December 19, 2024

Newsnap Kannada

The World at your finger tips!

murder

sibling's children's entry was also the reason for Sarla Vastu Guruji's murder: ಸರಳ ವಾಸ್ತು ಗುರೂಜಿ ಹತ್ಯೆಗೆ ಅಣ್ಣನ ಮಕ್ಕಳ ಎಂಟ್ರಿಯೂ ಕಾರಣ : ವಾಟ್ಸಾಪ್ ಸಂದೇಶದಿಂದ ಬಹಿರಂಗ

ಚಂದ್ರಶೇಖರ ಗುರೂಜಿ ಮೂಲ ಬಾಗಲಕೋಟೆ, ವಾಸ ಮುಂಬೈ – ಸಾವಿರಾರು ಕೋಟಿ ಒಡೆಯನ ಅಂತ್ಯಕ್ರಿಯೆ ಇಂದು

Spread the love

ದೇಶಾದ್ಯಂತ ಸರಳ ವಾಸ್ತು ಬಗ್ಗೆ ಸಲಹೆ ನೀಡುತ್ತಿದ್ದ ಗುರೂಜಿ ಬಾಗಲಕೋಟೆ ಮೂಲದವರು. ಮುಂಬೈ ನಲ್ಲಿ ವಾಸವಾಗಿದ್ದರು. ಮುಂಬೈ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಹಲವೆಡೆ ಕಚೇರಿ ಸ್ಥಾಪಿಸಿದ ಸಾವಿರಾರು ಕೋಟಿ ರು ಆಸ್ತಿ ಒಡೆಯ ಚಂದ್ರಶೇಖರ್ ಗುರೂಜಿಯ ಅಂತ್ಯ ಕ್ರಿಯೆ ಇಂದು ಮಧ್ಯಾಹ್ನ ಹುಬ್ಬಳ್ಳಿ ಬಳಿ ನಡೆಯಲಿದೆ.

ಚಂದ್ರಶೇಖರ ಗುರೂಜಿ ಅವರು ಬಾಗಲಕೋಟೆ ಮೂಲದವರು. ಇವರ ಮೊದಲ ಹೆಸರು ಚಂದ್ರಶೇಖರ ವಿರುಪಾಕ್ಷಪ್ಪ ಅಂಗಡಿ. ಬಾಗಲಕೋಟೆಯಲ್ಲೇ ವಿದ್ಯಾಭ್ಯಾಸ ಮಾಡಿದ್ದ ಇವರು ಬಾಗಲಕೋಟೆ ಬಸವೇಶ್ವರ ಇಂಜನಿಯರಿಂಗ್ ಕಾಲೇಜಿನಲ್ಲಿ BE Civil ವಿಭಾಗದಲ್ಲಿ ಪದವಿ ಪಡೆದರು. ಬಳಿಕ 1998ರಲ್ಲಿ ಮುಂಬೈಗೆ ತೆರಳಿ ಕಾಂಟ್ರಾಕ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದ್ದರು.

ಐದಾರು ವರ್ಷಗಳ ಬಳಿಕ ಸಿಂಗಾಪುರಕ್ಕೆ ತೆರಳಿದ ಚಂದ್ರಶೇಖರ ಅವರು ವಾಸ್ತು ಶಾಸ್ತ್ರ ಕಲಿತರು. ವಾಪಸ್​ ಮುಂಬೈಗೆ ಆಗಮಿಸಿ ‘ಸರಳ ವಾಸ್ತು’ ಹೆಸರಿನಲ್ಲಿ ಕಚೇರಿ ಆರಂಭಿಸಿದ್ದರು.

ಚಂದ್ರಶೇಖರ ಗುರೂಜಿ ಅವರಿಗೆ ಇಬ್ಬರು ಸಹೋದರರು, ಮೂವರು ಸಹೋದರಿಯರು. ಮೊದಲ ಪತ್ನಿಯ ನಿಧನದ ಬಳಿಕ ಶಿವಮೊಗ್ಗ ಜಿಲ್ಲೆ ಮಂಡಗದ್ದೆ ಸಮೀಪದ ಹೆಮ್ಮಕ್ಕಿ ಗ್ರಾಮದ ಅಂಕಿತಾ ಎಂಬುವರನ್ನು ಎರಡನೇ ಮದುವೆಯಾದರು. ಪುತ್ರಿ ಅಂಕಿತಾ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಬಾಗಲಕೋಟೆ ಬಿಟ್ಟು 30 ವರ್ಷ ಆಗಿತ್ತು. ಅಪರೂಪಕ್ಕೊಮ್ಮೆ ತವರು ಜಿಲ್ಲೆಗೆ ಬರುತ್ತಿದ್ದ ಚಂದ್ರಶೇಖರ ಗುರೂಜಿ, ಹೆಚ್ಚಾಗಿ ಮುಂಬೈನಲ್ಲೇ ನೆಲೆಸಿದ್ದರು. ಸಾವಿರಾರು ಕೋಟಿ ಆಸ್ತಿ ಒಡೆಯರಾಗಿದ್ದ ಚಂದ್ರಶೇಖರ ಗುರೂಜಿ, ನೂರಾರು ಜನರಿಗೆ ಉದ್ಯೋಗವನ್ನು ನೀಡಿದ್ದರು.

ಚಂದ್ರಶೇಖರ ಗುರೂಜಿ ಅವರು 2 ದಿನದ ಹಿಂದೆ ಹುಬ್ಬಳ್ಳಿಗೆ ಆಗಮಿಸಿದ್ದರು. ನಾಲ್ಕು ದಿನದ ಮಟ್ಟಿಗೆ ಪ್ರೆಸಿಡೆಂಟ್​ ಹೋಟೆಲ್​ನಲ್ಲಿ 220ನೇ ನಂಬರ್​ನ ರೂಮ್​ ಪಡೆದಿದ್ದರು.

ಗುರುವನ್ನೇ ಹತ್ಯೆ ಮಾಡಿದ ಇಬ್ಬರು ಪಾಪಿಗಳನ್ನು ಪೋಲಿಸರು ಬಂಧಿಸಿದ್ದೇ ರೋಚಕ ಕಥೆ

ಈ ದಿನ ಬುಧವಾರ ರೂಮ್​ ನ್ನು ಚಕೌಟ್ ಮಾಡಬೇಕಿತ್ತು. ಅಷ್ಟರಲ್ಲಿ ನಿನ್ನೆ ಮಧ್ಯಾಹ್ನ ಭಕ್ತರ ಸೋಗಲ್ಲಿ ಬಂದ ಯುವಕರಿಬ್ಬರು ಹೋಟೆಲ್​ನ ರಿಸೆಪ್ಶನ್​ನಲ್ಲೇ ಗುರೂಜಿ ಅವರನ್ನ 60ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಚುಚ್ಚಿ ಕೊಂದು ಪರಾರಿಯಾದ ಇಬ್ಬರು ಆರೋಪಿಗಳನ್ನು ಬೆಳಗಾವಿಯ ರಾಮದುರ್ಗದಲ್ಲಿ ಪೊಲೀಸರು ಬಂಧಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!