ಪಾಕ್ ಮಹಿಳಾ ಏಜೆಂಟರ ಹನಿಟ್ರ್ಯಾಪ್‍ಗೆ ಸಿಲುಕಿದ ಸೇನಾ ಸಿಬ್ಬಂದಿ – ಮಾಹಿತಿ ಸೋರಿಕೆ

Team Newsnap
2 Min Read
Army personnel caught in the honeytrap of Pakistani female agents - information leak ಪಾಕ್ ಮಹಿಳಾ ಏಜೆಂಟರ ಹನಿಟ್ರ್ಯಾಪ್‍ಗೆ ಸಿಲುಕಿದ ಸೇನಾ ಸಿಬ್ಬಂದಿ – ಮಾಹಿತಿ ಸೋರಿಕೆ #Thenewsnap #Latestnews #INDvsPAK #Honey_trap #Indian_army #soldiers #Bengaluru #Mandya_News #NEWS

ಭಾರತೀಯ ಸೇನಾ ಸಿಬ್ಬಂದಿಯೊಬ್ಬ. ಇಬ್ಬರು ಮಹಿಳಾ ಪಾಕಿಸ್ತಾನದ ಹನಿಟ್ರ್ಯಾಪ್‍ಗೆ ಸಿಲುಕಿ ಮಾಹಿತಿ ಸೋರಿಕೆ ಮಾಡಿರುವ ಆರೋಪದಲ್ಲಿ ಬಂಧಿಸಲಾಗಿದೆ.

ಪಾಕಿಸ್ತಾನಿ ಮಹಿಳಾ ಏಜೆಂಟರು ಭಾರತೀಯ ಸೇನಾ ಸಿಬ್ಬಂದಿ ಶಾಂತಿಮಯ್ ರಾಣಾ(24)ನನ್ನು ಹನಿಟ್ರ್ಯಾಪ್ ಮಾಡಿದ್ದಾರೆ.ಇದನ್ನು ಓದಿ –ವಸತಿ ಶಾಲೆಗೆ ನುಗ್ಗಿದ ಒಂಟಿ ಸಲಗ: ವಿದ್ಯಾರ್ಥಿಗಳು ಆತಂಕದಲ್ಲಿ

ಈ ಹಿನ್ನೆಲೆ ಪಾಕಿಸ್ತಾನಕ್ಕೆ ಸೇನಾ ಮಾಹಿತಿಯನ್ನು ಸೋರಿಕೆ ಮಾಡಿದ್ದಾನೆ ಎಂಬ ಆರೋಪದ ಮೇಲೆ ರಾಣಾನನ್ನು ಪೊಲೀಸರು ಬಂಧಿಸಿದ್ದಾರೆ.

ರಾಣಾ ಪಶ್ಚಿಮ ಬಂಗಾಳದ ಬಾಗುಂದ ಜಿಲ್ಲೆಯ ಕಾಂಚನಪುರ ಗ್ರಾಮದ ನಿವಾಸಿ. ಅವನನ್ನು ಜೈಪುರದ ಘಟಕದಲ್ಲಿ ನಿಯೋಜಿಸಲಾಗಿತ್ತು. ರಾಜಸ್ಥಾನ ಪೊಲೀಸ್ ಗುಪ್ತಚರ ವಿಭಾಗದ ಮಹಾನಿರ್ದೇಶಕ ಉಮೇಶ್ ಮಿಶ್ರಾ ಈ ಕುರಿತು ಮಾತನಾಡಿ, ಪಾಕಿಸ್ತಾನದ ಏಜೆಂಟ್‍ಗಳಾದ ಗುರ್ನೌರ್ ಕೌರ್ ಅಲಿಯಾಸ್ ಅಂಕಿತಾ ಮತ್ತು ನಿಶಾ ಸೋಶಿಯಲ್ ಮೀಡಿಯಾ ಮೂಲಕ ರಾಣಾನನ್ನು ಸಂಪರ್ಕಿಸಿದ್ದಾರೆ ಎಂದು ವಿವರಿಸಿದ್ದಾರೆ.

ಇಬ್ಬರು ಮಹಿಳೆಯರು ರಾಣಾ ನಂಬರ್ ತೆಗೆದುಕೊಂಡು, ವಾಟ್ಸಾಪ್‍ನಲ್ಲಿ ಮಾತನಾಡುತ್ತಿದ್ದರು. ಮಹಿಳೆಯರು ಮೊದಲು ರಾಣಾನ ವಿಶ್ವಾಸವನ್ನು ಪಡೆದುಕೊಂಡಿದ್ದಾರೆ. ನಂತರ ಇಬ್ಬರು ರಾಣಾ ಬಳಿ ಗುಪ್ತಚರ ಮಾಹಿತಿಯನ್ನು ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ರಾಣಾ ಖಾತೆಗೂ ಒಂದಷ್ಟು ಹಣವನ್ನು ಹಾಕುತ್ತಿದ್ದರು ಎಂದು ತಿಳಿಸಿದ್ದಾರೆ.

ಸಂಪರ್ಕ ಮಾಡಿದ್ದು ಹೇಗೆ? :

ಮಾರ್ಚ್ 2018 ರಿಂದ ರಾಣಾ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ. ಈ ವಿಚಾರವನ್ನು ತಿಳಿದುಕೊಂಡೆ ಪಾಕ್ ಮಹಿಳಾ ಏಜೆಂಟ್‍ರು ರಾಣಾನನ್ನು ಪರಿಚಯ ಮಾಡಿಕೊಂಡಿದ್ದಾರೆ. ನಂತರ ನಂಬರ್ ತೆಗೆದುಕೊಂಡು ವಾಟ್ಸಾಪ್ ಚಾಟ್, ವೀಡಿಯೋ ಮತ್ತು ಆಡಿಯೋ ಸಂದೇಶಗಳ ಮೂಲಕ ಮಹಿಳೆಯರು ಸಂಪರ್ಕದಲ್ಲಿದ್ದರು.

ಒಬ್ಬಳು ತನ್ನನ್ನು ಶಹಜಹಾನ್‍ಪುರ(ಉತ್ತರ ಪ್ರದೇಶ) ನಿವಾಸಿ ಎಂದು ರಾಣಾ ಬಳಿ ಪರಿಚಯ ಮಾಡಿಕೊಂಡಿದ್ದು, ಅಲ್ಲಿ ಮಿಲಿಟರಿ ಇಂಜಿನಿಯರಿಂಗ್ ಕೆಲಸ ಮಾಡುತ್ತಿದ್ದೆ ಎಂದು ಹೇಳಿಕೊಂಡಿದ್ದಳು. ಇನ್ನೊಬ್ಬ ಮಹಿಳೆ ತನ್ನ ಹೆಸರನ್ನು ನಿಶಾ, ತಾನು ಮಿಲಿಟರಿ ನರ್ಸಿಂಗ್‍ನಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಳು.

ಯೋಧ ರಾಣಾ ಸಹ ಇಬ್ಬರನ್ನು ನಂಬಿ, ಅವರು ಕೇಳಿದ ಗೌಪ್ಯ ದಾಖಲೆಗಳು, ಫೋಟೋ, ವೀಡಿಯೊಗಳನ್ನು ಕಳುಹಿಸಿದ್ದಾನೆ. ಅಲ್ಲದೇ ರಾಣಾ ತನ್ನ ರೆಜಿಮೆಂಟ್‍ನ ರಹಸ್ಯ ದಾಖಲೆಗಳು ಮತ್ತು ವ್ಯಾಯಾಮದ ವೀಡಿಯೋಗಳನ್ನು ಸಹ ಕಳುಹಿಸಿದ್ದ ಎಂದು ಗುಪ್ತಚಾರ ಇಲಾಖೆ ಮಾಹಿತಿ ಕೊಟ್ಟಿದೆ.

Share This Article
Leave a comment