ಪ್ರೇಮ ವಿವಾಹ ಮಾಡಿಕೊಂಡ ಮಗಳು ಮನೆತನದ ಗೌರವವನ್ನು ಬೀದಿಗೆ ತಂದಳೆಂದು ಮನನೊಂದ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಕೆ.ಆರ್.ಪೇಟೆಯ ಬಿ. ಬಾಚಹಳ್ಳಿಯಲ್ಲಿ ಬುಧವಾರ ಜರುಗಿದೆ.
ಬಿ.ಬಾಚಹಳ್ಳಿ ಗ್ರಾಮದ ಪ್ರಗತಿಪರ ರೈತ ರವಿ ಆತ್ಮಹತ್ಯೆ ಮಾಡಿಕೊಂಡವರು, ಮಗಳು ಕೀರ್ತನಾ ಕಾಲೇಜಿನಲ್ಲಿ ಓದುವಾಗಲೇ ಅಭಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮನೆಯಲ್ಲಿ ಕೀರ್ತನಾಳ ಪ್ರೇಮ ವಿವಾಹಕ್ಕೆ ಒಪ್ಪಿರಲಿಲ್ಲ ಈ ಕಾರಣಕ್ಕಾಗಿ ಮುನಿಸಿಕೊಂಡ ಕೀರ್ತಿನಾ ಮನೆ ಬಿಟ್ಟು ಅಭಿ ಜೊತೆ ಮದುವೆ ಮಾಡಿಕೊಂಡಿದ್ದಳು.
ಆಕೆಯ ಈ ನಿರ್ದಾರದಿಂದ ಮನೆ ಗೌರವ ಹಾಳಾಯಿತು ಎಂದು ರವಿ ಕುಟುಂಬದವರು ನೊಂದು ಕೊಂಡರು. ಮನೆ ಬಿಟ್ಟು ಹೋದ ತಮ್ಮ ಮಗಳನ್ನು ಹುಡುಕಿಕೊಡುವಂತೆ ಕೆ.ಆರ್.ಪೇಟೆ ಪೋಲಿಸರಿಗೆ ರವಿ ದೂರು ನೀಡಿದ್ದರು. ಐದು ದಿನವಾದರೂ ಮಗಳ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಪೋಲಿಸರು ಕೂಡ ಕೀರ್ತನಾ ಇರುವಿಕೆ ಬಗ್ಗೆ ಮಾಹಿತಿ ಸುಳಿವು ನೀಡಲಿಲ್ಲ ಮನನೊಂದ ರವಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಹಾಸ್ಟೆಲ್‍ನ ಕಿಟಕಿ ರಾಡ್ ಮುರಿದು ಮೂವರು ವಿದ್ಯಾರ್ಥಿನಿಯರು ಪರಾರಿ!
ಕೀರ್ತನಾಳನ್ನು ಹುಡುಕಿಕೊಡದ ಪೋಲಿಸರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಬೇಸತ್ತ ರವಿ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಪೋಲಿಸ್ ಸ್ಟೇಷನ್ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದರು,ನಂತರ ಕೀರ್ತಳನ್ನು ಕೂಡಲೆ ಹುಡುಕಿ ತರುವುದಾಗಿ ಪೋಲಿಸರು ಭರವಸೆ ನೀಡಿದ ಮೇಲೆ ಪ್ರತಿಭಟನೆ ವಾಪಾಸು ಪಡೆಯಲಾಯಿತು.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ