ನುಪೂರ್ ಶರ್ಮಾಗೆ ರಿಲೀಫ್: ದಾಖಲಾಗಿರುವ ಎಲ್ಲಾ ಪ್ರಕರಣಗಳ ವಿಚಾರಣೆ ದೆಹಲಿಗೆ

Team Newsnap
1 Min Read
Relief for Nupur Sharma: All the cases filed will be heard in Delhi

ಬಿಜೆಪಿಯ ರಾಷ್ಟ್ರೀಯ ಮಾಜಿ ವಕ್ತಾರೆ ನುಪೂರ್ ಶರ್ಮಾ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್​ಐಆರ್​ಗಳ ವಿಚಾರಣೆಯು ದೆಹಲಿಯಲ್ಲಿ ನಡೆಸುವಂತೆ ಸುಪ್ರೀಂಕೋರ್ಟ್​ ಮಹತ್ವದ ಆದೇಶವನ್ನು ನೀಡಿದೆ.

ಪ್ರವಾದಿ ಮೊಹಮ್ಮದ್ ಕುರಿತ ಹೇಳಿಕೆಗೆ ಸಂಬಂಧಿಸಿ ದೇಶದ ವಿವಿಧ ಭಾಗಗಳಲ್ಲಿ ನುಪೂರ್ ಶರ್ಮಾ ವಿರುದ್ಧ ಪ್ರಕರಣಗಳು ದಾಖಲಾಗಿವೆ.ಇದನ್ನು ಓದಿ –ಜಿಮ್​ನಲ್ಲಿದ್ದಾಗ ಜನಪ್ರಿಯ ಹಾಸ್ಯ ನಟನಿಗೆ ಹೃದಯಾಘಾತ ತುರ್ತು ಚಿಕಿತ್ಸೆ

ಈ ಎಲ್ಲಾ ಪ್ರಕರಣಗಳ ವಿಚಾರಣೆಯನ್ನ ದೆಹಲಿಗೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್​ ಸೂಚನೆ ನೀಡಿದೆ. ಜೊತೆಗೆ ಎಫ್‌ಐಆರ್ ದಾಖಲಾದ ಯಾವುದೇ ರಾಜ್ಯದ ಪೊಲೀಸರು, ತನಿಖೆಯ ಸಮಯದಲ್ಲಿ ಸಲಹೆಗಳನ್ನು ನೀಡಲು ಬಯಸಿದರೆ ಖಂಡಿತವಾಗಿಯೂ ನೀಡಬಹುದು ಎಂದು ಕೋರ್ಟ್ ಹೇಳಿದೆ.

ನುಪೂರ್ ಶರ್ಮಾಗೆ ರಿಲೀಫ್ 
ಜುಲೈ 19 ರಂದು ನಡೆದ ವಿಚಾರಣೆ ವೇಳೆ ಆಗಸ್ಟ್​ 10 ವರೆಗೆ ನುಪೂರ್ ಶರ್ಮಾರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಹೇಳಿತ್ತು. ಅಲ್ಲದೇ ನೂಪುರ್ ಶರ್ಮಾ ವಿರುದ್ಧ ಬಲವಂತವಾಗಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದಿತ್ತು. ‘

ಅವರ ಜೀವಕ್ಕೆ ಅಪಾಯವಿದೆ’ ಎಂದು ವಿಚಾರಣೆ ವೇಳೆ ನೂಪುರ್ ಶರ್ಮಾ ಪರ ವಕೀಲರು ವಾದ ಮಂಡಿಸಿದ್ದರು.

Share This Article
Leave a comment