ನವರಾತ್ರಿಯ ಒಂಭತ್ತು ದಿನಗಳು ದೇವಿಯ ಒಂಭತ್ತು ಸ್ವರೂಪಗಳ ಆರಾಧನೆಯಾಗಿರುತ್ತದೆ. ದೇವಿಯ ಪ್ರತಿಯೊಂದು ಸ್ವರೂಪದ ಆರಾಧನೆಯಿಂದ ವಿಶಿಷ್ಟ ಫಲಗಳನ್ನು ಪಡೆಯಬಹುದಾಗಿದೆ.
9 ದಿನಗಳ ದೇವಿಯ ವಿಶೇಷ ರೂಪ
ನವರಾತ್ರಿಯ ಮೊದಲನೇ ದಿನ “ಶೈಲ ಪುತ್ರಿ”
ವಂದೇ ವಾಂಚಿತಲಾಭಾಯ ಚಂದ್ರಾರ್ಧ ಕೃತಶೈಖರಾಮ್ | ವೃಷರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್
ನವರಾತ್ರಿಯ ಮೊದಲನೇ ದಿನ ಘಟಸ್ಥಾಪನೆಯ ಜೊತೆಗೆ ಶೈಲಪುತ್ರಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಹಿಮಾಲಯ ರಾಜನ ಪುತ್ರಿಯಾದ ಕಾರಣ ಈ ದೇವಿಯನ್ನು ಶೈಲಪುತ್ರಿ ಎಂದು ಕರೆಯಲಾಗುತ್ತದೆ. ಶೈಲಪುತ್ರಿಯು ವೃಷಭವನ್ನೇರಿ ಬರುತ್ತಾಳೆ ಮತ್ತು ಎಡಗೈಯಲ್ಲಿ ಕಮಲ, ಬಲಗೈಯಲ್ಲಿ ತ್ರಿಶೂಲವನ್ನು ಹಿಡಿದಿರುತ್ತಾಳೆ.
ನವರಾತ್ರಿಯ 2ನೇ ದಿನ ‘ಬ್ರಹ್ಮಚಾರಿಣಿ’
ಓಂ ದೇವಿ ಬ್ರಹ್ಮಚಾರಿಣಿಯೇ ನಮಃ ಓಂ ದೇವಿ ಬ್ರಹ್ಮಚಾರಿಣಿಯೇ ನಮಃ ದಾಧನಾ ಕರ್ ಪದ್ಮಭಯಮಕ್ಷಾಮಾಲಾ ಕಮಂಡಲೋ ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ
ನವರಾತ್ರಿಯ ಎರಡನೆಯ ದಿನದಂದು ದುರ್ಗಾಮಾತೆ ‘ಬ್ರಹ್ಮಚಾರಿಣಿ’ಯ ರೂಪ ಧರಿಸುತ್ತಾಳೆ. ಈ ಹೆಸರು ಬ್ರಹ್ಮ ನಿಂದ ಬಂದಿದ್ದಾಗಿದೆ.ಇವಳ ಉಪಾಸನೆಯಿಂದ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ, ಸಂಯಮ ವೃದ್ಧಿಯಾಗುತ್ತದೆ.
ನವರಾತ್ರಿ 3ನೇ ದಿನ “ಚಂದ್ರಘಂಟಾ”
ಓಂ ದೇವಿ ಚಂದ್ರಘಂಟಾಯೈ ನಮಃ ಓಂ ದೇವಿ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವಾರುಧ್ ಚಂಡಕೊಪಸ್ತ್ರಕೈರ್ಯುತ ಪ್ರಸಾದಂ ತನುತೆ ಮಧ್ಯಮ ಚಂದ್ರಘಂಟತಿ ವಿಶ್ರೂತಾ
ನವರಾತ್ರಿ ಮೂರನೆಯ ದಿನದಂದು ದುರ್ಗಾಮಾತೆ “ಚಂದ್ರಘಂಟಾ” ರೂಪವನ್ನು ಧರಿಸುತ್ತಾಳೆ. ಹಣೆಯಲ್ಲಿ ಅರ್ಧಚಂದ್ರಾಕೃತಿಯನ್ನು ಧರಿಸಿರುವ ಕಾರಣ ಚಂದ್ರಘಂಟಾ ಎಂದು ಕರೆಯುತ್ತಾರೆ. ದೇವಿಯ ಘಂಟೆಯ ಧ್ವನಿಯಿಂದ ದುಷ್ಟಶಕ್ತಿಗಳೆಲ್ಲ ಹೆದರಿ ನಾಶವಾಗುತ್ತವೆ. ಸಿಂಹದ ಮೇಲೇರಿ ಬರುವ ದೇವಿಯ ಶರೀರವು ಸ್ವರ್ಣದಂತೆ ಕಂಗೊಳಿಸುತ್ತದೆ.
ನವರಾತ್ರಿಯ 4ನೇ ದಿನ “ಕೂಷ್ಮಾಂಡ”
ಯಾ ದೇವಿ ಸರ್ವಭೂತೇಷು ಮಾಂ ಕೂಷ್ಮಾಂಡ ರೂಪೇಣ ಸಂಸ್ಥಿತಾ| ನಮಸ್ತ್ಯೈ ನಮಸ್ತೈ ನಮಸ್ತೈ ನಮೋ ನಮಃ
ನವರಾತ್ರಿಯ ನಾಲ್ಕನೇ ದಿನವನ್ನು ದೇವಿಯ “ಕೂಷ್ಮಾಂಡ”ದ ರೂಪವೆಂದು ಪೂಜಿಸಲಾಗುವುದು. ಪುರಾಣ ಹಾಗೂ ದಂತಕಥೆಯ ಪ್ರಕಾರ ಕೂಷ್ಮಾಂಡ ಎಂದರೆ ಇಡೀ ವಿಶ್ವದ ಸೃಷ್ಟಿ ಎನ್ನುವ ಅರ್ಥವನ್ನು ನೀಡುತ್ತದೆ. ಹಾಗಾಗಿ ದೇವಿಯು ಇಡೀ ವಿಶ್ವದ ಹೊಸ ಸೃಷ್ಟಿಗೆ ಕಾರಣಳಾದಳು ಎನ್ನುವ ಸಂಕೇತವಾಗಿ ಪೂಜಿಸಲಾಗುವುದು. ಆಕೆ ತನ್ನ ಎಂಟು ಕೈಗಳಲ್ಲಿ ಕಮಂಡಲು, ಧನುಷ, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ ಮತ್ತು ಗದೆಯನ್ನು ಹಿಡಿದ್ದಾಳೆ.
ನವರಾತ್ರಿಯ 5ನೇ ದಿನ “ಸ್ಕಂದ ಮಾಲಾ”
“ಓಂ ದೇವಿ ಸ್ಕಂದಮಾತಾಯ ನಮಃ ಓಂ ದೇವಿ ಸ್ಕಂದಮಾತಾಯೈ ನಮಃ ಸಿಂಹಾಸಂಗತಂ ನಿತ್ಯಂ ಪದ್ಮಾಚಿತ ಕರದ್ವಾಯೇ ಶುಭದಾಸ್ತು ಸದಾದೇವಿ ಸ್ಕಂದ ಮಾತಾ ಯಶಸ್ವಿನಿ.”
ನವರಾತ್ರಿಯ ಐದನೇಯ ದಿನ “ಸ್ಕಂದ ಮಾಲಾ” ಅವತಾರವನ್ನು ಪೂಜಿಸಲಾಗುವುದು. ನಾಲ್ಕು ಭುಜವುಳ್ಳ ತಾಯಿಯ ಬಲಬದಿಯ ಮೇಲಿನ ಭುಜದಿಂದ ಪುತ್ರ ಸ್ಕಂದನನ್ನು ಹಿಡಿದಿರುತ್ತಾಳೆ. ಕೆಳಗಿನ ಭುಜದಲ್ಲಿ ಕಮಲವನ್ನು, ಎಡಬದಿಯ ಮೇಲಿನ ಭುಜದಲ್ಲಿ ಆಶೀರ್ವಾದ ಮುದ್ರೆಯನ್ನು, ಕೆಳಗಿನ ಭುಜದಲ್ಲಿ ಕಮಲವನ್ನು ಹಿಡಿದಿರುತ್ತಾಳೆ.
ನವರಾತ್ರಿಯ 6ನೇ ದಿನ ‘ಕಾತ್ಯಾಯನಿ’
“ಓಂ ದೇವಿ ಕಾತ್ಯಾಯಿನಿ ನಮಃ ಓಂ ದೇವಿ ಕಾತ್ಯಾಯಿನಿ ನಮಃ ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ.”
ನವರಾತ್ರಿಯ ಆರನೆಯ ದಿನದಂದು ದುರ್ಗೆಯು ‘ಕಾತ್ಯಾಯನಿ’ ಯ ರೂಪ ಧರಿಸುತ್ತಾಳೆ. ನಾಲ್ಕು ಭುಜಗಳುಳ್ಳ ದುರ್ಗೆ ಇಂದೂ ಸಿಂಹದ ಮೇಲೆ ಕುಳಿತಿದ್ದು ಆಕೆಯ ವರ್ಣ ಬಂಗಾರದ್ದಾಗಿರುತ್ತದೆ. ಮುಖದಲ್ಲಿ ಮಂದಹಾಸವಿದ್ದು ಮೂರು ಕಣ್ಣುಗಳಿವೆ. ಎಡಬದಿಯ ಎರಡು ಕೈಗಳಲ್ಲಿ ಕಮಲ ಮತ್ತು ಖಡ್ಗ ಹಿಡಿದಿದ್ದು ಬಲ ಎರಡೂ ಕೈಗಳು ಅಭಯವನ್ನು ಸೂಚಿಸುತ್ತವೆ.
ನವರಾತ್ರಿಯ 7ನೇ ದಿನ ‘ಕಾಲರಾತ್ರಿ’
ಓಂ ದೇವಿ ಕಾಲರಾತ್ರೈ ನಮಃ ಓಂ ದೇವಿ ಕಾಲರಾತ್ರೈ ನಮಃ ಏಕವೇನಿ ಜಪಕಾರ್ಣಪೂರ ನಗ್ನಾ ಖರಸ್ಥಿತಾ ಲಂಬೋಸ್ಥಿತಿ ಕಾರ್ಣಿಕಾ ಕರ್ಣಿ ತೈಲಾಭಯಕ್ತ್ಶಶರೀರಿನಿ ವಾಮ್ ಪಾದೋಲ್ಲಸಲ್ಲೋಲತಾ ಕಂಠಕ್ಬುಷಾನಾ ವರ್ಧನ್ ಮೂರ್ಧಮ್ ಧ್ವಜಾ ಕೃಷ್ಣ ಕಾಲರಾತ್ರಿಭಯಂಕರಿ
ನವರಾತ್ರಿಯ ಏಳನೇ ದಿನ ದುರ್ಗೆಯು ತನ್ನ ಉಗ್ರರೂಪವಾದ ‘ಕಾಲರಾತ್ರಿ’ ಯ ರೂಪವನ್ನು ಧರಿಸುತ್ತಾಳೆ. ಅತ್ಯಂತ ಭಯಂಕರವಾದ ಸ್ವರೂಪವುಳ್ಳವಳಾಗಿದ್ದರೂ ಯಾವಾಗಲೂ ಉಪಾಸಕನಿಗೆ ಶುಭ ಫಲವನ್ನೇ ಕರುಣಿಸುತ್ತಾಳೆ. ಆದ್ದರಿಂದಲೇ ಇವಳನ್ನು ಶುಭಂಕರೀ ಎಂದೂ ಕರೆಯುತ್ತಾರೆ. ಈ ರೂಪದಲ್ಲಿ ಆಕೆಯ ಬಣ್ಣ ಕಪ್ಪಾಗಿದ್ದು ಕೆದರಿದ ನೀಳವಾದ ಕೂದಲು, ಹೊರಬಂದ ನಾಲಿಗೆ, ನಾಲ್ಕು ಕೈಗಳಲ್ಲಿ ಬಲಗೈಯಲ್ಲಿ ಕಸಾಯಿ ಕತ್ತಿ ಮತ್ತು ದೀಪವನ್ನು ಹಿಡಿದಿದ್ದರೆ ಎಡಗೈಗಳು ಮುದ್ರೆಯ ರೂಪದಲ್ಲಿದ್ದು ಅಭಯವನ್ನು ಸೂಚಿಸುತ್ತವೆ.
ನವರಾತ್ರಿಯ 8ನೇ ದಿನ ‘ಮಹಾಗೌರಿ’
ಓಂ ದೇವಿ ಮಹಾಗೌರೈ ನಮಃ ಓಂ ದೇವಿ ಮಹಾಗೌರೈ ನಮಃ ಶ್ವೇತಾ ವೃಶೇಸಾಮುದ್ರ ಶ್ವೇತಾಂಭರಧಾರ ಶುಚಿ ಮಹಾಗೌರಿ ಶುಭಾಮ್ ಧ್ಯಾನಮಹದೇವ ಪ್ರಮೋದದಾ
ನವರಾತ್ರಿಯ ಎಂಟನೇಯ ದಿನದಂದು ದುರ್ಗಾಮಾತೆ ‘ಮಹಾಗೌರಿ’ಯ ರೂಪ ಧರಿಸುತ್ತಾಳೆ. ಇದು ಆಕೆಯು ಅತ್ಯಂತ ಸೌಂದರ್ಯವತಿಯಾಗಿರುವ ರೂಪವಾಗಿದೆ. ಆಕೆಯ ಬಣ್ಣ ಹಿಮದಷ್ಟು ಬೆಳ್ಳಗಾಗಿದ್ದು ಬಿಳಿಯ ಅಥವಾ ಹಸಿರು ಸೀರೆಯುಟ್ಟು ಎತ್ತಿನ ಮೇಲೆ ಆಸೀನಳಾಗಿದ್ದಾಳೆ. ನಾಲ್ಕು ಕೈ ಮತ್ತು ಮೂರು ಕಣ್ಣುಗಳಿರುವ ಈಕೆಯ ರೂಪದಲ್ಲಿ ಶಾಂತಿ ಮತ್ತು ಜ್ಞಾನವನ್ನು ಕಂಡುಕೊಳ್ಳಲಾಗುತ್ತದೆ. ಎಡಕೈಗಳಲ್ಲಿ ಡಮರುಗ ಮತ್ತು ವರದಮುದ್ರೆ ಇದ್ದರೆ ಮೇಲಿನ ಬಲಗೈಯಲ್ಲಿ ಅಭಯ ಮುದ್ರೆ, ಕೆಳಗಿನ ಬಲಗೈಯಲ್ಲಿ ತ್ರಿಶೂಲವಿದೆ. ಇವಳ ಆರಾಧನೆಯಿಂದ ಅಲೌಕಿಕ ಸಿದ್ಧಿಗಳು ಪ್ರಾಪ್ತವಾಗುತ್ತವೆ ಎಂಬ ನಂಬಿಕೆಯಿದೆ.
ನವರಾತ್ರಿಯ 9ನೇ ದಿನ ‘ಸಿದ್ಧಿದಾತ್ರಿ’
ಓಂ ದೇವಿ ಸಿದ್ಧಿಧಾತ್ರಿಯೈ ನಮಃ ಓಂ ದೇವಿ ಸಿದ್ಧಿಧಾತ್ರಿಯೈ ನಮಃ ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ
ನವರಾತ್ರಿಯ ಒಂಬತ್ತನೇ ದಿನ ದುರ್ಗೆಯನ್ನು ‘ಸಿದ್ಧಿದಾತ್ರಿ’ ರೂಪದಲ್ಲಿ ಪೂಜಿಸಲಾಗುತ್ತದೆ. ಸಾಧಕರಿಗೆ ಎಲ್ಲ ರೀತಿಯ ಸಿದ್ಧಿಗಳನ್ನೂ ಕರುಣಿಸುವವಳಾದ್ದರಿಂದ ಈ ಹೆಸರು ಬಂದಿದೆ. ಮಾರ್ಕಂಡೇಯ ಪುರಾಣದಲ್ಲಿ ತಿಳಿಸಿರುವಂತೆ ಅಷ್ಟ ಸಿದ್ಧಿಗಳಾದ `ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯೋ, ಈಶಿತ್ವ ಹಾಗೂ ವಶಿತ್ವ ಮುಂತಾದ ಎಲ್ಲಾ ಸಿದ್ಧಿಗಳನ್ನೂ ದಯಪಾಲಿಸುವವಳಾಗಿದ್ದಾಳೆ. ಸಿದ್ಧಿದಾತ್ರಿಗೆ ನಾಲ್ಕು ಕೈಗಳಿವೆ. ಕಮಲ ಪುಷ್ಪದ ಮೇಲೆ ಕುಳಿತಿದ್ದು. ಚಕ್ರ, ಶಂಖ, ಗದೆ ಹಾಗೂ ಕಮಲ ಪುಷ್ಪವನ್ನು ಕೈಗಳಲ್ಲಿ ಹಿಡಿದಿದ್ದಾಳೆ. ಈ ದಿನ ಆಕೆಯನ್ನು ದೇವ, ಗಾಂಧರ್ವ, ಅಸುರ, ಯಕ್ಷ ಮತ್ತು ಸಿದ್ಧಿಯೋಗಿಗಳೂ ಪೂಜಿಸುತ್ತಾರೆ.
ಸಾಮಾನ್ಯವಾಗಿ ನವರಾತ್ರಿಯ ಪ್ರಥಮ ಆರು ದಿನಗಳಂದು ಆಯಾ ಮನೆಗಳಲ್ಲಿ ಪ್ರತ್ಯೇಕವಾಗಿ ಆಚರಿಸಲಾಗುತ್ತದೆ. ಆದರೆ ಏಳನೆಯ ದಿನದಿಂದ ಒಂಬತ್ತನೆಯ ದಿನದವರೆಗೆ ಮೂರು ದಿನಗಳ ಕಾಲ ಈ ಉತ್ಸವ ಸಾರ್ವಜನಿಕವಾಗುತ್ತದೆ. ಇದು ಊರಿನ ಹಬ್ಬವಾಗಿದ್ದು , ಈ ಮೂರೂ ದಿನಗಳಂದು ಸಂಭ್ರಮದಲ್ಲಿ ಮುಳುಗುತ್ತದೆ. ಇದರ ಮರುದಿನ ಹತ್ತನೆಯ ದಿನವೇ ವಿಜಯದಶಮಿ .
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಜಲಗಾರ ಮತ್ತು ಕಾಲ ಜ್ಞಾನಿ ಕನಕ ನಾಟಕಗಳಲ್ಲಿ ದೈವ-ದೇಗುಲ ಸಂಕಥನ
ಕನ್ನಡ ರಾಜ್ಯೋತ್ಸವ
ಬದುಕಿದ್ದೂ ಸತ್ತಂತಿರುವವರು ನೂರಾರು ; ಸತ್ತೂ ಬದುಕಿರುವ ಒಂದೇ ಒಂದು ಕೊಹಿನೂರು..!