ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವುದಿಲ್ಲ. ಮುಖ್ಯಧಾರೆಯ ಸಿನಿಮಾಗಳನ್ನು ಹೇಗೆ ಮಾಡಬೇಕು ಎಂಬ ಪಾಠವನ್ನು ದಕ್ಷಿಣ ಭಾರತದವರನ್ನು ನೋಡಿ ಬಾಲಿವುಡ್ನವರು ಕಲಿಯಬೇಕು ಎಂದು ನಟ ಮನೋಜ್ ಬಾಜ್ಪಾಯಿ ಹೇಳಿದ್ದಾರೆ.
ಕನ್ನಡ ಮತ್ತು ತೆಲುಗಿನ ಸಿನಿಮಾಗಳು ಹಿಂದಿ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿವೆ. ‘ಕೆಜಿಎಫ್: ಚಾಪ್ಟರ್ 2’ (KGF 2), ‘ಪುಷ್ಪ’, ‘ಆರ್ಆರ್ಆರ್’ ಮುಂತಾದ ಸಿನಿಮಾಗಳು ಧೂಳೆಬ್ಬಿಸಿವೆ.
ದಕ್ಷಿಣ ಭಾರತದ ಸಿನಿಮಾಗಳ ಎದುರು ಪೈಪೋಟಿ ನೀಡಲು ಬಾಲಿವುಡ್ ಸ್ಟಾರ್ ಹೀರೋಗಳಿಗೂ ಸಾಧ್ಯವಾಗುತ್ತಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಉತ್ತರ ಭಾರತದ ಜನರು ದಕ್ಷಿಣದ ಡಬ್ಬಿಂಗ್ ಸಿನಿಮಾಗಳಿಗೆ ಹೆಚ್ಚು ಮನ್ನಣೆ ನೀಡುತ್ತಿದ್ದಾರೆ. ಮೂಲ ಹಿಂದಿ ಚಿತ್ರಗಳು ಸೋತು ಸುಣ್ಣ ಆಗುತ್ತಿವೆ. ಬಾಲಿವುಡ್ ಮಂದಿಗೆ ಇಂಥ ಪರಿಸ್ಥಿತಿ ಯಾಕೆ ಬಂತು ಎಂಬುದನ್ನು ಈಗ ಚರ್ಚೆ ಮಾಡಲಾಗುತ್ತಿದೆ. ಸ್ವತಃ ಬಾಲಿವುಡ್ ಸೆಲೆಬ್ರಿಟಿಗಳೇ ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದಾರೆ. ಎಂದು ಮನೋಜ್ ಬಾಜ್ಪೇಯಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ದಕ್ಷಿಣ ಭಾರತದ ಚಿತ್ರರಂಗಕ್ಕೂ ಬಾಲಿವುಡ್ಗೂ ಇರುವ ವ್ಯತ್ಯಾಸ ಏನು ಎಂಬುದನ್ನು ಅವರು ಗುರುತಿಸಿದ್ದಾರೆ. ಸೌತ್ ಸಿನಿಮಾಗಳನ್ನು ನೋಡಿ ಹಿಂದಿ ಚಿತ್ರರಂಗದವರು ಕಲಿಯಬೇಕಿದೆ ಎಂದು ಅವರು ಹೇಳಿದ್ದಾರೆ.
‘ದಕ್ಷಿಣ ಭಾರತದ ಸಿನಿಮಾಗಳು ಯಾವ ಮಟ್ಟಕ್ಕೆ ಬ್ಲಾಕ್ ಬಸ್ಟರ್ ಆಗುತ್ತಿವೆ ಎಂದರೆ ನನ್ನ ವಿಷಯ ಬಿಡಿ, ಬಾಲಿವುಡ್ನ ಪ್ರಮುಖ ಫಿಲ್ಮ್ ಮೇಕರ್ಗಳಿಗೆ ಭಯ ಹುಟ್ಟಿದೆ. ಏನು ಮಾಡಬೇಕು ಎಂಬುದೇ ಅವರಿಗೆ ತೋಚುತ್ತಿಲ್ಲ. ದಕ್ಷಿಣ ಭಾರತದವರು ತುಂಬ ಪ್ಯಾಷನೇಟ್ ಆಗಿ ಸಿನಿಮಾ ಮಾಡುತ್ತಾರೆ. ಯಾವುದರಲ್ಲೂ ರಾಜಿ ಆಗಲ್ಲ. ತಾವು ಜಗತ್ತಿನ ದಿ ಬೆಸ್ಟ್ ದೃಶ್ಯವನ್ನು ಚಿತ್ರೀಕರಿಸುತ್ತಿದ್ದೇವೆ ಎಂಬ ಭಾವನೆಯಲ್ಲೇ ಅವರು ಶೂಟಿಂಗ್ ಮಾಡುತ್ತಾರೆ. ತುಂಬ ಆಲೋಚನೆ ಮಾಡುತ್ತಾರೆ. ಪ್ರೇಕ್ಷಕರ ಬಗ್ಗೆ ಹಗುರವಾಗಿ ಒಮ್ಮೆ ಕೂಡ ಮಾತನಾಡುವುದಿಲ್ಲ ಎಂದು ಮನೋಜ್ ಬಾಜ್ಪಾಯಿ ಹೇಳಿದ್ದಾರೆ.
‘ಇದು ಮಾಸ್ ಆಗಿದೆ, ಹಾಗಾಗಿ ನಡೆದು ಬಿಡುತ್ತೆ ಅಂತ ದಕ್ಷಿಣ ಭಾರತದವರು ಹೇಳಲ್ಲ. ಕೆಜಿಎಫ್ 2, ಪುಷ್ಪ, ಆರ್ಆರ್ಆರ್ ಸಿನಿಮಾಗಳ ಮೇಕಿಂಗ್ ಗಮನಿಸಿ. ಅವು ತುಂಬಾ ನೀಟ್ ಆಗಿವೆ. ಮಾಡು ಇಲ್ಲವೇ ಮಡಿ ಎಂಬಂತಹ ಸನ್ನಿವೇಶ ಎಂಬ ರೀತಿಯಲ್ಲೇ ಅವರು ಪ್ರತಿ ದೃಶ್ಯದ ಚಿತ್ರೀಕರಣ ಮಾಡುತ್ತಾರೆ. ಆ ಗುಣದ ಕೊರತೆ ನಮ್ಮಲ್ಲಿ ಇದೆ. ನಾವು ಬರೀ ಹಣದ ದೃಷ್ಟಿಯಿಂದ ಸಿನಿಮಾ ಬಗ್ಗೆ ಯೋಚಿಸುತ್ತೇವೆ. ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವುದಿಲ್ಲ. ಪ್ರಮುಖ ಸಿನಿಮಾಗಳನ್ನು ಹೇಗೆ ಮಾಡಬೇಕು ಎಂಬ ಪಾಠವನ್ನು ದಕ್ಷಿಣ ಭಾರತದವರನ್ನು ನೋಡಿ ಬಾಲಿವುಡ್ನವರು ಕಲಿಯಬೇಕು’ ಎಂದು ಮನೋಜ್ ಬಾಜ್ಪಾಯಿ ಹೇಳಿದ್ದಾರೆ.
- ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
- 2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
- 10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ
- HMPV ವೈರಸ್ ಕರ್ನಾಟಕಕ್ಕೆ ಪ್ರವೇಶ: ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಸೋಂಕು ದೃಢ
- ಮಳೆ ನಿಂತರೂ ಮರದ ಹನಿ ನಿಲ್ಲದು
More Stories
ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ದಂಪತಿ
2024-25ನೇ ಅತಿಥಿ ಉಪನ್ಯಾಸಕರ ನೇಮಕಾತಿಗೆ ಅರ್ಜಿ ಆಹ್ವಾನ
10ನೇ ತರಗತಿ ಪಾಸಾದವರಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಅವಕಾಶ