December 21, 2024

Newsnap Kannada

The World at your finger tips!

45b4b22c 272d 42da ac11 dc9113ebe135

ಸ್ಟಾರ್ ಗಳು ಮತದಾರರನ್ನು ಸೆಳೆಯಲು ಸಾಧ್ಯವಿಲ್ಲ – ಕುಮಾರಸ್ವಾಮಿ

Spread the love

ಸ್ಟಾರ್ ಕ್ಯಾಂಪೇನ್‌ನ ಮೂಲಕ ಯಾವುದೇ ಮತದಾರರನ್ನು ಸೆಳೆಯಲು ಸಾಧ್ಯವಿಲ್ಲ ಎಂದು ಹೆಚ್.ಡಿ. ಕುಮಾರಸ್ವಾಮಿ ಶುಕ್ರವಾರ ಶಿರಾದಲ್ಲಿ ಹೇಳಿದರು.

ಶಿರಾದ ಉಪಚುಣಾವಣೆಯ ‌ಪ್ರಚಾರದಲ್ಲಿ ತೊಡಗಿದ್ದ ಕುಮಾರಸ್ವಾಮಿ ಸುದ್ದಿ ಗಾರರೊಂದಿಗೆ ಮಾತನಾಡಿ ‘ಮಂಡ್ಯದ ಲೋಕಸಭಾ ಚುಣಾವಣೆಯಲ್ಲಿ‌ ರೈತ ಸಂಘ, ಬಿಜೆಪಿ, ಮಾಧ್ಯಮಗಳು ಅನುಕಂಪಪೂರಿತ ಒಲವು, ಕರುಣೆ ತೋರಿದುದರಿಂದ ಸುಮಲತಾ ಚುಣಾವಣೆಯಲ್ಲಿ‌ ಗೆದ್ದರು. ಈಗ ಚಿತ್ರತಾರೆಗಳನ್ನು ಕರೆದುಕೊಂಡು ಬಂದು ಪ್ರಚಾರ ಮಾಡಿಸುತ್ತಿದ್ದಾರೆ. ಸ್ಟಾರ್ ಕ್ಯಾಂಪೇನ್ ನಿಂದ ಯಾವುದೇ ರೀತಿಯಲ್ಲೂ ಮತದಾರರನ್ನು ಸೆಳೆಯಲು ಸಾಧ್ಯವಿಲ್ಲ’ ಎಂದು ಬಿಜೆಪಿ‌ ಪರ ಪ್ರಚಾರ ಮಾಡಲು ಒಪ್ಪಿರುವ ದರ್ಶನ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.

ಗೃಹ ಸಚಿವ ಆರ್‌. ಅಶೋಕ್ ಸೇರಿದಂತೆ ಶಿರಾಗೆ ಭೇಟಿ‌ ನೀಡಿ ಟಾಟಾ ಮಾಡಿ ಹೋಗಿದ್ದಾರೆ. ಆದರೆ ಇಲ್ಲಿನ ಸಮಸ್ಯೆಗಳ ಬಗ್ಗೆ ಯಾರು ಕೂಲಂಕುಶವಾಗಿ ಪರಶೀಲನೆ ನಡೆಸಿದ್ದಾರೆ? ಸಮಸ್ಯೆಗಳಿಗೆ ಪರಿಹಾರ ನೀಡುವ ಪ್ರಯತ್ನ ಯಾರು ಮಾಡಿದ್ದಾರೆ? ಎಂದು ಪ್ರಶ್ನೆಗಳ ಮಳೆಗರೆದರು.

Copyright © All rights reserved Newsnap | Newsever by AF themes.
error: Content is protected !!