ಮಂಡ್ಯ – ಮಳೆಹಾನಿ ಪರಿಹಾರ ಶೀಘ್ರ ಪಾವತಿ ಮಾಡಿ: ಜಿಲ್ಲಾಧಿಕಾರಿ ಎಸ್.ಅಶ್ವತಿ

Team Newsnap
2 Min Read
rainfall soulution payments should be made shortly : DC S Ashwathi

ಮಂಡ್ಯ ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗುವ ಬೆಳೆಹಾನಿ, ಪ್ರಾಣಿಹಾನಿ, ಮನೆಹಾನಿ ಪರಿಹಾರ ಹಣವನ್ನು ನಿಯಮಾನುಸಾರ ಕ್ಷಿಪ್ರಗತಿಯಲ್ಲಿ ಪರಿಶೀಲಿಸಿ ಪಾಲಾನುಭವಿಗಳಿಗೆ ಪರಿಹಾರ ಹಣ ಪಾವತಿಸಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಆದೇಶಿಸಿದರು

ಇದನ್ನು ಓದಿ –ಕಾರು ಸರಣಿ ಅಪಘಾತ – ಓರ್ವ ಸಾವು : ಕಿರುತೆರೆ ಸಹ ನಿರ್ದೇಶಕ ಬಂಧನ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಸಿ ಜಿಲ್ಲೆಯಲ್ಲಿ ಭಾರಿ ಮಳೆ ಆಗಿದ್ದು, ಮುಂದಿನ ದಿನಗಳಲ್ಲೂ ಮಳೆಯಾಗುವ ಸಾಧ್ಯತೆ ಇದೆ. ಪ್ರವಾಹ ನೆರೆ ಹಾವಳಿಗೆ ಒಳಗಾಗುವ ಪ್ರದೇಶಗಳಲ್ಲಿ ಪ್ರವಾಹ/ ನೆರೆಯ ಸಂದರ್ಭದಲ್ಲಿ ನದಿಪಾತ್ರಕ್ಕೆ ಸಾರ್ವಜನಿಕರು ಪ್ರವಾಸಿಗರು ತೆರಳದಂತೆ ಸೂಚನಾಫಲಕ ಹಾಗೂ ಡಂಗೂರ ಸಾರಿಸಿ ಮುನ್ನೆಚ್ಚರಿಕೆ ಕ್ರಮವನ್ನು ಕೈಗೊಳ್ಳಿ ಎಂದರು.

ಸಮನ್ವಯ ಮುಖ್ಯ :ಮಳೆಹಾನಿ ಕುರಿತು ವರದಿ ನೀಡಲು ಇಲಾಖೆಗಳ ಸಮನ್ವಯ ಅತಿ ಮುಖ್ಯವಾಗಿರುತ್ತದೆ. ತಾಲೂಕು ಹಂತದ ಅಧಿಕಾರಿಗಳು ಒಟ್ಟಿಗೆ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಪಾವತಿಗಾಗಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.

ಅನುದಾನದ ಕೊರತೆ ಇಲ್ಲ :ಮಳೆಹಾನಿ ಪರಿಹಾರ ನೀಡಲು ಜಿಲ್ಲಾಡಳಿತದಲ್ಲಿ ಯಾವುದೇ ಅನುದಾನದ ಕೊರತೆ ಇಲ್ಲ. ತಹಶೀಲ್ದಾರ್ ಗಳು ತಮಗೆ ಬೇಕಾದ ಅನುದಾನದ ಪ್ರಸ್ತಾವನೆ ನೀಡಿ ಪಡೆದುಕೊಳ್ಳಬಹುದು. ಮೇ 10ರೋಳಗೆ ಆಗಿರುವ ಮಳೆಹಾನಿ ಪರಿಹಾರವನ್ನು ಎಲ್ಲಾ ತಹಶೀಲ್ದಾರ್ ಕಚೇರಿಯಿಂದ ಪಾವತಿಯಾಗಿರಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿರುವ ಹಿನ್ನೆಲೆ ಕೆರೆಕಟ್ಟೆಗಳು ತುಂಬಿದೆ ಹಾಗಾಗಿ ಅಧಿಕಾರಿಗಳು ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಭೆ ಮಾಡಿ ವಿಪತ್ತು ನಿರ್ವಹಣೆ ಕುರಿತು ಜಾಗೃತಿ ಮೂಡಿಸಬೇಕು.ವಿಪತ್ತು ನಿರ್ವಹಣೆಯಲ್ಲಿ ಎಲ್ಲಾ ತಾಲ್ಲೂಕಗಳ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳ ಪಾತ್ರ ಬಹಳ ಮುಖ್ಯ ಎಂದರು.

ಅನಾಹುತ ಸಂಭವಿಸುವ ಸಾದ್ಯತೆ ಇರುವ ಗ್ರಾಮಗಳು :ಕಳೆದ ವರ್ಷಗಳಲ್ಲಿ ಸಂಭವಿಸಿರುವ ವಿಪತ್ತನ್ನು ಆಧರಿಸಿ ಪಾಂಡವಪುರ 4 ಗ್ರಾಮ ಪಂಚಾಯತಿಗಳಲ್ಲಿ 7 ಗ್ರಾಮಗಳು, ಶ್ರೀರಂಗಪಟ್ಟಣದ 8 ಗ್ರಾಮ ಪಂಚಾಯಿತಿಯಲ್ಲಿ 18 ಗ್ರಾಮಗಳು, ಮಳವಳ್ಳಿ 4 ಗ್ರಾಮ ಪಂಚಾಯತಿಗಳಲ್ಲಿ 9 ಗ್ರಾಮಗಳು, ಕೆ.ಆರ್. ಪೇಟೆ 2 ಗ್ರಾಮ ಪಂಚಾಯತಿಗಳಲ್ಲಿ 3 ಗ್ರಾಮಗಳು ಒಟ್ಟು 18 ಗ್ರಾಮ ಪಂಚಾಯತಿಗಳಲ್ಲಿ 37 ಗ್ರಾಮಗಳಲ್ಲಿ ಪ್ರವಾಹ/ ನೆರೆಹಾವಳಿ ಸಂಭವಿಸಬಹುದು ಎಂದು ಗುರುತಿಸಲಾಗಿದೆ. ಈಗ್ರಾಮ ಪಂಚಾಯತಿಗಳ ಅಭಿವೃದ್ದಿ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ವಿ.ಆರ್.ಶೈಲಜಾ,ಜಿಲ್ಲಾ ಆರೋಗ್ಯಾಧಿಕಾರಿ ಡಾ.ಟಿ.ಎನ್ ಧನಂಜಯ, ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ವಿ.ಎಸ್. ಅಶೋಕ್,ತೋಟಗಾರಿಕೆ ಇಲಾಖೆಯ ಉಪ ನಿರ್ದೇಶರಾದ ಮಂಜುನಾಥ್, ವಾರ್ತಾಧಿಕಾರಿ ಎಸ್.ಹೆಚ್ ನಿರ್ಮಲ, ಜಿಲ್ಲಾ ಪಂಚಾಯತ್ ಅಭಿವೃದ್ದಿ ಅಧಿಕಾರಿ ಧನರಾಜ್, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪ್ಥತರಿದ್ದರು.

Share This Article
Leave a comment