ಬ್ರಿಟನ್‍ನ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆ : ರಿಷಿ ಸುನಾಕ್ ಗೆ ಸೋಲು

Team Newsnap
1 Min Read

ಬ್ರಿಟನ್‍ನ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆಯಾಗಿದ್ದಾರೆ.

ಬೋರಿಸ್ ಜಾನ್ಸನ್ ಬ್ರಿಟನ್ ಪ್ರಧಾನಿ ಸ್ಥಾನದಿಂದ ಕೆಳಗಿಳಿದ ಬಳಿಕ ಮುಂದಿನ ಪ್ರಧಾನಿ ಯಾರಾಗುತ್ತಾರೆ ಎಂಬ ಪ್ರಶ್ನೆ ಮನೆಮಾಡಿತ್ತು. ಭಾರತ ಮೂಲದ ರಿಷಿ ಸುನಾಕ್ ರಕ್ಷಣಾ ಕಾರ್ಯದರ್ಶಿ ಬೆನ್ ವ್ಯಾಲೇಸ್, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್, ಮಾಜಿ ಆರೋಗ್ಯ ಕಾರ್ಯದರ್ಶಿ ಸಾಜಿದ್ ಜಾವಿದ್ ಪ್ರಧಾನಿ ಹುದ್ದೆಗೆ ಸ್ಫರ್ಧಿಸಿದ್ದರು. ಇವರಲ್ಲಿ ರಿಷಿ ಸುನಕ್ ಮತ್ತು ಲಿಜ್ ಟ್ರಸ್ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು.

ಗುರವೇ ಪರಬ್ರಹ್ಮ|| ಶಿಕ್ಷಕರ ದಿನಾಚರಣೆ (Teachers Day – 2022)

ಅಂತಿಮ ಸುತ್ತಿನಲ್ಲಿ ರಿಷಿ ಸುನಾಕ್ ಮತ್ತು ಲಿಜ್ ಟ್ರಸ್ ನಡುವೆ ಬಾರಿ ಪೈಪೋಟಿ ಇತ್ತು. ಅಂತಿಮವಾಗಿ ಲಿಜ್ ಟ್ರಸ್ 81,326 ಮತಗಳನ್ನು ಪಡೆದು ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಬ್ರಿಟನ್‍ನ ಮೂರನೇ ಮಹಿಳಾ ಪ್ರಧಾನಿಯಾಗಿ ಲೀಜ್ ಟ್ರಸ್ ಆಯ್ಕೆಯಾಗಿದ್ದಾರೆ.

ರಿಷಿ ಸುನಕ್ 60,399 ಮತಗಳನ್ನು ಪಡೆದು ಪರಾಭವಗೊಂಡರು

ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7 ರಂದು ಕನ್ಸರ್ವೇಟಿವ್ ಪಕ್ಷದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದೀಗ ನೂತನ ಪ್ರಧಾನಿಯಾಗಿ ಲಿಜ್ ಟ್ರಸ್ ಆಯ್ಕೆಗೊಂಡಿದ್ದಾರೆ.

Share This Article
Leave a comment