ಬೆಂಗಳೂರಿನಲ್ಲಿ ಲಿವ್ ಇನ್ ರಿಲೇಶನ್‌ಶಿಪ್‍ನಲ್ಲಿದ್ದ ಪ್ರಿಯತಮೆ ಹತ್ಯೆಗೈದ ಪ್ರಿಯಕರ

Team Newsnap
1 Min Read
women who was in a live-in relationship in Bangalore murdered ಬೆಂಗಳೂರಿನಲ್ಲಿ ಲಿವ್ ಇನ್ ರಿಲೇಶನ್‌ಶಿಪ್‍ನಲ್ಲಿದ್ದ ಪ್ರಿಯತಮೆ ಹತ್ಯೆಗೈದ ಪ್ರಿಯಕರ

ಲಿವ್ ಇನ್ ರಿಲೇಶನ್‌ಶಿಪ್‍ನಲ್ಲಿದ್ದ ಪ್ರೇಮಿಗಳ ನಡುವೆ ಜಗಳವು ಪ್ರಿಯತಮೆಯ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ಬುಧವಾರ ನಡೆದಿದೆ.

ನೇಪಾಳ ಮೂಲದ ಕೃಷ್ಣಕುಮಾರಿ (23) ಕೊಲೆಯಾದ ಯುವತಿ ಹಾಗೂ ನೇಪಾಳ ಮೂಲದ ಸಂತೋಷ್ ದಾಮಿ (27) ಕೊಲೆ ಮಾಡಿದ ಆರೋಪಿ.ಇಂದು ಮತ್ತೆ ಇಬ್ಬರು ನಾನ್ ಐಪಿಎಸ್ ಅಧಿಕಾರಿ, 30 ಇನ್ಸ್​ಪೆಕ್ಟರ್​​ಗಳ ವರ್ಗಾವಣೆ – ಸರ್ಕಾರದ ಆದೇಶ

ಕೃಷ್ಣ ಕುಮಾರಿ ಹೊರಮಾವು ಯೂನಿಸೆಕ್ಸ್ ಸ್ಪಾದಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಳು. ಸಂತೋಷ್ ಟಿ.ಸಿ ಪಾಳ್ಯದಲ್ಲಿ ಬಾರ್ಬರ್ ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದ.

ಈ ಇಬ್ಬರಿಗೂ ಪರಿಚಯವಾಗಿ ಪ್ರೇಮಾಂಕುರವಾಗಿತ್ತು. ಅದಾದ ಬಳಿಕ ಕೃಷ್ಣಕುಮಾರಿ ಹಾಗೂ ಸಂತೋಷ್ ಇಬ್ಬರು ಸೇರಿ ರಾಮೂರ್ತಿನಗರದ ಟಿಸಿಪಾಳ್ಯದಲ್ಲಿ ಬಾಡಿಗೆ ರೂಮ್‍ನ್ನು ಪಡೆದಿದ್ದಾರೆ.
ಆ ಬಳಿಕ ಅದೇ ಬಾಡಿಗೆ ರೂಂನಲ್ಲೇ ಇಬ್ಬರೂ ವಾಸಿಸುತ್ತಿದ್ದರು.

ಇಂದು ಬೆಳಗ್ಗೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಜಗಳ ತಾರಕ್ಕೇರಿದ್ದು ಕೃಷ್ಣಕುಮಾರಿಯನ್ನು ಸಂತೋಷ್ ದಾಮಿ ಕೊಲೆ ಮಾಡಿದ್ದಾನೆ.

ರಾಮೂರ್ತಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದು ವರ್ಷದ ಹಿಂದೆ ಈ ಇಬ್ಬರೂ ಬೆಂಗಳೂರಿಗೆ ಬಂದಿರುವ ಬಗ್ಗೆ ಮಾಹಿತಿ ಇದೆ .

Share This Article
Leave a comment