ಪೊಲೀಸರ ಮುಂದೆಯೇ ಆರೋಪಿತ ಪಿಡಿಒ ಪರಾರಿಯಾದ ಘಟನೆ ಕುಣಿಗಲ್ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ನಡೆಯಿತು.ಮಂಗಳವಾರ ಲೋಕಾಯುಕ್ತ ಎಸ್ಪಿ ವಲಿಭಾಷ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ನಡೆಯುತ್ತಿತ್ತು.
ಸಭೆಯಲ್ಲಿ ಬೇಗೂರು ಗ್ರಾಮದ ಕಾಮಗಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಬೇಗೂರು ಪಿಡಿಒ ಮೇಲೆ ಪ್ರಕರಣ ದಾಖಲಾಗಿದ್ದರೂ ಬಂಧನವಾಗಿರಲಿಲ್ಲ, ಪಿರ್ಯಾದುದಾರ ದೂರು ನೀಡಿದ್ದು, ಸಭೆಯಲ್ಲಿ ಹಾಜರಿದ್ದ ಪಿಡಿಒ ಸುದರ್ಶನ್ ಅವರನ್ನು ವಶಕ್ಕೆ ಪಡೆ ಯುವಂತೆ ಲೋಕಾಯುಕ್ತ ಸಿಪಿಐ ವಿಜಯಕುಮಾರ್ ಕುಣಿಗಲ್ ಪಿಎಸೈ ಜಮಾಲ್ ಅಹಮದ್ ಅವರಿಗೆ ಸೂಚಿಸಿದರು.
ಇದನ್ನು ಓದಿ –ದ್ವಿತೀಯ ಪಿಯುಸಿ ಮೌಲ್ಯಮಾಪಕರಿಗೆ ಶೇ.20ರಷ್ಟು ಸಂಭಾವನೆ ಹೆಚ್ಚಳ
ಅಷ್ಟರಲ್ಲಿ ಸಭೆಯಲ್ಲಿದ್ದ ಪಿಡಿಒ ಪರಾರಿ. ಈ ವಿಷಯವಾಗಿ ಲೋಕಾಯುಕ್ತ ಸಿಪಿಐ, ಕುಣಿಗಲ್ ಪಿಎಸೈ ಅವರನ್ನು ತರಾಟೆಗೆ ತೆಗೆದುಕೊಂಡು ಕರೆತರುವಂತೆ ಸೂಚಿಸಿದರು, ಆದರೆ ಪಿಡಿಒ ನಂಬರ್ ಸ್ವಿಚ್ ಆಫ್ ಆಗಿದ್ದು ಅವರನ್ನು ಪೊಲೀಸರು ಪತ್ತೆಗೆ ಕ್ರಮ ತೆಗೆದುಕೊಂಡಿದ್ದಾರೆ.
ಸಭೆಯಲ್ಲಿ ಲೋಕಾಯುಕ್ತ ಡಿವೈಎಸ್ಪಿ ರವೀಶ್, ತಹಶೀಲ್ದಾರ್ ಮಹಾಬಲೇಶ್ವರ್, ತಾಪಂ ಇಒ ಜೋಸೆಫ್, ಲೋಕಾಯುಕ್ತ ಸಿಪಿಐ ವಿಜಯಕುಮಾರ್ ಇತರರು ಇದ್ದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು