November 22, 2024

Newsnap Kannada

The World at your finger tips!

ramnagar school

ರಾಮನಗರ : ಮೈದಾನದಲ್ಲೇ ಪಾಠ ಶಾಲೆ – 348 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ

Spread the love

ಅಧಿಕಾರಿಗಳ ಕಿತ್ತಾಟದಿಂದಾಗಿ ರಾಮನಗರ ಜಿಲ್ಲಾ ಕೇಂದ್ರ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ತರಗತಿ ಇಲ್ಲದೇ ಹೊರಗಡೆ ಪಾಠ ಕೇಳಬೇಕಾದ ಸ್ಥಿತಿ ತಲುಪಿದೆ.

ರಾಮನರದ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಪಿಯುಸಿ ಹಾಗೂ ಪ್ರೌಢಶಾಲಾ ವಿಭಾಗವನ್ನು ನಡೆಸಲಾಗುತ್ತಿದೆ. ಬೆಳಗಿನ ಸಮಯದಲ್ಲಿನ ಪಿಯುಸಿ ಹಾಗೂ ಬೆಳಿಗ್ಗೆ 11 ರನಂತರ ಪ್ರೌಢಶಾಲೆಯನ್ನು ಈ ಹಿಂದಿನಿಂದಲೂ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ, ಶಾಲಾ ಕಟ್ಟಡಗಳು ಸಂಪೂರ್ಣವಾಗಿ ಕುಸಿಯುವ ಹಂತ ತಲುಪಿದ್ದ ಕಾರಣ, ಸರ್ಕಾರ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿತ್ತು.

ಪ್ರೌಢಶಾಲಾ ವಿಭಾಗದ 9 ಕೊಠಡಿಗಳನ್ನು ಉರುಳಿಸಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಕೊಠಡಿ ಇನ್ನು ಸಹ ಲೋಕಾರ್ಪಣೆಗೊಳ್ಳದ ಕಾರಣದಿಂದ ಹಾಗೇ ಉಳಿಸಿಕೊಳ್ಳಲಾಗಿದೆ. ಕಟ್ಟಡ ನಿರ್ಮಾಣಗೊಂಡರು, ಬಳಕೆಗೆ ಮಾತ್ರ ಲಭ್ಯವಾಗಿಲ್ಲ. ಹಾಗಾಗಿ ವಿಧಿಯಿಲ್ಲದೇ ಹೈಸ್ಕೂಲ್ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಕುಳಿತು ಪಾಠ ಕೇಳಬೇಕಾಗಿದೆ. ದಸರಾ ರಜೆಯಿದ್ದ ಕಾರಣ ಕಳೆದ 15 ದಿನಗಳಿಂದ ರಜೆ ಇತ್ತು. ಆರ್ಥಿಕ ಅಭದ್ರತೆಗೆ ಹೆದರಿ ಬ್ರಿಟನ್ ಪ್ರಧಾನಿ ಲೀಜ್ ರಾಜೀನಾಮೆ

ಕಳೆದ ಸೋಮವಾರದಿಂದ ಮತ್ತೆ ಶಾಲೆಗಳು ಆರಂಭವಾಗಿದೆ. ಆದರೆ, ಕೊಠಡಿ ಕೊರತೆಯಿಂದಾಗಿ ಹೊರಗಡೆ ಕುಳಿತೆ ಪಾಠ ಕೇಳು ಸ್ಥಿತಿ ಬಂದಿದೆ. ಹಲವು ದಿನಗಳಿಂದ ಮಳೆಯಾಗುತ್ತಿದೆ. ವಿದ್ಯಾರ್ಥಿಗಳು ಮಳೆಯಿಂದ ನೆಲದ ಮೇಲೆ ಕುಳಿತುಕೊಳ್ಳಬೇಕಾದ ಸ್ಥಿತಿ ನಿಮಾರ್ಣವಾಗಿದೆ.

Copyright © All rights reserved Newsnap | Newsever by AF themes.
error: Content is protected !!