ಮೋಜು ಮಸ್ತಿಗಾಗಿ ದೊಡ್ಡಪ್ಪನ ಮನೆಯಲ್ಲೇ ತನ್ನ ಪ್ರಿಯಕರನಿಂದ ಕಳ್ಳತನ ಮಾಡಿಸಿ 19 ರ ಪ್ರಾಯದ ಯುವತಿಯೊಬ್ಬಳು ಪೊಲೀಸರ ಅತಿಥಿಯಾಗಿದ್ದಾಳೆ
ಬೆಂಗಳೂರಿನ ಪೀಣ್ಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯಲ್ಲಿ ದೀಕ್ಷಿತಾ (19), ಮಧು (19) ಎಂಬ ಬಂಧಿತರಿಂದ 30 ಸಾವಿರ ನಗದು, 200ಗ್ರಾಂ ನಷ್ಟು ಚಿನ್ನಾಭರಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ತಾನು ಪ್ರೀತಿ ಮಾಡುತ್ತಿದ್ದ ಮಧು ಬಳಿ ಖರ್ಚಿಗೆ ಹಣವಿಲ್ಲ ಎಂದಿದ್ದಕ್ಕೆ ಬಿಕಾಂ ಓದುತ್ತಿದ್ದ ದೀಕ್ಷಿತಾ ಖತರ್ನಾಕ್ ಫ್ಲಾನ್ ಮಾಡಿದ್ದಳು ಎನ್ನಲಾಗಿದೆ. 15 ವರ್ಷದ ಹುಡುಗನಿಗೆ 33 ಲಕ್ಷ ರು ಸಂಬಳದ ಆಫರ್ ಕೊಟ್ಟ ಅಮೇರಿಕಾ ಕಂಪನಿ !
ಮಾಟ ಮಂತ್ರದ ಮಂಕು ಬೂದಿ ಎರಚಿ ದೊಡ್ಡಪ್ಪನ ಮನೆಯಲ್ಲೇ ಕಳ್ಳತನ ಮಾಡಲು ಮೆಡಿಕಲ್ ಓದುತ್ತಿದ್ದ ಲವರ್ ಮಧು ಜೊತೆ ಸೇರಿ ಇಬ್ಬರು ಪ್ಲಾನ್ ಸಿದ್ಧಪಡಿಸಿದ್ದಳಂತೆ. ಇದರಂತೆ ಮಾಟ ಮಂತ್ರದ ವಸ್ತುಗಳನ್ನು ಮನೆಯ ಕಾಂಪೌಂಡ್ನಲ್ಲಿಟ್ಟು ಮನೆಯವರ ಗಮನ ಬೇರೆಡೆ ಸೆಳೆದಿದ್ದರು.
ಪ್ಲಾನ್ನಂತೆ ಮನೆಯ ಕಾಂಪೌಂಡ್ ಬಳಿ ನಿಂಬೆ ಹಣ್ಣು ಎಲ್ಲಾ ಇಟ್ಟು ಮನೆಯವರೆಲ್ಲರನ್ನು ದೀಕ್ಷಿತಾ ಹೊರಗೆ ಕರೆದಿದ್ದಳು. ಮನೆಯವರು ಹೊರ ಬರುತ್ತಿದ್ದಂತೆ ಮನೆಯ ಮುಂದೆ ಯಾರೋ ವಾಮಾಚಾರ ಮಾಡಿದ್ದಾರೆ ಎಂದು ಯುವತಿ ಕಥೆ ಕಟ್ಟಿದ್ದಳು. ಒಂದೇ ನಾಣ್ಯಕ್ಕೆ ಎರಡು ಮುಖಗಳು(ಬ್ಯಾಂಕರ್ಸ್ ಡೈರಿ)
ಮಾಟ ಮಂತ್ರದ ವಸ್ತುಗಳನ್ನು ಶುಚಿಗೊಳಿಸುವ ಗ್ಯಾಪ್ನಲ್ಲಿ ತನ್ನ ಕೈಚಳಕ ತೋರಿದ್ದ ಮಧು, ಮನೆಯಲ್ಲಿದ್ದ 90 ಸಾವಿರ ರೂಪಾಯಿ ಹಣ, 200 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದನು.
ಈ ಘಟನೆ ಕುರಿತಂತೆ ದೂರು ಬಂದ ತಕ್ಷಣ ವಿಚಾರಣೆ ಆರಂಭಿಸಿದ ಪೊಲೀಸರಿಗೆ ಲವ್ವರ್ಸ್ ಕಳ್ಳಾಟ ತಿಳಿದು ಬಂದಿದೆ. ಬಂಧಿತ ದೀಕ್ಷಿತಾ, ಬಿಕಾಂ ಓದುತ್ತಿದ್ದು, ಮಧು ಮೆಡಿಕಲ್ ಓದುತ್ತಿದ್ದ. ಖರ್ಚು ಮಾಡಲು ಹಣವಿಲ್ಲದ ಕಾರಣ ಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.
ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
- ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
More Stories
ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ