ಕೆ ಆರ್ ಪೇಟೆಯಲ್ಲಿ ದುರಂತ : ಪೋಷಕರನ್ನು ಧಿಕ್ಕರಿಸಿ ಮಗಳು ಪ್ರೇಮ ವಿವಾಹ- ಪ್ರಗತಿ ಪರ ರೈತ ರವಿ ಆತ್ಮಹತ್ಯೆ

Team Newsnap
1 Min Read

ಪ್ರೇಮ ವಿವಾಹ ಮಾಡಿಕೊಂಡ ಮಗಳು ಮನೆತನದ ಗೌರವವನ್ನು ಬೀದಿಗೆ ತಂದಳೆಂದು ಮನನೊಂದ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಕೆ.ಆರ್.ಪೇಟೆಯ ಬಿ. ಬಾಚಹಳ್ಳಿಯಲ್ಲಿ ಬುಧವಾರ ಜರುಗಿದೆ.

ಬಿ.ಬಾಚಹಳ್ಳಿ ಗ್ರಾಮದ ಪ್ರಗತಿಪರ ರೈತ ರವಿ ಆತ್ಮಹತ್ಯೆ ಮಾಡಿಕೊಂಡವರು, ಮಗಳು ಕೀರ್ತನಾ ಕಾಲೇಜಿನಲ್ಲಿ ಓದುವಾಗಲೇ ಅಭಿ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮನೆಯಲ್ಲಿ ಕೀರ್ತನಾಳ ಪ್ರೇಮ ವಿವಾಹಕ್ಕೆ ಒಪ್ಪಿರಲಿಲ್ಲ ಈ ಕಾರಣಕ್ಕಾಗಿ ಮುನಿಸಿಕೊಂಡ ಕೀರ್ತಿನಾ ಮನೆ ಬಿಟ್ಟು ಅಭಿ ಜೊತೆ ಮದುವೆ ಮಾಡಿಕೊಂಡಿದ್ದಳು.

ಆಕೆಯ ಈ ನಿರ್ದಾರದಿಂದ ಮನೆ ಗೌರವ ಹಾಳಾಯಿತು ಎಂದು ರವಿ ಕುಟುಂಬದವರು ನೊಂದು ಕೊಂಡರು. ಮನೆ ಬಿಟ್ಟು ಹೋದ ತಮ್ಮ ಮಗಳನ್ನು ಹುಡುಕಿಕೊಡುವಂತೆ ಕೆ.ಆರ್.ಪೇಟೆ ಪೋಲಿಸರಿಗೆ ರವಿ ದೂರು ನೀಡಿದ್ದರು. ಐದು ದಿನವಾದರೂ ಮಗಳ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ. ಪೋಲಿಸರು ಕೂಡ ಕೀರ್ತನಾ ಇರುವಿಕೆ ಬಗ್ಗೆ ಮಾಹಿತಿ ಸುಳಿವು ನೀಡಲಿಲ್ಲ ಮನನೊಂದ ರವಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ಹಾಸ್ಟೆಲ್‍ನ ಕಿಟಕಿ ರಾಡ್ ಮುರಿದು ಮೂವರು ವಿದ್ಯಾರ್ಥಿನಿಯರು ಪರಾರಿ!

ಕೀರ್ತನಾಳನ್ನು ಹುಡುಕಿಕೊಡದ ಪೋಲಿಸರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಬೇಸತ್ತ ರವಿ ಮೃತಪಟ್ಟಿದ್ದಾನೆ ಎಂದು ಸಂಬಂಧಿಕರು ಪೋಲಿಸ್ ಸ್ಟೇಷನ್ ಮುಂದೆ ಶವ ಇಟ್ಟು ಪ್ರತಿಭಟನೆ ನಡೆಸಿದರು,ನಂತರ ಕೀರ್ತಳನ್ನು ಕೂಡಲೆ ಹುಡುಕಿ ತರುವುದಾಗಿ ಪೋಲಿಸರು ಭರವಸೆ ನೀಡಿದ ಮೇಲೆ ಪ್ರತಿಭಟನೆ ವಾಪಾಸು ಪಡೆಯಲಾಯಿತು.

Share This Article
Leave a comment