December 22, 2024

Newsnap Kannada

The World at your finger tips!

vrudiiman

ಸಂದರ್ಶನ ನಿರಾಕರಣೆ ವೃದ್ಧಿಮಾನ್​ಗೆ ಬೆದರಿಕೆ; 2 ವರ್ಷ ಪತ್ರಕರ್ತನನ್ನು ಬ್ಯಾನ್ ಮಾಡಿದ BCCI

Spread the love

ಸಂದರ್ಶನ ನೀಡಲಿಲ್ಲ ಎಂಬ ಕಾರಣಕ್ಕೆ ವಿಕೆಟ್​ ಕೀಪರ್​ ವೃದ್ಧಿಮಾನ್ ಸಾಹಗೆ ಬೆದರಿಕೆ ಹಾಕಿದ್ದ ಪತ್ರಕರ್ತ ಬೋರಿಯಾ ಮಜುಂದಾರ್ ನನ್ನು ಬಿಸಿಸಿಐ (BCCI) ಎರಡು ವರ್ಷಗಳ ಕಾಲ ಬ್ಯಾನ್​ ಮಾಡಿದೆ.

ಪತ್ರಕರ್ತಬೋರಿಯಾ ಮಜುಂದಾರ್​​ ಅವರನ್ನು ಮುಂದಿನ ಎರಡು ವರ್ಷಗಳ ಕಾಲ ಕ್ರಿಕೆಟ್​​ ಸ್ಟೇಡಿಯಂ ಒಳಗೆ ಬಿಟ್ಟುಕೊಳ್ಳದಂತೆ ಬಿಸಿಸಿಐ ರಾಜ್ಯ ಕ್ರಿಕೆಟ್​ ಸಂಸ್ಥೆಗಳಿಗೆ ಸೂಚಿಸಲಾಗಿದೆ.

ತವರಿನಲ್ಲಿ ನಡೆಯುವ ಪಂದ್ಯಗಳಿಗೂ ಅವರಿಗೆ ಮಾನ್ಯತೆ ನೀಡಲಾಗುವುದಿಲ್ಲ. ಜೊತೆಗೆ ಅವರನ್ನ ಕಪ್ಪು ಪಟ್ಟಿಗೂ ಸೇರಿಸಲು ಪತ್ರ ಬರೆಯುತ್ತೇವೆ. ಹಾಗೆಯೇ ಆಟಗಾರರು ಆತನೊಂದಿಗೆ ಸಂಪರ್ಕ ಬೆಸೆಯಬಾರದು ಎಂದು ಹೇಳಿದೆ.

ಸಾಹನನ್ನು ಟೀಮ್​ ಇಂಡಿಯಾಗೆ ಆಯ್ಕೆ ಮಾಡಲು ಸಾಧ್ಯವಿಲ್ಲ. ನಿವೃತ್ತಿ ಪಡೆಯುವುದು ಉತ್ತಮ ಎಂದು ಟೀಮ್​​ ಇಂಡಿಯಾ ಕೋಚ್​ ರಾಹುಲ್​​ ದ್ರಾವಿಡ್​ ಹೇಳಿದ್ದ ವಿಚಾರವಾಗಿ ವೃದ್ಧಿಮಾನ್​ ಸಾಹ ಆಕ್ರೋಶ ವ್ಯಕ್ತಪಡಿಸಿದ್ರು.

ದ್ರಾವಿಡ್​ ಮೇಲೆ ಕಿಡಿಕಾರಿದ ಬೆನ್ನಲ್ಲೇ ಪತ್ರಕರ್ತ ಬೋರಿಯಾ ಮಜುಂದಾರ್​​​​​​, ಸಾಹಗೆ ವಾಟ್ಸಪ್​ ಮೂಲಕ ಸಂದರ್ಶನ ನೀಡುವಂತೆ ಸಂದೇಶ ಕಳುಹಿಸಿದರು ಸಾಹ ಇದಕ್ಕೆ ಒಪ್ಪದ ಕಾರಣ, ಪತ್ರಕರ್ತ ಬೆದರಿಕೆ ಹಾಕಿದರು.

Copyright © All rights reserved Newsnap | Newsever by AF themes.
error: Content is protected !!