ಹಿಂದಿ ರಾಷ್ಟ್ರ ಭಾಷೆಯಾದರೆ ಕನ್ನಡ ಪ್ರಾದೇಶಿಕ ಭಾಷೆ ಎಂದು ಹೇಳುವ ಮೂಲಕ ಸಚಿವ ಮುರುಗೇಶ್ ನಿರಾಣಿ, ಹಿಂದಿ ಹೇರಿಕೆ ಚರ್ಚೆಯ ಬೆಂಕಿಗೆ ಮತ್ತಷ್ಟು ತುಪ್ಪ ಸುರಿದಿದ್ದಾರೆ. ಅದಲ್ಲದೇ ಎಲ್ಲಾ ಭಾಷೆಗಳನ್ನು ಕಲಿತರೇ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ.
ಕನ್ನಡ ಪ್ರಾದೇಶಿಕ ಭಾಷೆಯಾದರೆ ಹಿಂದಿ ರಾಷ್ಟ್ರ ಭಾಷೆ ಎಂದ ನಿರಾಣಿ ಹಿಂದಿ ಭಾಷೆಯೂ ನಮಗೆ ಬೇಕು ಎಂದ ಸಚಿವ ಮುರುಗೇಶ್ ನಿರಾಣಿ ಹೆಚ್ಚು ಭಾಷೆ ಕಲಿಯುವುದರಿಂದ ನಾವು ಶ್ರೀಮಂತರಾಗುತ್ತೇವೆ ಎಂದಿದ್ದಾರೆ ಸಚಿವ ನಿರಾಣಿ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿ ಭಾಷೆಯೂ ನಮಗೆ ಬೇಕು, ಬೇರೆ ಭಾಷೆಯನ್ನು ಕಲಿಯೋದು ತಪ್ಪೇನಿಲ್ಲ. ನಾವು ಕನ್ನಡಿಗರು, ಕನ್ನಡಕ್ಕೆ ಮೊದಲ ಆದ್ಯತೆ. ಆ ಬಳಿಕ ಬೇರೆ ಬೇರೆ ಭಾಷೆಗಳನ್ನು ಕಲಿಯಬೇಕು. ನಾನು ಗ್ರಾಮೀಣ ಪ್ರದೇಶದವನು ಆಗಿರುವುದರಿಂದ ಕನ್ನಡವನ್ನು ಪ್ರೀತಿಸುತ್ತೇನೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
- ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
- ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
- ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು
- ಇಬ್ಬರು ಮಕ್ಕಳನ್ನು ಕೊಂದು ತಾಯಿ ಆತ್ಮಹತ್ಯೆ !
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
More Stories
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು