ತೀವ್ರವಾಗಿ ಅಸ್ವಸ್ಥರಾಗಿದ್ದ ನಟ ಶಿವ ರಾಜ್ ಕುಮಾರ್ ರೋಟಿನ್ ಚೆಕ್ ಅಪ್ ನಂತರ ಮಾಮೂಲಿಯಂತೆ ತಮ್ಮ ಆರೋಗ್ಯ ಸಹಜವಾಗಿದೆ ಇದೆ ಎಂದು ಶಿವಣ್ಣ ಹೇಳಿದ್ದಾರೆ.
ವೇದಾ ಶೂಟಿಂಗ್ ವೇಳೆ ನಟ ಶಿವರಾಜ್ ಕುಮಾರ್ ಜ್ವರದಿಂದ ಬಳಲುತ್ತಿದ್ದು ಮೈಸೂರಿನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು.
ಈ ಕುರಿತಂತೆ ವೇದಾ ಸಿನಿಮಾ ನಿರ್ದೇಶಕ ಹರ್ಷಾ ಮಾತನಾಡಿ, ‘ನಾನು ಈಗ ತಾನೆ ಶಿವಣ್ಣ ಅವರ ಜತೆ ಮಾತನಾಡಿದ್ದೇನೆ. ಅವರು ಆರೋಗ್ಯವಾಗಿಯೇ ಇದ್ದಾರೆ. ಅವರು ಆಗಾಗ್ಗೆ ಜನರಲ್ ಚೆಕಪ್ ಮಾಡಿಸುತ್ತಾರೆ. ಈ ಬಾರಿಯೂ ಆಸ್ಪತ್ರೆಗೆ ಹೋಗಿದ್ದು ಜನರಲ್ ಚೆಕಪ್ ಮಾಡಿಸಿಕೊಳ್ಳಲು ಅಷ್ಟೆ. ಉಳಿದಂತೆ ಏನೂ ಇಲ್ಲ’ ಎಂದಿದ್ದಾರೆ.
ಬಿಪಿ ಮತ್ತು ಇಸಿಜಿ ಈಗ ನಾರ್ಮಲ್ ಆಗಿದೆ. ಬೈರಾಗಿ ಚಿತ್ರದ ಡಬ್ಬಿಂಗ್ ಅನ್ನು ಎರಡು ನಿಂತುಕೊಂಡೇ ಮಾಡಿದ್ದು ಹಾಗೂ ಮೈಸೂರು ಬೆಂಗಳೂರು ನಡುವೆ ಓಡಾಟ ಹೆಚ್ಚಾಗಿ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿತ್ತು. ಮನುಷ್ಯ ಎಂದಾಗ ಇಂತಹ ವ್ಯತ್ಯಾಸಗಳು ಆಗುತ್ತವೆ. ಈಗ ನಾನು ಫೈನ್ ಆಗಿದ್ದೇನೆ. ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ ಎಂದು ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್