December 23, 2024

Newsnap Kannada

The World at your finger tips!

school,elephant,students

Lone elephant breaks into residential school: Students panic ವಸತಿ ಶಾಲೆಗೆ ನುಗ್ಗಿದ ಒಂಟಿ ಸಲಗ: ವಿದ್ಯಾರ್ಥಿಗಳು ಆತಂಕದಲ್ಲಿ #thenewsnap #school #Elephant #forest #Latestnews #bandipur #Mandya_news #mysuru

ವಸತಿ ಶಾಲೆಗೆ ನುಗ್ಗಿದ ಒಂಟಿ ಸಲಗ: ವಿದ್ಯಾರ್ಥಿಗಳು ಆತಂಕದಲ್ಲಿ

Spread the love

ಬಿಳಿಗಿರಿರಂಗನ ಬೆಟ್ಟದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ಬುಧವಾರ ಬೆಳಿಗ್ಗೆ ಕಾಡಾನೆ ಲಗ್ಗೆ ಇಟ್ಟು ವಿದ್ಯಾರ್ಥಿಗಳು ಆತಂಕಕ್ಕೆ ಈಡಾಗಿದ್ದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ತಂತಿ ಬೇಲಿಯನ್ನು ಕಿತ್ತು ಆನೆಯು ಒಳ ಪ್ರವೇಶಿಸಿದೆ.ಇದನ್ನು ಓದಿ –ಬೈಯ್ಯಪ್ಪನಹಳ್ಳಿ – ಕೆ.ಆರ್. ಪುರಂ ಮೆಟ್ರೋ ಟೆಸ್ಟ್ ಟ್ರಯಲ್: ಡಿಸೆಂಬರ್‌ಗೆ ವೈಟ್‌ಫೀಲ್ಡ್‌ಗೆ ಮೆಟ್ರೋ

ಬೆಳಗಿನ ಜಾವ 5. 45 ಸಮಯದಲ್ಲೇ ಇಲ್ಲಿನ ಸಿಬ್ಬಂದಿಯು ಕುಡಿಯುವ ನೀರಿನ ಮೋಟರ್ ಸ್ವಿಚ್ ಆನ್ ಮಾಡಲು ತೆರಳುತ್ತಿರುವಾಗ ಆನೆಯನ್ನು ನೋಡಿದ್ದಾರೆ.

ತಕ್ಷಣ ಈ ಬಗ್ಗೆ ಶಾಲೆಯ ಶಿಕ್ಷಕರ ವರ್ಗದವರಿಗೆ ತಿಳಿಸಿ ಶಾಲಾ ಮಕ್ಕಳನ್ನು ಕೊಠಡಿ ಒಳಗೆ ಇರಿಸಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿಯನ್ನು ತಿಳಿಸಿದ್ದಾರೆ.

ತಕ್ಷಣ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಏರ್ ಗನ್ , ಪಟಾಕಿ ಸಿಡಿಸುವ ಮೂಲಕ ಕಾರ್ಯಾಚರಣೆ ಮಾಡಿ ಆನೆಯನ್ನು ಶಾಲೆಯಿಂದ ಹೊರ ಹೋಗುವ ರೀತಿಯಲ್ಲಿ ಕಾಯ೯ಚರಣೆಯನ್ನು ಮಾಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!