ಮೈಸೂರಿನ ನಿವೃತ್ತ ಪ್ರಿನ್ಸಿಪಾಲ್ ಪರಶಿವ ಮೂರ್ತಿ ಕೊಲೆ ಪ್ರಕರಣಕ್ಕೆ ಸಿನಿಮಾ ನಂಟಿರುವುದು ಬಯಲಾಗಿದೆ.
ಗಾಯಕಿ ಅನನ್ಯಾ ಭಟ್ ತಂದೆ ವಿಶ್ವನಾಥ್ ಭಟ್ ಜೊತೆಯಲ್ಲೇ ಮತ್ತೊಬ್ಬ ಆರೋಪಿ ಬಂಧಿತನಿಗೆ ಸಂಗೀತ ಸಿನಿಮಾ ನಂಟಿದೆ.
ಪರಶಿವಮೂರ್ತಿಯನ್ನು ಕೊಲೆ ಮಾಡಲು ಸುಫಾರಿ ಹಂತಕರಿಗೂ ಮತ್ತು ವಿಶ್ವನಾಥ್ ಭಟ್ ಗೂ ಮಧ್ಯವರ್ತಿಯಾಗಿ ವ್ಯವಹಾರ ಕುದುರಿಸಿದವನು ಸಿದ್ದರಾಜು ಎಂಬಾತ. ಸಿದ್ದರಾಜು ಸ್ಯಾಂಡಲ್ ವುಡ್ ಸಿನಿಮಾವೊಂದರ ನಿರ್ಮಾಪಕನಾಗಿದ್ದಾನೆ.
ಕೊಲೆ ಪ್ರಕರಣದ ನಾಲ್ಕನೆ ಆರೋಪಿಯಾಗಿರುವ ಸಿದ್ದರಾಜು ಸಾರೋಟ್ ಸಿನಿಮಾದ ನಿರ್ಮಾಪಕ. ಒಂದು ರೀತಿ ಕೊಲೆಯ ಮಾಸ್ಟರ್ ಮೈಂಡ್ ಕೂಡ. ತನ್ನ ಪುತ್ರ ಕಿರಣ್ ಹೀರೊ ಆಗಿರುವ ಸಿನಿಮಾ ಸಾರೋಟ್ ಗೆ ಸಿದ್ದರಾಜು ಬಂಡವಾಳ ಹೂಡಿದ್ದಾರೆ.
ಸಾರೋಟ್ ಸಿನಿಮಾ ಈಗಾಗಲೇ ಬಿಡುಗಡೆ ಆಗಬೇಕಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಇನ್ನು ಬಿಡುಗಡೆಯಾಗಿಲ್ಲ. ಇದರಿಂದ ಇನ್ನೂ ಬಿಡುಗಡೆ ಆಗಿಲಿರುವ ಸಿನಿಮಾದ ನಿರ್ಮಾಪಕ ಸಿದ್ದರಾಜು ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ.
More Stories
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ
ಸಿ.ಟಿ. ರವಿ ಮೇಲೆ ಹಲ್ಲೆ: ಕೊಲೆಗೆ ಸಂಚು ರೂಪಿಸಿದ್ದಾರೆಂದು ಆರೋಪ