IPL ಸೀಸನ್ 2022 ನ ಮುಂಬೈ ನ ವಾಂಖೇಡಿ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಹಸಿರು ಜರ್ಸಿ ತೊಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು , ಸನ್ರೈಸರ್ಸ್ ಹೈದರಾಬಾದ್ ವನ್ನು 68 ರನ್ ಗಳಿಂದ ಮಣಿಸಿತು.
ಇದನ್ನು ಓದಿ : ಫಾಫ್, ಡಿಕೆ, ಮ್ಯಾಕ್ಸಿ ಅಬ್ಬರದ ಬ್ಯಾಟಿಂಗ್.. ಹೈದರಾಬಾದ್ಗೆ 193 ರನ್ ಗಳ ಬಿಗ್ ಟಾರ್ಗೆಟ್.
SRH ತಂಡಕ್ಕೆ 193 ರನ್ ಗಳ ಬಿಗ್ ಟಾರ್ಗೆಟ್ ನೀಡಿದ RCB ತಂಡವು ಬ್ಯಾಟಿಂಗ್ ಹಾಗೂ ಬೌಲಿಂಗ್ , ಫಿಲ್ಡಿಂಗ್ ನಲ್ಲೂ ಅದ್ಭುತ ಪ್ರದರ್ಶನ ನೀಡಿ ಸಾಂಘಿಕ ಗೆಲುವು ಕಂಡರು
38 ಬಾಲ್ನಲ್ಲಿ ಬರೋಬ್ಬರಿ 48 ರನ್ ರಜತ್ ಪಾಟಿದಾರ್ ಕ್ಯಾಚ್ ನೀಡಿ ಔಟಾದರು. ಈ ಪೈಕಿ 4 ಫೋರ್, 2 ಸಿಕ್ಸರ್ ಬಾರಿಸಿ ಬೌಲರ್ಸ್ ಬೆವರಿಳಿಸಿದರು.
ಕೊನೆಯವರೆಗೂ ಕ್ರೀಸ್ನಲ್ಲೇ ನಿಂತ ಫಾಫ್ ಡುಪ್ಲೆಸಿಸ್ 8 ಫೋರ್, 2 ಸಿಕ್ಸರ್ ಜತೆಗೆ 50 ಬಾಲ್ನಲ್ಲಿ 73 ರನ್ ಸಿಡಿಸಿದರು. ಮ್ಯಾಕ್ಸ್ವೆಲ್ 24 ಬಾಲ್ನಲ್ಲಿ 2 ಸಿಕ್ಸರ್, 3 ಫೋರ್ನಿಂದ 33 ರನ್ ಗಳಿಸಿದರು.
ಮಾಂತ್ರಿಕ ದಿನೇಶ್ ಕಾರ್ತಿಕ್, ಕೇವಲ 8 ಬಾಲ್ನಲ್ಲಿ 30 ರನ್ ಅಂದರೆ ಬರೋಬ್ಬರಿ 4 ಸಿಕ್ಸರ್, 1 ಬೌಂಡರಿ ಸಿಡಿಸಿದರು.
ಇದನ್ನು ಓದಿ : D C ತಂಡದ ಪೃಥ್ವಿ ಶಾಗೆ ತೀವ್ರ ಜ್ವರ: ಆಸ್ಪತ್ರೆಗೆ ದಾಖಲು – ಬೌಲರ್ ಗೆ ಕೊವಿಡ್ ದೃಡ
SRH ತಂಡ 125 ರನ್ ಗಳಿಗೆ ಸರ್ವ ಪತನ :
ನಂತರ ಬ್ಯಾಟಿಂಗ್ ಆರಂಭದಲ್ಲೇ ಹೈದ್ರಾಬಾದ್ ತಂಡ 3 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡು ಕಠಿಣ ಪರಿಸ್ಥಿತಿ ಎದುರಿಸುವ ಸ್ಥಿತಿ ಬಂದಿದೆ.
SRH ತಂಡದಲ್ಲಿ ರಾಹುಲ್ ತ್ರಿಪಾಠಿ 58 ರನ್ ಗಳಿಸಿದನ್ನು ಬಿಟ್ಟರೆ ಉಳಿದ ಆಟಗಾರರು ಹೇಳಿಕೊಳ್ಳುವಷ್ಟು ರನ್ ಗಳಿಸುವಲ್ಲಿ ವಿಫಲವಾದರು.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
- ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ: ಬಿಜೆಪಿಗೆ ಆಘಾತ
- ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
- 104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
- ಚನ್ನಪಟ್ಟಣ: 4 ನೇ ಸುತ್ತಿನಲ್ಲಿ ನಿಖಿಲ್ ಕುಮಾರಸ್ವಾಮಿ ಮುನ್ನಡೆ
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
104ರನ್ಗೆ ಆಸ್ಟ್ರೇಲಿಯಾ ಆಲೌಟ್ ,ಬುಮ್ರಾಗೆ 5 ವಿಕೆಟ್
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ