December 19, 2024

Newsnap Kannada

The World at your finger tips!

canada , Brampton , Bhagavad-Gita park

ಕೆನಡಾದಲ್ಲಿ ‘ಭಗವದ್ಗೀತೆ ಪಾರ್ಕ್’​ ಧ್ವಂಸ; ಭಾರತದ ಖಂಡನೆ'Bhagavad Gita Park' vandalized in Canada; Condemnation of India

ಕೆನಡಾದಲ್ಲಿ ‘ಭಗವದ್ಗೀತೆ ಪಾರ್ಕ್’​ ಧ್ವಂಸ; ಭಾರತದ ಖಂಡನೆ

Spread the love

ಕೆನಡಾದ ಬ್ರಾಂಪ್ಟನ್​​ನಲ್ಲಿದ್ದ ಭಗವದ್ಗೀತೆ ಪಾರ್ಕ್ ಅನ್ನು ಧ್ವಂಸ ಗೊಳಿಸಿರುವ ಪ್ರಕರಣವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಇದೊಂದು ‘ದ್ವೇಷದ ಅಪರಾಧ’ ಎಂದು ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ತನ್ನ ಟ್ವಿಟ್ ನಲ್ಲಿ ಖಂಡಿಸಿದೆ.

ಶ್ರೀ ಭಗವದ್ಗೀತೆ ಪಾರ್ಕ್​ನಲ್ಲಿ ನಡೆದ ಅಪರಾಧ ಕೃತ್ಯವನ್ನು ನಾವು ಖಂಡಿಸುತ್ತೇವೆ. ಈ ಬಗ್ಗೆ ಕೆನಡಾ ತನಿಖಾಧಿಕಾರಿಗಳು ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತ ಒತ್ತಾಯಿಸಿದೆ.ಹೊಸಕೋಟೆ ಬಳಿ ರಸ್ತೆ ಅಪಘಾತ : ಲಾರಿಗೆ KSRTC ಡಿಕ್ಕಿ: ದಂಪತಿ ಸಾವು, 18 ಮಂದಿಗೆ ಗಾಯ

ಧ್ವಂಸಗೊಂಡಿರುವ ಈ ಪಾರ್ಕ್​​ಗೆ ಮೊದಲು ‘ಟ್ರಾಯರ್ಸ್ ಉದ್ಯಾನವನ’ ಎಂದು ಹೆಸರಿತ್ತು. ಸೆಪ್ಟೆಂಬರ್ 28 ರಂದು ಅದಕ್ಕೆ ಶ್ರೀ ಭಗವದ್ಗೀತೆ ಪಾರ್ಕ್​ ಎಂದು ನಾಮಕರಣ ಮಾಡಲಾಗಿತ್ತು.

ಪಾರ್ಕ್​ನಲ್ಲಿ ನಡೆದ ಅಪರಾಧದವನ್ನು ಬ್ರಾಂಪ್ಟನ್ ಮೇಯರ್ ಪೆಟ್ರಿಕ್ ಬ್ರೌನ್ ಖಂಡಿಸಿದ್ದಾರೆ ಈ ಬಗ್ಗೆ ಕ್ರಮ ತೆಗೆಕೊಳ್ಳುತ್ತೇವೆ ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!