December 19, 2024

Newsnap Kannada

The World at your finger tips!

WhatsApp Image 2022 06 09 at 7.42.43 PM

daughter of Limbavali quarrels with Traffic Police - 10 thousand rupees fine

ಟ್ರಾಫಿಕ್​​ ಪೊಲೀಸ್​​​ ಜತೆ ಲಿಂಬಾವಳಿ ಪುತ್ರಿ ಕಿರಿಕ್​​ – 10 ಸಾವಿರ ರು ದಂಡ ವಸೂಲಿ

Spread the love

ಮಾಜಿ ಸಚಿವ, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ಟ್ರಾಫಿಕ್​​​ ಪೊಲೀಸರ ಜೊತೆ ಗಲಾಟೆ ಮಾಡಿ ರಂಪಾಟ ಮಾಡಿದ್ದಾರೆ. ಈ ಘಟನೆ ಸಿಲಿಕಾನ್​ ಸಿಟಿಯ ಕ್ಯಾಪಿಟಲ್‌ ಹೋಟೆಲ್‌ ಬಳಿ ನಡೆದಿದೆ.

WhatsApp Image 2022 06 09 at 7.42.32 PM

ಇದನ್ನು ಓದಿ –PSI ನೇಮಕಾತಿಯಲ್ಲಿ ಅಕ್ರಮ – ಮೊದಲ‌ ರ‍್ಯಾಂಕ್‌ ಅಭ್ಯರ್ಥಿ ಬಂಧನ

ರ್ಯಾಷ್ ಆಗಿ ಕಾರ್ ಡ್ರೈವ್ , ಸಿಗ್ನಲ್ ಜಂಪ್ ಮಾಡಿದ್ದುಹಾಗೂ ಸೀಟ್​ ಬೆಲ್ಟ್ ವಿಚಾರವಾಗಿ ಪೊಲೀಸರ ಜೊತೆ ಲಿಂಬಾವಳಿ ಪುತ್ರಿ ಕಿರಿಕ್ ​ಮಾಡಿಕೊಂಡಿದ್ದಾಳೆ.

‘ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದ ಕಡೆಯಿಂದ ರಾಜಭವನ ಕಡೆಗೆ ಗುರುವಾರ ಕಾರಿನಲ್ಲಿ ಹೊರಟಿದ್ದ ಲಿಂಬಾವಳಿ ಪುತ್ರಿ, ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು.

ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಗೆ ₹ 1,000 ದಂಡ ಹಾಗೂ ಹಳೇ ಪ್ರಕರಣಗಳಿಗೆ ₹ 9,000 ದಂಡ ಕಟ್ಟಿಸಿಕೊಳ್ಳಲಾಗಿದೆ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದು ಎಂಎಲ್​ಎ ಗಾಡಿ..? ನಾನು ಅರವಿಂದ್​ ಲಿಂಬಾವಳಿ ಪುತ್ರಿ ಎಂದು ಪೊಲೀಸರಿಗೆ ಆವಾಜ್​ ಹಾಕಿದ್ದಾರೆ.

ಪೋಲಿಸರ ಜೊತೆ ಒರಟಾಗಿ ವರ್ತಿಸಿದ ಲಿಂಬಾವಳಿ ಪುತ್ರಿಗೆ 10 ಸಾವಿರ ರು ದಂಡ ಹಾಕಿ ನಂತರ ಕಾರು ಬಿಟ್ಟು ಕಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!