ಆರ್ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪರವಾಗಿ ಇಂದು ಚುನಾವಣಾ ಪ್ರಚಾರ ನಡೆಸಿದರು.
ಮುನಿರತ್ನ ಪರ ಪ್ರಚಾರ ಮಾಡುತ್ತಿರುವುದು ಇದೇ ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಅವರ ಪರ ಪ್ರಚಾರ ಮಾಡಿದ್ದೇನೆ. ಕೊರೋನಾ ಸಮಯದಲ್ಲಿ ಮುನಿರತ್ನ ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ನೋಡಿದ್ದೇನೆ. ಸಾವಿರಾರು ಬಡ ಜನರಿಗೆ ಸಹಾಯ ಮಾಡಿದ್ದಾರೆ. ಅವರ ಕೆಲಸಗಳನ್ನು ನೋಡಿಯೇ ನಾನಿಂದು ಅವರ ಪರ ಪ್ರಚಾರ ಮಾಡುತ್ತಿದ್ದೇನೆ ಎಂದು ಈ ವೇಳೆ ನಟ ದರ್ಶನ್ ಹೇಳಿದ್ದಾರೆ.
ನಾನು ಯಾವುದೇ ಪಕ್ಷವನ್ನು ನೋಡಿ ಪ್ರಚಾರ ಮಾಡುವುದಿಲ್ಲ. ವ್ಯಕ್ತಿಯನ್ನು ನೋಡಿ ಪ್ರಚಾರ ಮಾಡುತ್ತಿದ್ದೇನೆ. ಕೊರೋನಾ ಲಾಕ್ಡೌನ್ ಸಮಯದಲ್ಲಿ ಬಡವರು, ಶ್ರೀಮಂತರು ಅನ್ನದೆ ಎಲ್ಲರೂ ಸಂಕಷ್ಟದಲ್ಲಿದ್ದರು. ಅಂಥವರಿಗೆ ಮುನಿರತ್ನ ಸಹಾಯಹಸ್ತ ನೀಡಿದ್ದರು. ನಾನೂ ಊಟಕ್ಕೆ, ಹಾಲು ಸಿಗದೆ ಸಮಸ್ಯೆ ಎದುರಿಸಿದ್ದೆ. ಆರ್ಆರ್ ನಗರದಲ್ಲಿ ಉತ್ತಮ ರಸ್ತೆಗಳಾಗಿವೆ, ಅಭಿವೃದ್ಧಿ ಕೆಲಸಗಳು ಆಗಿವೆ. ಅದನ್ನು ಗಮನದಲ್ಲಿಟ್ಟುಕೊಂಡು ನಾನು ಮುನಿರತ್ನ ಅವರ ಪರವಾಗಿ ಮತಯಾಚನೆ ಮಾಡುತ್ತಿದ್ದೇನೆ ಎಂದು ದರ್ಶನ್ ಹೇಳಿದ್ದಾರೆ.
More Stories
ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ