ನನ್ನ ತಂದೆ ಹೇಳಿದ್ದ ಭವಿಷ್ಯ ನಿಜವಾಗಿದೆ, 4 ಬಾರಿ ಸಿಎಂ ಆಗುವ ಸೌಭಾಗ್ಯ ಸಿಕ್ಕಿದೆ. ಜೀವನದಲ್ಲಿ ತೃಪ್ತಿ ಇದೆ, ಇನ್ಯಾವುದೇ ಯಾವುದೇ ಅಪೇಕ್ಷೆಗಳಿಲ್ಲ ಎಂದು ಬೂಕನಕೆರೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದರು.
ಕೆಆರ್ ಪೇಟೆ ಬೂಕನಕೆರೆಯಲ್ಲಿ ನಡೆಯುವ ವರ್ಷಕ್ಕೊಮ್ಮೆ ಗ್ರಾಮದಲ್ಲಿ ವಿಶೇಷ ಪೂಜಾ ಕೈಂಕರ್ಯ ಇರುತ್ತದೆ. ನಾನು ಕೂಡ ಕುಟುಂಬಸ್ಥರೊಂದಿಗೆ ಬಂದು ಪೂಜೆ ಸಲ್ಲಿಸುತ್ತೇನೆ. ಇದು ಅನೇಕ ವರ್ಷಗಳ ಪದ್ದತಿ, ಅದರಂತೆ ಇಂದು ಕೂಡ ಬಂದಿದ್ದೇನೆ ಎಂದರು.
ನಾನು ಹುಟ್ಟೂರಿಗೆ ಬಂದಾಗಲೆಲ್ಲಾ ನನಗೆ ಸಂತೋಷ, ತೃಪ್ತಿ, ನೆಮ್ಮದಿ ಸಿಗುತ್ತದೆ . ನಾನು ಹುಟ್ಟಿ ಬೆಳೆದದ್ದು ಬೂಕನಕೆರೆಯಲ್ಲಿ. ಚಿಕ್ಕವಯಸ್ಸಿನಲ್ಲೇ ತಾಯಿ ಕಳೆದುಕೊಂಡೆ. ತಂದೆಯವರೆ ನಮ್ಮನ್ನೆಲ್ಲಾ ಸಾಕಿದರು.
ಬೂಕನಕೆರೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮಂಡ್ಯಕ್ಕೆ ತೆರಳಿದೆ. ಮಂಡ್ಯದಲ್ಲಿ ಹೈ ಸ್ಕೂಲ್ ಮುಗಿಸಿ ಬೆಂಗಳೂರಿಗೆ ಹೋದೆವು. ಬೂಕನಕೆರೆಯನ್ನು ಜೀವನದಲ್ಲಿ ಎಂದಿಗೂ ಮರೆಯಲಾಗಲ್ಲ ಎಂದು ಹಳೇ ದಿನಗಳನ್ನು ಸ್ಮರಿಸಿದರು.
ಈ ಮಣ್ಣಿನ ಗುಣದಿಂದ ಈ ಸ್ಥಾನಕ್ಕೆ ತಲುಪಿದ್ದೇನೆ. ಸಣ್ಣಪುಟ್ಟಕ್ಕೆ ಬಡಿದಾಡಬೇಡ ಒಳ್ಳೆಯ ಅವಕಾಶಗಳು ಸಿಗಲಿದೆ ಎಂದು ನನ್ನ ತಂದೆ ಭವಿಷ್ಯ ಹೇಳಿದ್ದರು. ನನ್ನ ತಂದೆ ಭವಿಷ್ಯ ನಿಜವಾಗಿದೆ, ನಾಲ್ಕು ಬಾರಿ ಸಿಎಂ ಆಗುವ ಸೌಭಾಗ್ಯ ಸಿಕ್ಕಿದೆ. ಜೀವನದಲ್ಲಿ ತೃಪ್ತಿ ಇದೆ, ಯಾವುದೇ ಅಪೇಕ್ಷೆಗಳಿಲ್ಲ. ಅವತ್ತಿನ ಕಾಲದ ಹಬ್ಬದ ದಿನಗಳು ಈಗ ಇಲ್ಲ. ಆಗ ಜಾತ್ರೆಗೆ ಮನೆ ಮಂದಿಯೆಲ್ಲಾ ಹೋಗುತ್ತಿದ್ದೇವು. ನಾನು, ನಮ್ಮಣ್ಣ ತೆಂಡೆಕೆರೆ ಸಂತೆಗೆ ಹೋಗಿ ವ್ಯಾಪಾರ ಮಾಡುತ್ತಿದ್ದೇವು. ಅದ್ಯಾವುದನ್ನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ ಎಂದರು. ನಾಳೆಯಿಂದಲೇ ನಂದಿನಿ ಹಾಲು, ಮೊಸರಿನ ದರ 2 ರು ಏರಿಕೆ : ನೂತನ ಪರಿಷ್ಕೃತ ದರ ಹೀಗಿದೆ
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವುದೆ ನನ್ನ ಮುಂದಿನ ಗುರಿ. ಆ ಗುರಿ ಮುಟ್ಟುವ ದಿಕ್ಕಿನಲ್ಲಿ ಪ್ರಯತ್ನ ಸಾಗಿದೆ ಎಂದರು.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
More Stories
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
ಸಚಿವ ಸ್ಥಾನ ನನ್ನ ಹಕ್ಕು, ಬೇಡಿಕೆಯಲ್ಲ: ನಿಖರ ಹೇಳಿಕೆ ನೀಡಿದ ‘ಕೈ’ ಶಾಸಕ ನರೇಂದ್ರ ಸ್ವಾಮಿ
ಮಂಡ್ಯದ ಕಾರ್ಮೆಲ್ ಕಾಲೇಜಿನ ಪ್ರಥಮ, ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ