December 23, 2024

Newsnap Kannada

The World at your finger tips!

bollywood,comedian,heart attack

popular comedian underwent emergency treatment for a heart attack while at the gym

ಜಿಮ್​ನಲ್ಲಿದ್ದಾಗ ಜನಪ್ರಿಯ ಹಾಸ್ಯ ನಟನಿಗೆ ಹೃದಯಾಘಾತ ತುರ್ತು ಚಿಕಿತ್ಸೆ

Spread the love

ಸ್ಟ್ಯಾಂಡ್-ಅಪ್ ಕಾಮಿಡಿಯನ್ ರಾಜು ಶ್ರೀವಾಸ್ತವ ಅವರಿಗೆ ಹೃದಯಾಘಾತ ಆಗಿದೆ.

ಜಿಮ್​​ನಲ್ಲಿದ್ದಾಗ ಹಾರ್ಟ್​​ ಅಟ್ಯಾಕ್ ಆಗಿದೆ, ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ನನ್ನ ಮಗ ಕಾಂಗ್ರೆಸ್ ಸೇರ್ಪಡೆ ಆಗುವುದು ನಿಜ: ಬಿಜೆಪಿ MLC ವಿಶ್ವನಾಥ್

ಜಿಮ್​​ನ ಟ್ರೆಡ್​ಮಿಲ್​​ನಲ್ಲಿ ವರ್ಕ್​ ಮಾಡ್ತಿದ್ದಾಗ ಎದೆನೋವಿನಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ತರಬೇತುದಾರರು ಏಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.

ಏಮ್ಸ್​ ಆಸ್ಪತ್ರೆಯ ಕಾರ್ಡಿಯಾಲಜಿ ಮತ್ತು ಎಮರ್ಜನ್ಸಿ ವಿಭಾಗದ ಡಾ.ನಿತೀಶ್ ನ್ಯಾಯ್ ನೇತೃತ್ವದಲ್ಲಿ ರಾಜು ಅವರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ.

ಏಮ್ಸ್​ ಆಸ್ಪತ್ರೆ ನೀಡಿರುವ ಮಾಹಿತಿ ಪ್ರಕಾರ, ಕಾಮಿಡಿಯನ್​​ಗೆ ‘ಕಾರ್ಡಿಯಾಕ್ ಅರೆಸ್ಟ್​’ ಆಗಿದೆ. ಅವರಿಗೆ ಎರಡು ಬಾರಿ CPR ಮಾಡಲಾಗಿದೆ ಎಂದು ತಿಳಿಸಿದೆ. ಇತ್ತ, ರಾಜು ಅವರ ಸಹೋದರ ಆಶಿಶ್ ಕೂಡ, ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಖಚಿತ ಪಡಿಸಿದ್ದಾರೆ. ಕಾನ್ಪುರ ಮೂಲದ ರಾಜು ಶ್ರೀವಾಸ್ತವ್, ‘ಉತ್ತರ ಪ್ರದೇಶ್ ಫಿಲ್ಮ್​ ಬೋರ್ಡ್​​’ನ ಅಧ್ಯಕ್ಷರಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!