December 19, 2024

Newsnap Kannada

The World at your finger tips!

tk halli

ಬೆಂಗಳೂರಿಗೆ ಕಾವೇರಿ ನೀರು ಪೂರೈಕೆ ಮಾಡುವ ಟಿಕೆ ಹಳ್ಳಿ ಪಂಪ್‌ ಸ್ಟೇಷನ್‌ ಜಲಾವೃತ : ಇಂದು ಮಧ್ಯಾಹ್ನ CM ಭೇಟಿ

Spread the love

ಬೆಂಗಳೂರಿಗೆ ಸರಬರಾಜು ಮಾಡುವ ಕಾವೇರಿ ನೀರು ಘಟಕದತೊರೆಕಾಡನಹಳ್ಳಿ (ಟಿಕೆ ಹಳ್ಳಿ) ಪಂಪ್‌ ಸ್ಟೇಷನ್‌ ಭಾರಿ ಮಳೆಯಿಂದಾಗಿ ಮುಳುಗಡೆಯಾಗಿದೆ.

ಭಾರೀ ಮಳೆಯಾದ ಹಿನ್ನೆಲೆಯಲ್ಲಿ ಪಂಪಿಂಗ್ ಸ್ಟೇಷನ್ ಸಂಪೂರ್ಣ ಜಲಾವೃತವಾಗಿರುವ ಕಾರಣ , ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲಿ ಭಾರಿ ಮಳೆ : ಸಿಲಿಕಾನ್ ಸಿಟಿ ಜಾಲಾವೃತ : ಮನೆಗಳಿಗೆ ನುಗ್ಗಿದ – ಜನರ ಪರದಾಟ

ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ತೊರೆ ಕಾಡನಹಳ್ಳಿ ಪಂಪ್ ಸ್ಟೇಷನ್‌ಗೆ ನೀರು ನುಗ್ಗಿದೆ, ಯಂತ್ರೋಪಕರಣಗಳು ಸ್ಥಗಿತವಾಗಿದೆ. ಈಗಾಗಲೇ ನಾನು‌ ಬಿಡಬ್ಲ್ಯೂಎಸ್ ಎಸ್ ಬಿ ಅಧ್ಯಕ್ಷರ ಜೊತೆ ಮಾತನಾಡಿದ್ದು ಸ್ಥಳಕ್ಕೆ ತೆರಳಿದ್ದಾರೆ ಎಂದರು.

ನಾನು ಮಧ್ಯಾಹ್ನ 1 ಗಂಟೆಗೆ ಹೋಗಿ ಸ್ಥಳ ಪರಿಶೀಲನೆ ಮಾಡುತ್ತೇನೆ. ಸಂಜೆಯೊಳಗೆ ಯಂತ್ರೋಪಕರಣಗಳು ಮತ್ತೆ ಚಾಲನೆಯಾಗಲಿದೆ. ತೊರೆ ಕಾಡನಹಳ್ಳಿ ಪರಿಶೀಲನೆ ಮಾಡಿದ ಬಳಿಕ ಹೆಚ್ಚಿನ ಮಾಹಿತಿ ಹೇಳುತ್ತೇನೆ ಎಂದು ಸಿಎಂ ಹೇಳಿದರು.

Copyright © All rights reserved Newsnap | Newsever by AF themes.
error: Content is protected !!