PSI ನೇಮಕಾತಿಯಲ್ಲಿ ಅಕ್ರಮ – ಮೊದಲ‌ ರ‍್ಯಾಂಕ್‌ ಅಭ್ಯರ್ಥಿ ಬಂಧನ

Team Newsnap
1 Min Read
Illegal - First Rank candidate arrested in PSI recruitment

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಸೆಲೆಕ್ಷನ್ ಲಿಸ್ಟ್‌ನಲ್ಲಿ ಫಸ್ಟ್ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ

ಇದನ್ನು ಓದಿ –ಮಂಡ್ಯ : ಸಾರಿಗೆ ಬಸ್‌ನಲ್ಲಿ ಕಳ್ಳತನಕ್ಕೆ ಯತ್ನ – ಖತರ್ನಾಕ್ ಮೂವರು ಕಳ್ಳಿಯರು ಅರೆಸ್ಟ್

ಪಿಎಸ್‌ಐ ನೇಮಕಾತಿ ಪರೀಕ್ಷೆಯ ಆಯ್ಕೆ ಪಟ್ಟಿಯಲ್ಲಿ ಫಸ್ಟ್‌ ರ‍್ಯಾಂಕ್‌ ಬಂದಿದ್ದ ಮಾಗಡಿ ತಾಲ್ಲೂಕಿನ ನಿವಾಸಿ ಜೆ.ಕುಶಾಲ್‌ಕುಮಾರ್ ನನ್ನು ಪೊಲೀಸರು ಬಂಧಿಸಿದ, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿದ್ದಾರೆ.

ಬಂಧಿತ ಆರೋಪಿ ಪ್ರಮುಖ ರಾಜಕಾರಣಿಯೊಬ್ಬರ ಮಗ ಎನ್ನಲಾಗಿದೆ. ಈತ 200 ಅಂಕಗಳಿಗೆ 168 ಅಂಕ ಪಡೆಯುವ ಮೂಲಕ 545 ಅಭ್ಯರ್ಥಿಗಳ ಆಯ್ಕೆಯಪಟ್ಟಿಯಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದ. ಈತ ಪ್ರಮುಖ ಆರೋಪಿ ದರ್ಶನ್‌ಗೌಡ ಜೊತೆ ಸ್ನೇಹ ಹೊಂದಿದ್ದ. ಇಂದು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಪಿಎಸ್‌ಐ ನೇಮಕಾತಿ ಪ್ರಕರಣದ ವಿಚಾರಣೆ ವೇಳೆ ಸಚಿವ ಅಶ್ವಥ್ ನಾರಾಯಣ್ ಹಾಗೂ ಅವರ ಸಹೋದರ ಸತೀಶ್ ಹೆಸರು ಹೇಳಿದ್ದ ದರ್ಶನ್ ಗೌಡನನ್ನು ಈಚೆಗಷ್ಟೇ ಪೊಲೀಸರು ಬಂಧಿಸಿದ್ದಾರೆ . ಜೊತೆಗೆ ಕೋರಮಂಗಲದಲ್ಲಿ ನೆಲಮಂಗಲ ಕಾನ್‌ಸ್ಟೇಬಲ್‌ ಮೋಹನ್ ಕುಮಾರ್ ಹಾಗೂ ರಾಮಮೂರ್ತಿನಗರ ಪೊಲೀಸರು ಹರೀಶ್‌ನನ್ನು ಬಂಧಿಸಿದ್ದಾರೆ.

Share This Article
Leave a comment