ಯಡಿಯೂರಪ್ಪ ರಾಜೀನಾಮೆಗೆ ಕ್ಷಣ ಗಣನೆ – ಕುರಬೂರು

Team Newsnap
1 Min Read

ಯಡಿಯೂರಪ್ಪ ರಾಜೀನಾಮೆಗೆ ಕ್ಷಣಗಣನೆ ಪ್ರಾರಂಭವಾಗಿದೆ‌. ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.*

‘ಉತ್ತರ ಕರ್ನಾಟಕದಲ್ಲಿ ಸುರಿದ ಮಹಾಮಳೆಗೆ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದ್ದಲ್ಲದೇ ಅನೇಕ ಜನರು ನಿರಾಶ್ರಿತರಾಗಿದ್ದಾರೆ. ಆದರೆ ಇದುವರೆಗೂ ಕೇಂದ್ರದಿಂದ ಯಾವುದೇ ಪರಿಹಾರ ಬಂದಿಲ್ಲ‌.‌ ಬೇರೆ ರಾಜ್ಯಗಳಲ್ಲಿ ಪ್ರವಾಹವಾದರೆ ಪ್ರಧಾನಿಯವರು ವೈಮಾನಿಕ‌ ಸಮೀಕ್ಷೆ ನಡೆಸುತ್ತಾರೆ. ಆದರೆ ಕರ್ನಾಟಕದ ಬಗ್ಗೆ ಪ್ರಧಾನಿ‌ ನಿರ್ಲಕ್ಷ್ಯದ ಧೋರಣೆ ತಳೆದಿದ್ದಾರೆ’ ಎಂದು ಕಿಡಿ ಕಾರಿದರು.

‘ಪ್ರಧಾನಿಯವರು ರಾಜ್ಯದ ಕುರಿತು ನಡೆದು ಕೊಳ್ಳುತ್ತಿರವುದನ್ನು ನೋಡಿದರೆ ಯಡಿಯೂರಪ್ಪ ಸಂಕಷ್ಟ ಅನುಭವಿಸಿ ಸ್ವತಃ ರಾಜೀನಾಮೆ ನೀಡಲೆಂದು ಹೀಗೆ ಮಾಡುತ್ತಿದೆ. ಇದೆಲ್ಲವನ್ನೂ ಗಮನವಿಟ್ಟು ಆಲೋಚಿಸಿದರೆ ಮುಖ್ಯಂತ್ರಿಗಳು ರಾಜೀನಾಮೆ ನೀಡಲು ಕ್ಷಣಗಣನೆ ಆರಂಭವಾಗಿದೆ’ ಎಂದು ಪ್ರತಿಕ್ರಿಯಿಸಿದರು.

ಕಬ್ಬು ಬೆಳೆಯ ಸೂಜ್ತ ದರ ನಿಗದಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವ ಬಗ್ಗೆ ಮಾಹಿತಿ ನೀಡಿದ ಅವರು ‘ಕಬ್ಬು ಬೆಳೆಯ ವೈಜ್ಞಾನಿಕ ದರ ನಿಗದಿ ಮಾಡಲು ಸಕ್ಕರೆ ಸಚಿವ ಶಿವರಾಮ್ 15 ದಿನ ಕಾಲಾವಕಾಶ ಕೇಳಿದ್ದರು. ಅವರು ಹೇಳಿದ ಸಮಯ ಮುಗಿದರೂ ಬೆಲೆ ನಿಗದಿ ಮಾಡಲಿಲ್ಲ. ಹಾಗಾಗಿ ನವೆಂಬರ್ 2ರಂದು ದರ ನಿಗದಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ’ ಎಂದರು.

Share This Article
Leave a comment