ಬೈಯ್ಯಪ್ಪನಹಳ್ಳಿ – ಕೆ.ಆರ್. ಪುರಂ ಮೆಟ್ರೋ ಟೆಸ್ಟ್ ಟ್ರಯಲ್: ಡಿಸೆಂಬರ್‌ಗೆ ವೈಟ್‌ಫೀಲ್ಡ್‌ಗೆ ಮೆಟ್ರೋ

Team Newsnap
1 Min Read

ಸೆಪ್ಟೆಂಬರ್‌ನಿಂದ ಪರ್ಪಲ್ ಲೈನ್ ಎಕ್ಸ್‌ಟೆನ್ಷನ್ ಟ್ರಯಲ್ ರನ್ ಶುರುವಾಗುತ್ತಿದೆ. ಇದರಿಂದ ಟ್ರಾಫಿಕ್ ದಟ್ಟಣೆಯ ಬೈಯಪ್ಪನಹಳ್ಳಿಯಿಂದ, ಕೆ.ಆರ್ ಪುರಂವರೆಗಿನ ಟೆಸ್ಟ್ ಟ್ರಯಲ್ ಮಾಡಲಿದೆ.

ವೈಟ್‌ಫೀಲ್ಡ್‌ವರೆಗಿನ ವಿಸ್ತರಣೆಯನ್ನು ಇದೇ ಡಿಸೆಂಬರ್ ಹೊತ್ತಿಗೆ ಮುಗಿಸಲು ಬಿಎಂಆರ್‌ಸಿಎಲ್ ಯೋಜನೆ ರೂಪಿಸಿದೆ.ಇದನ್ನು ಓದಿ –ಸುಳ್ಯದಲ್ಲಿ ಬಿಜೆಪಿ ಮುಖಂಡ ಪ್ರವೀಣ್​​ ನೆಟ್ಟಾರು ಬರ್ಬರ ಹತ್ಯೆ : ಉದ್ವಿಗ್ನ ಸ್ಥಿತಿ

2ನೇ ಹಂತದಲ್ಲಿ ಮುಖ್ಯವಾಗಿ ಎಲೆಕ್ಟ್ರಾನಿಕ್ ಸಿಟಿ ಮಾರ್ಗ, ಸಿಲ್ಕ್ ಬೋರ್ಡ್ ಟು ಕೆಆರ್ ಪುರಂ ಮಾರ್ಗ, ಹಾಗೇ ವೈಟ್ ಫೀಲ್ಡ್ ಮಾರ್ಗದಲ್ಲಿ ಮೆಟ್ರೋ ಸಂಚರಿಸಲಿದೆ.

ಐಟಿ, ಬಿಟಿ ಕಂಪನಿಗಳು ಹೆಚ್ಚಾಗಿವೆ , ಪೀಕ್ ಅವರ್ಸ್‍ನಲ್ಲಿ ಸಾಕಷ್ಟು ಜನದಟ್ಟನೆ ಆಗುವ ಬಗ್ಗೆ ತಜ್ಞರು ಎಚ್ಚರಿಸಿದ್ದಾರೆ.

ಮೆಟ್ರೋ ಬೋಗಿಗಳನ್ನು 6ರ ಬದಲಾಗಿ 8ಕ್ಕೆ ಏರಿಸಲು ಸಲಹೆ ನೀಡಲಾಗಿತ್ತು. ಆದರೆ ಬಿಎಂಆರ್‌ಸಿಎಲ್ 8 ಬೋಗಿ ಮಾಡಿದರೆ ಸ್ಟೇಷನ್ ಸ್ಟ್ರಕ್ಚರ್ ಬದಲಾಯಿಸಬೇಕು. ದೊಡ್ಡ ಸ್ಟೇಷನ್ ನಿರ್ಮಾಣಕ್ಕೆ ಭೂಸ್ವಾಧೀನ ಸೇರಿ ಹೆಚ್ಚಿನ ಹಣ ವೆಚ್ಚವಾಗಲಿದೆ. ಹೀಗಾಗಿ ಬೋಗಿ ಜಾಸ್ತಿ ಮಾಡುವುದಕ್ಕಿಂತ ರೈಲಿನ ಸಂಖ್ಯೆ ಹೆಚ್ಚಿಸುವುದು ಸೂಕ್ತ ಎಂದು ತೀರ್ಮಾನಿಸಿದೆ.

ಎರಡನೇ ಹಂತದಲ್ಲಿ ಪ್ರತಿ ಎರಡು ನಿಮಿಷಕ್ಕೊಂದು ಟ್ರೈನ್ ಓಡಿಸುವ ತಂತ್ರಜ್ಞಾನವನ್ನು ಅಳವಡಿಸುವುದಕ್ಕೆ ಬಿಎಂಆರ್‌ಸಿಎಲ್ ಮುಂದಾಗಿದೆ.

Share This Article
Leave a comment