ರಿಯಲ್ ಎಸ್ಟೇಟ್ ಉದ್ಯಮಿ ರಾಜು ದೊಡ್ಡಬೊಮ್ಮನ್ನವರ ಹತ್ಯೆಗೆ ಆತನ ಎರಡನೇ ಹೆಂಡತಿ ಕಿರಣ ಹಾಗೂ ಇಬ್ಬರು ಪಾಲುದಾರರುಗಳು 10 ಲಕ್ಷರು ಸುಪಾರಿ ನೀಡಿರುವ ಸಂಗತಿ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಯ ಕರ್ನಾಟಕ ಸಂಘಟನೆ ಜಿಲ್ಲಾ ಅಧ್ಯಕ್ಷ ಸಂಜಯ್ ರಜಪೂತಗೆ ಸುಪಾರಿ ನೀಡಿರುವುದು ಬಯಲಾಗಿದೆ.
ಬೆಳಗಾವಿ ಚೆನ್ನಮ್ಮ ನಗರದಲ್ಲಿ 10 ವರ್ಷಗಳ ಹಿಂದೆ ಗ್ಲೋಬಲ್ ಡೆವಲಪರ್ಸ್ ಹೆಸರಿನಲ್ಲಿ ಅಪಾರ್ಟ್‍ಮೆಂಟ್ ನಿರ್ಮಾಣ ಸಂಬಂಧ ಧರ್ಮೇಂದ್ರ, ಶಶಿಕಾಂತ ಹಾಗೂ ರಾಜು ಮಧ್ಯೆ ಪಾರ್ಟ್ನರ್ ಶಿಪ್ ಆಗಿತ್ತು. ಹತ್ತು ವರ್ಷವಾದರೂ ಮೊದಲು ಆರಂಭಿಸಿದ ಪ್ರಾಜೆಕ್ಟ್ ಮುಗಿಯದ ಹಿನ್ನೆಲೆ ವೈಷಮ್ಯವಿತ್ತು.
ಇನ್ನೊಂದೆಡೆ ಎರಡನೇ ಹೆಂಡತಿ ಕಿರಣ ಹಾಗೂ ಪತಿ ರಾಜು ಮೇಲೆ ದ್ವೇಷವಿತ್ತು. ಮೊದಲ ಮದುವೆಯನ್ನು ಬಚ್ಚಿಟ್ಟು ತನ್ನ ವಿವಾಹವಾಗಿದ್ದನೆಂಬ ದ್ವೇಷವೂ ಇತ್ತು.
ತನ್ನ ಹಾಗೂ ತನ್ನ ಇಬ್ಬರ ಮಕ್ಕಳ ಹೆಸರಿನಲ್ಲಿ ಆಸ್ತಿ ಮಾಡುವಂತೆ ಪ್ರತಿ ದಿನ ರಾಜುಗೆ ಪತ್ನಿ ಕಿರಣ ಒತ್ತಾಯಿಸುತ್ತಿದ್ದರು. ಆದರೆ ರಾಜು ಯಾವುದೇ ಆಸ್ತಿ ಎರಡನೇ ಹೆಂಡತಿ ಹೆಸರಲ್ಲಿ ಮಾಡದೇ ಇದ್ದಿದ್ದಕ್ಕೆ ಸಿಟ್ಟು ಇತ್ತು. ಹೀಗಾಗಿ ಪತಿಯ ಬ್ಯುಸಿನೆಸ್ ಪಾಲುದಾರರ ಜೊತೆಗೂಡಿ ಹತ್ಯೆಗೆ ಸಂಚು ರೂಪಿಸಿದ್ದಾರೆಂದು ಆರೋಪಿಸಲಾಗಿದೆ
ಮಾರ್ಚ್ 15ರ ಬೆಳಗ್ಗೆ 6 ಗಂಟೆ ಸುಮಾರಿಗೆ ರಾಜು ದೊಡ್ಡಬೊಮ್ಮನ್ನವರ ಹತ್ಯೆಗೈದು ಹಂತಕರು ಪರಾರಿಯಾಗಿದ್ದರು.
ಕೆಲ ಸಮಯದ ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಎರಡನೇ ಪತ್ನಿ ಕಿರಣ ಹಾಗೂ ಮತ್ತೋರ್ವ ಆರೋಪಿ ಧರ್ಮೇಂದ್ರ ತಮಗೇನೂ ಗೊತ್ತೇ ಇಲ್ಲದ ರೀತಿ ಸ್ಥಳಕ್ಕೆ ಬಂದು ನಾಟಕವಾಡಿದ್ದರು. ಈ ವೇಳೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಬೆಳಗಾವಿ ಗ್ರಾಮೀಣ ಪೋಲಿಸರು ಮೊಬೈಲ್ ಕರೆ ವಿವರ ಪರಿಶೀಲಿಸುವ ವೇಳೆ ಬ್ಯುಸಿನೆಸ್ ಪಾರ್ಟ್ನರ್ ಗಳ ಮೇಲೆ ಅನುಮಾನ ಮೂಡಿತ್ತು. ಹೀಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ