ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲು ದುಬಾರಿ ದರ ತೆತ್ತಲು ರೆಡಿನಾ ?

Team Newsnap
1 Min Read

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ 2022 ರ ಅಕ್ಟೋಬರ್‌ನಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ, ಎಕ್ಸ್‌ಪ್ರೆಸ್ ಕಾರಿಡಾರ್ ನಲ್ಲಿ ಸಂಚರಿಸಲು ಟೋಲ್ ಶುಲ್ಕವು ರೂ 200 ರಿಂದ ರೂ 250 ರ ನಡುವೆ ಇರುತ್ತದೆ. ಆದರೆ 75 ನಿಮಿಷಗಳಲ್ಲಿ ಮೈಸೂರು ತಲುಪಬಹುದು, ಸಮಯ ಉಳಿಸಬಹುದು.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಕಾರಿಡಾರ್ ಗೆ ಬೆಂಗಳೂರು ಸಮೀಪದ ಕುಂಬಳಗೋಡು ಬಳಿಯ ಕಣಮಿಣಿಕೆ ಹಾಗೂ ಶ್ರೀರಂಗಪಟ್ಟಣ ಸಮೀಪದ ಗಣಂಗೂರು ಬಳಿ ಮತ್ತೊಂದು ಟೋಲ್ ಗೇಟ್ ಇರಲಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಾರ್ಗಸೂಚಿಗಳ ಪ್ರಕಾರ, ಪ್ರತಿ 60 ಕಿಮೀಗೆ ಟೋಲ್ ಇರಬೇಕು, ಸರಾಸರಿ ಶುಲ್ಕ ಪ್ರತಿ ಕಿಮೀಗೆ 1.5 ರಿಂದ 2 ರೂ ನಿಗದಿ ಪಡಿಸಲಾಗಿದೆ.

ಹೆದ್ದಾರಿಯಲ್ಲಿನ ಲೇನ್‌ಗಳ ಸಂಖ್ಯೆ, ಸೇತುವೆಗಳು ಮತ್ತು ಅಂಡರ್‌ಪಾಸ್‌ಗಳ ಸಂಖ್ಯೆಗಳ ಆಧಾರದ ಮೇಲೆ ಟೋಲ್ ಶುಲ್ಕವನ್ನು ನಿರ್ಧರಿಸಲಾಗುತ್ತದೆ. ಕಾರಿಡಾರ್ ಒಂಬತ್ತು ಪ್ರಮುಖ ಸೇತುವೆಗಳು, 44 ಚಿಕ್ಕ ಸೇತುವೆಗಳು, ನಾಲ್ಕು ರೈಲು ಮೇಲ್ಸೇತುವೆಗಳನ್ನು ಹೊಂದಿದೆ.

ಇದನ್ನು ಓದಿ – ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ: ಆತನ ಬಳಿಯೇ ಇತ್ತು ಕೋಟಿ ಹಣ

ರಾಜ್ಯದ ರಾಜಧಾನಿ ಮತ್ತು ಮೈಸೂರು ನಡುವಿನ ಅಂತರವು ಸುಮಾರು 140 ಕಿ.ಮೀ. ಇದೆ. ಹೆದ್ದಾರಿ ತೆರೆದ ನಂತರವೇ ನಿಖರವಾದ ಟೋಲ್ ಶುಲ್ಕವನ್ನು ನಿಗದಿಪಡಿಸಲಾಗುವುದು,ಬೆಂಗಳೂರಿನಿಂದ ಮದ್ದೂರು ಬಳಿಯ ನಿಡಘಟ್ಟದವರೆಗಿನ ರಸ್ತೆಯನ್ನು ಜುಲೈನಲ್ಲಿ ಹಾಗೂ ಉಳಿದ ರಸ್ತೆಯನ್ನು ಅಕ್ಟೋಬರ್‌ನಲ್ಲಿ ತೆರೆಯಬೇಕಿತ್ತು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

Share This Article
Leave a comment