ D.Sc. ಪದವಿ ಪಡೆದು ಭಾರತಕ್ಕೆ ಹಿಂದಿರುಗಿದರು.
ಕಲ್ಕತ್ತೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇರಿದ ಮೊದಲ ಭಾರತೀಯ, ಜಗದೀಶ ಚಂದ್ರ ಬೋಸ್. ಬ್ರಿಟಿಷರ ಆಡಳಿತದಲ್ಲಿ ಜನಾಂಗೀಯ ತಾರತಮ್ಯಕ್ಕೆ ಗುರಿಯಾದವರಲ್ಲಿ ಜಗದೀಶರೂ ಒಬ್ಬರು. ಪ್ರಾಧ್ಯಾಕರ ಹುದ್ದೆಯಲ್ಲಿದ್ದ ಬ್ರಿಟಿಷರಿಗೆ ನೀಡುತ್ತಿದ್ದ ವೇತನಕ್ಕಿಂತ ತುಂಬಾ ಕಡಿಮೆ ಪಗಾರ ಪಡೆಯುತ್ತಿದ್ದ ಬೋಸರು ಇದರ ವಿರುದ್ಧ ಧ್ವನಿಯೆತ್ತಿದರು. ವಿಚಾರ ಇಂಗ್ಲೆಂಡಿನಲ್ಲಿ ಆಗಷ್ಟೇ ಭಾರತದ ವೈಸ್ ರಾಯ್ ಹುದ್ದೆಯಿಂದ ಮರಳಿದ್ದ, ಲಾರ್ಡ್ ರಿಪ್ಪನ್ ತಲುಪಿ ಅದನ್ನು ಸರಿಪಡಿಸಲಾಯಿತು.
ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರೂ, ಪ್ರಯೋಗಾಲಯಗಳಿಗೆ ಭಾರತೀಯನಾದ ಜಗದೀಶರಿಗೆ ಪ್ರವೇಶ ನಿಷೇಧಿಸಲಾಗಿತ್ತು. ಛಲವಾದಿ ಬೋಸ್ ತಮ್ಮ ಪುಟ್ಟ 24 ಚ.ಅ. ಕೋಣೆಯಲ್ಲೇ ವಿಜ್ಞಾನದ ಪ್ರಯೋಗಗಳನ್ನು ಮತ್ತು ಸಂಶೋಧನೆಗಳನ್ನು ಮಾಡತೊಡಗಿದರು.
ಭೌತಶಾಸ್ತ್ರ ಹಾಗು ಜೀವಶಾಸ್ತ್ರ ವಿಜ್ಞಾನ. ರೇಡಿಯೊ, ದೂರಸಂಪರ್ಕ, ಪ್ರಕಾಶ ಶಾಸ್ತ್ರ, ಸಸ್ಯ ಜೀವಶಾಸ್ತ್ರ ಹೀಗೆ ಅನೇಕ ವಿಜ್ಞಾನದ ವಿಭಾಗದಲ್ಲಿ ಸಂಶೋಧನೆ ನೆಡೆಸಿದ್ದ ಬೋಸರು ಶ್ರೇಷ್ಟ ವಿಜ್ಞಾನಿಗಳಲ್ಲೊಬ್ಬರಾಗಿದ್ದರು. ಬೋಸರು ಸಸ್ಯಗಳು ಸಹ ಪ್ರಾಣಿಗಳ ಹಾಗೆ ಹೊರ ಪ್ರಭಾವಗಳಿಗೆ ಸ್ಪಂದಿಸುತ್ತವೆಂದು ಜಗತ್ತಿಗೆ ಸಾಬೀತು ಮಾಡಿ ತೊರಿಸಿದವರು.
ಭಾರತದಲ್ಲಿ ಇವರನ್ನು ರೇಡಿಯೋ ವಿಜ್ಞಾನದ ಪಿತಾಮಹಾ ಎಂದರೆ ತಪ್ಪಿಲ್ಲ. ಏಕೆಂದರೆ ರೇಡಿಯೋ ಪ್ರಯೋಗ ವಿಜ್ಞಾನಕ್ಕೆ ಅಡಿಪಾಯ ಹಾಕಿದ್ದು ಇದೇ ಜಗದೀಶ್ ಚಂದ್ರ ಬೋಸ್ ಅವರು. ಬೋಸ್ ಅವರು ರೇಡಿಯೋ ಮತ್ತು ವೈರ್ಲೆಸ್ ಸಂಕೇತಗಳ ಕುರಿತ ಸಂಶೋಧನೆಯಲ್ಲಿ ಅವರು ಗಮನಾರ್ಹ ಪ್ರಗತಿ ಸಾಧಿಸಿದ್ದರು.
ಸಸ್ಯಗಳಿಗೂ ಭಾವನೆಗಳಿವೆ
ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ಹೊಸದಾರಿ ತೋರುವ ಹಲವಾರು ಸಂಶೋಧನೆಗಳನ್ನು ಮಾಡಿದ ಬೋಸ್ ಅವರು, ಸಸ್ಯಗಳು ಪ್ರಚೋದನೆಗೆ ತೋರುವ ಪ್ರತಿಕ್ರಿಯೆಯನ್ನು ಅಳೆಯುವ ಸಾಧನವನ್ನು ತಯಾರುಮಾಡಿ ಪ್ರಾಣಿ ಮತ್ತು ಸಸ್ಯ ಅಂಗಾಂಶಗಳಲ್ಲಿನ ಸಾಮ್ಯತೆಯನ್ನು ವೈಜ್ಞಾನಿಕವಾಗಿ ಸಾಧಿಸಿತೋರಿಸಿದರು. ಅವರ ಈ ಕಾರ್ಯಕ್ಕೆ ಪೇಟೆಂಟ್ ಸಲ್ಲಿಸುವಂತೆ ಹಿತೈಷಿಗಳು ಒತ್ತಾಯಿಸಿದ್ದರು. ಹಿತೈಷಿಗಳ ಒತ್ತಾಯಕ್ಕೆ ಮಣಿದು ಬೋಸ್ ಅವರು ಪೇಟೆಂಟ್ ಗಾಗಿ ಅರ್ಜಿ ಸಲ್ಲಿಸಿದರು. ಆ ಮೂಲಕ ಪೇಟೆಂಟ್ ಗೆ ಅರ್ಜಿ ಸಲ್ಲಿಸಿದ ಮೊದಲ ಭಾರತೀಯ ಎಂಬ ಖ್ಯಾತಿಗೂ ಅವರು ಭಾಜನರಾದರು.
ನಾನೇನೂ ಸೃಷ್ಟಿಕರ್ತನಲ್ಲ. ಈ ಜಗದಲ್ಲಿ ಅಂತರ್ಗತವಾಗಿರುವ ಕೆಲವೊಂದು ವಸ್ತು ವಿಶೇಷಗಳು ನನ್ನ ಮೂಲಕ ಜಗತ್ತಿಗೆ ಕಾಣಿಸಿಕೊಂಡಿವೆ. ಹಾಗಾಗಿ ಜ್ಞಾನ ಯಾರ ಸ್ವತ್ತೂ ಅಲ್ಲ. ಅದನ್ನು ಎಲ್ಲರೂ ಮುಕ್ತವಾಗಿ ಹಂಚಿಕೊಳ್ಳಬೇಕು ಎಂದು ಹೇಳಿದ್ದರು.
ಸಸ್ಯಗಳಿಗೂ ಭಾವನೆಗಳಿವೆಯೇ? ಸಸ್ಯಗಳಿಗೆ ಹೊಡೆದರೆ ನೋವಾಗುವುದೇ? ಅವುಗಳೂ ನಮ್ಮಂತೆ ಉಸಿರಾಡುವವೇ? ರಾತ್ರಿ ನಿದ್ದೆ ಮಾಡಿ ಮುಂಜಾನೆ ಎಚ್ಚರವಾಗುವವೇ? ಹೌದೆಂದು, ಅದನ್ನು ವೈಜ್ಞಾನಿಕ ಪ್ರಯೋಗಗಳಿಂದ ಶತಮಾನ ಮೊದಲೇ ಸಾಧಿಸಿ ತೊರಿಸಿದವರು ಭಾರತದ ವಿಜ್ಞಾನಿ ಸರ್ ಜಗದೀಶ್ ಚಂದ್ರ ಬೋಸ್.
‘ಕ್ರೆಸ್ಕೊಗ್ರಾಫ್’
1901, ಮೇ 10 ರಂದು ಇಂಗ್ಲೆಂಡಿನ ರೋಯಲ್ ಸೊಸೈಟಿಯಲ್ಲಿ, ಬೋಸ್ ಅವರು ಒಂದು ಸಂಶೋಧನಾ ಲೇಖನವನ್ನು ಪ್ರಸ್ತುತಪಡಿಸುತ್ತಾ ಪ್ರಯೋಗಗಳ ಮೂಲಕ ನಿರ್ಧಿಷ್ಟ ಪರಿಸ್ಥಿತಿಗಳಿಗೆ ಸಸ್ಯಗಳು ತೋರಿಸುವ ಪ್ರತಿಕ್ರಿಯೆಗಳನ್ನು ಸಾದರಪಡಿಸಿದರು. ಕಳೆದ ಶತಮಾನದ ಆದಿಭಾಗದಲ್ಲಿಯೇ ಆಧುನಿಕ ತಂತ್ರಜ್ಞಾನಗಳಿಂದ ವಿನ್ಯಾಸಗೊಳಿಸಿದ ಆ ಉಪಕರಣದ ಹೆಸರು, ‘ಕ್ರೆಸ್ಕೊಗ್ರಾಫ್’. ಬೋಸ್ ಹೇಳುತ್ತಾರೆ, “ನಮ್ಮ ಸುತ್ತಲೂ ಗಿಡ, ಮರ, ಬಳ್ಳಿಗಳು ನಮ್ಮೊಡನೆ ನಿರಂತರವಾಗಿ ಸಂವಹನೆ ಮಾಡುತ್ತವೆ. ಆದರೆ, ನಾವು ಅದನ್ನು ಗಮನಿಸುವುದಿಲ್ಲ.”
ಪ್ರಶಸ್ತಿ ಗೌರವಗಳು
- ಬೋಸರಿಗೆ 1916 ರಲ್ಲಿ ನೈಟ್ ಹುಡ್ ಪ್ರಶಸ್ತಿ ಸಂದಿತು. ಬೋಸರು 1917 ರಲ್ಲಿ ಬೋಸ್ ಅವರು ಬೋಸ್ ಇನ್ಸ್ಟಿಟ್ಯೂಟನ್ನು ಕಲ್ಕತ್ತದಲ್ಲಿ ಸ್ಥಾಪಿಸಿದರು.
- ಬೋಸ್ 1920 ರಲ್ಲಿ ಬೋಸರನ್ನು ಲಂಡನ್ನಿನ ಫೆಲೊ ಆಫ್ ರಾಯಲ್ ಸೊಸೈಟಿಯ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
- 1927 ರ ವರ್ಷದಲ್ಲಿ ಅವರು ಇಂಡಿಯನ್ ಸೈನ್ಸ್ ಕಾಂಗ್ರೆಸ್ಸಿನ 14 ನೇ ಅಧಿವೇಶನದ ಅಧ್ಯಕ್ಷತೆಯ ಗೌರವವನ್ನು ಪಡೆದರು.
- 1928 ರ ವರ್ಷದಲ್ಲಿ ಅವರಿಗೆ ವಿಯೆನ್ನಾ ಅಕಾಡೆಮಿ ಆಫ್ ಸೈನ್ಸಸ್ ಸದಸ್ಯತ್ವ ಗೌರವ ಲಭಿಸಿತು.
- 1929 ರಲ್ಲಿ ಅವರಿಗೆ ಫಿನ್ನಿಶ್ ಸೊಸೈಟಿ ಆಫ್ ಸೈನ್ಸನ್ ಅಂಡ್ ಲೆಟರ್ಸ್ ಸದಸ್ಯತ್ವ ಗೌರವ ಸಂದಿತು.
- ಅವರಿಗೆ ಲೀಗ್ ಆಫ್ ನೇಶನ್ಸ್ ಕಮಿಟಿ ಆಫ್ ಇಂಟಲೆಕ್ಚುಯಲ್ ಕೋಪರೇಶನ್ ಸದಸ್ಯತ್ವ ಗೌರವವವೂ ಸಂದಿತು.
- ಬೋಸ್ ಅವರನ್ನು ಪ್ರಸಕ್ತದಲ್ಲಿ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡೆಮಿ ಎಂದಾಗಿರುವ ಅಂದಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸಸ್ ಇಂಡಿಯಾದ ಸಂಸ್ಥಾಪಕ ಫೆಲೋ ಎಂದು ಗೌರವಿಸಲಾಗಿತ್ತು.
- ದಿ ಇಂಡಿಯನ್ ಬೊಟಾನಿಕ್ ಗಾರ್ಡನ್ ಅನ್ನು ಜೂನ್ 25, 2009 ರ ವರ್ಷದಂದು ಆಚಾರ್ಯ ಜಗದೀಶ್ ಚಂದ್ರ ಬೋಸ್ ಇಂಡಿಯನ್ ಬೊಟಾನಿಕ್ ಗಾರ್ಡನ್ ಎಂದು ಹೆಸರಿಸಲಾಯಿತು.
- ತಮ್ಮ ಜೀವನದುದ್ದಕ್ಕು ಜ್ಞಾನ ಹಾಗು ವಿಜ್ಞಾನದ ಸಮ್ಮಿಲನದ ಅನೇಕ ಸಾಧನೆ ಮಡಿದ ಶ್ರೇಷ್ಠ ವ್ಯಕ್ತಿ,
- ನವೆಂಬರ್ 23, 1937 ರಂದು ಜಗದೀಶ್ಚಂದ್ರ ಬೋಸರು ನಿಧನರಾದರು.
ಇಂತಹ ಬಹುಮುಖ ಪ್ರತಿಭೆ ಅಪ್ರತಿಮ ವಿಜ್ಞಾನ ಜಗದೀಶ್ ಚಂದ್ರ ಬೋಸ್ ರವರಿಗೆ ಭಾರತೀಯರೆಲ್ಲರ ನಮನಗಳು.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
More Stories
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ