ಹಲವು ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿ ತೆರಿಗೆ ದರ ಹೆಚ್ಚಿಸಿರುವ ಜಿಎಸ್ಟಿ ಮಂಡಳಿಯ ನಿರ್ಧಾರ ನಾಳೆಯಿಂದ ಜಾರಿ ಬರಲಿದೆ.
ಜಿಎಸ್ಟಿ ಮಂಡಳಿ ಮೊಸರು, ಮಜ್ಜಿಗೆ ಮತ್ತು ಲಸ್ಸಿ ಮೇಲೆ ಶೇ.5 ರಷ್ಟು ಜಿಎಸ್ಟಿ ವಿಧಿಸಿರುವ ಕಾರಣ ನಾಳೆಯಿಂದ ಹೊಸ ದರದಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಆಗಲಿದೆ.ಇದನ್ನು ಓದಿ –ಜಿಲ್ಲಾಧಿಕಾರಿ ಹೆಸರಲ್ಲಿ ನಕಲಿ ಫೇಸ್ ಬುಕ್ ಖಾತೆ, ವಾಟ್ಸಪ್ ಮೆಸೇಜ್; ಹಣಕ್ಕೆ ಕಿಡಿಗೇಡಿಗಳಿಂದ ಬೇಡಿಕೆ
ಈಗಿರುವ ಬೆಲೆಯಿಂದ 1 ರಿಂದ 3 ರೂಪಾಯಿವರೆಗೆ ಬೆಲೆ ಏರಿಕೆ ಆಗಲಿದೆ, ಹಾಲಿನ ದರದಲ್ಲಿ ಮಾತ್ರ ಯಾವುದೇ ಬದಲಾವಣೆ ಆಗುವುದಿಲ್ಲ. ಉಳಿದಂತೆ, 43 ರೂಪಾಯಿ ಇದ್ದ ಒಂದು ಲೀಟರ್ ಮೊಸರಿನ ಬೆಲೆ 46 ರೂಪಾಯಿ ಆಗಲಿದೆ, ಅರ್ಧ ಲೀಟರ್ ಮೊಸರಿಗೆ 22 ರು ಅದು ಈಗ 24 ರೂಪಾಯಿ ಹೇರಿಕೆ ಆಗಲಿದೆ. 200 ಎಂಎಲ್ ಪ್ಯಾಕೆಟ್ ಬೆಲೆ ಮೇಲೆ 1 ರೂಪಾಯಿ ಹೆಚ್ಚಳವಾಗಲಿದೆ.
ಜಿಎಸ್ಟಿ ಕೌನ್ಸಿಲ್ ಇತ್ತೀಚೆಗೆ ನಡೆಸಿದ 47ನೇ ಸಭೆಯಲ್ಲಿ ಪ್ಯಾಕೇಜ್ ಮಾಡಿದ ಡೈರಿ ಉತ್ನನ್ನಗಳಿಗೆ ನೀಡಿದ್ದ ತೆರಿಗೆ ವಿನಾಯಿತಿಯನ್ನು ಹಿಂಪಡೆದು, ಶೇ.5ರಷ್ಟು ತೆರಿಗೆ ವಿಧಿಸಲು ನಿರ್ಧರಿಸಿತ್ತು. ಜಿಎಸ್ಟಿ ಮಂಡಳಿಯ ಈ ನಿರ್ಧಾರ ಈಗಾಗಲೇ ಹೈನುಗಾರಿಕೆ ವೆಚ್ಚ ನಿಭಾಯಿಸಲು ಹೆಣಗಾಡುತ್ತಿದ್ದ ಹೈನುಗಾರಿಕೆ ಕ್ಷೇತ್ರದ ಮೇಲೆ ತೀವ್ರ ಪ್ರಭಾವ ಬೀರುವ ಸಾಧ್ಯತೆ ಇದೆ.
- ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
- IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
- ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
- ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ