ಮೈಸೂರಿನಲ್ಲಿ ಬಟ್ಟೆ ಬ್ಯಾಗ್ ಖರೀದಿ: ಕೋಟ್ಯಾಂತರ ರು ಅವ್ಯವಹಾರ ರೋಹಿಣಿ ವಿರುದ್ದ ತನಿಖೆಗೆ ಆದೇಶ

Team Newsnap
1 Min Read
Rohini Sindhuri's husband Sudhir grab land in Yalahanka? Complaint via tweet to DGP ರೋಹಿಣಿ ಸಿಂಧೂರಿ ಪತಿ ಸುಧೀರ್ ಯಲಹಂಕದಲ್ಲಿ ಭೂ ಕಬಳಿಕೆ ? ಡಿಜಿಪಿಗೆ ಟ್ವೀಟ್ ಮೂಲಕ ದೂರು

ಮೈಸೂರಿನಲ್ಲಿ ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿ ಸೇವೆ ಸಲ್ಲಿಸುವ ವೇಳೆ ಕೋಟ್ಯಾಂತರ ರು ಬಟ್ಟೆ ಬ್ಯಾಗ್ ಗಳನ್ನು ಖರೀದಿಸಿ, ವಿತರಣೆ ಮಾಡಿದ ಹಗರಣವನ್ನು ಸಮಗ್ರವಾಗಿ ತನಿಖೆ ನಡೆಸುವಂತೆ ಸರ್ಕಾರ ಆದೇಶಿಸಿದೆ.

ಸರ್ಕಾರದ ಈ ನಿಧಾ೯ರದಿಂದ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ

ಅಂದಿನ DC ರೋಹಿಣಿ ವರ್ಗಾವಣೆಯಾಗಿ 11 ತಿಂಗಳು ಕಳೆದಿದ್ದರೂ ಹಗರಣ ಮಾತ್ರ ಇನ್ನೂ ಜೀವಂತವಾಗಿದೆ. ಶಾಸಕ ಸಾರಾ ಮಹೇಶ್ ಹಾಗೂ ರೋಹಿಣಿ ನಡುವಿನ ಜಟಾಪಟಿಗೆ ಈ ಹಗರಣದ ತನಿಖೆಯ ನಿಧಾ೯ರ ಹೊಸ ಟ್ವಿಸ್ಟ್ ನೀಡಲಿದೆ

ಮಾರುಕಟ್ಟೆಯಲ್ಲಿ 10 -15 ರು ಲಭ್ಯವಾಗುವ ಈ ಬಟ್ಟೆ ಬ್ಯಾಗ್ ಅನ್ನು 52 ರು ಖರೀದಿಗೆ ಮಾಡಲಾಗಿದೆ. ಕೈಮಗ್ಗ ಅಭಿವೃದ್ದಿ ನಿಗಮವನ್ನು ಬಿಟ್ಟು ಖಾಸಗಿ ವ್ಯಕ್ತಿಗಳಿಗೆ ಟೆಂಡರ್ ನೀಡಿ 14.71 ಲಕ್ಷ ಬ್ಯಾಗ್ ಖರೀದಿಸಿ 14 ಕೋಟಿ ಅವ್ಯವಹಾರ ಮಾಡಲಾಗಿರುವ ಬಗ್ಗೆ ಶಾಸಕ ಮಹೇಶ್ ಅಧಿವೇಶನದಲ್ಲೇ ಸರ್ಕಾರದ ಗಮನ ಸೆಳೆದು ತನಿಖೆ ಒತ್ತಾಯಮಾಡಿದ್ದರು

ಈ ಹಗರಣದ ದೂರು ಕೇಳುತ್ತಿದ್ದಂತೆ ರೋಹಿಣಿ ಅವರನ್ನು ಬೆಂಗಳೂರಿಗೆ ವಗಾ೯ವಣೆಯ ಶಿಕ್ಷೆ ನೀಡಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವಂತೆ ಮಾಡಿತ್ತು. ಆದರೆ ಈ ಹಗರಣದ ತನಿಖೆ ನಡೆಸಲು ಸರ್ಕಾರ ನಿರ್ಧರಿಸಿರುವುದು ರೋಹಿಣಿಗೆ ಮತ್ತೆ ಆತಂಕ ಸೃಷ್ಠಿಯಾಗುವಂತೆ ಮಾಡಿದೆ.

Share This Article
Leave a comment