ಪಾಂವಪುರ -ಇಂಥದ್ದೊಂದು ಸಿನಿಮಾವನ್ನು ನೋಡಲೇಬೇಕು ಎಂದು ಪ್ರಚಾರ ಆದ ಪರಿಣಾಮಮಂಡ್ಯದ ಪಾಂಡವಪುರ ಸಮೀಪದ ಹಾರೋಹಳ್ಳಿ ಗ್ರಾಮದ ನಿವಾಸಿ ಡೈಮಂಡ್ ರವಿ ಪಾಂಡವಪುರದ ಕೋಕಿಲ ಚಿತ್ರಮಂದಿರಕ್ಕೆ ಹೋಗಿ ಒಬ್ಬರೇ ಕೂತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನೋಡಿದ್ದಾರೆ.
ಈ ಸಿನಿಮಾ ನೋಡಲು ರವಿ ಪಾಂಡವಪುರ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿರುವ ಈ ಥಿಯೇಟರ್ ನಲ್ಲಿ ಸಿನಿಮಾ ಪ್ರದರ್ಶನವಿದ್ದರೂ, ಯಾರೂ ಬಂದಿಲ್ಲ.
ಹಾಗಾಗಿ ಮೊದ ಮೊದಲು ರವಿಗೆ ನಿರಾಸೆಯಾಗಿದೆ. ಒಬ್ಬನೇ ಇದ್ದ ಕಾರಣಕ್ಕಾಗಿ ಪ್ರದರ್ಶನ ರದ್ದು ಮಾಡುವುದಾಗಿ ಥಿಯೇಟರ್ ಮಾಲೀಕರು ಹೇಳಿದ್ದಾರೆ.
ತಾನು ಈ ಸಿನಿಮಾ ನೋಡಲೇಬೇಕೆಂದು ಬಂದಿದ್ದರಿಂದ ಏನು ಮಾಡುವುದೆಂದು ತಿಳಿಯದೇ, ಪ್ರದರ್ಶನ ಮಾಡಲು ಎಷ್ಟು ಟಿಕೇಟ್ ತಗೆದುಕೊಳ್ಳಬೇಕು ಎಂದು ಕೇಳಿದ್ದಾನೆ.
ಕನಿಷ್ಠ ಹತ್ತು ಟಿಕೇಟ್ ಆದರೂ ಕೊಂಡರೆ, ಸಿನಿಮಾ ತೋರಿಸುವುದಾಗಿ ಮಾಲೀಕರು ಹೇಳಿದ್ದಾರೆ. ತಾನೊಬ್ಬನೇ ಅಷ್ಟೂ ಟಿಕೇಟ್ ತಗೆದುಕೊಂಡು ಏಕಾಂಗಿ ಆಗಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಿದ್ದಾರಂತೆ ಡೈಮಂಡ್ ರವಿ.
ಒಬ್ಬರೇ ಸಿನಿಮಾ ವೀಕ್ಷಿಸುತ್ತಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ರವಿಯ ದೇಶಪ್ರೇಮ ಕಂಡ ಹಲವರು ಹೊಗಳುತ್ತಿದ್ದಾರೆ. ಇಂತಹ ಸಿನಿಮಾವನ್ನು ಒಬ್ಬರೇ ನೋಡುವಾಗ ಭಯವಾಗಲಿಲ್ಲವೆ ಎಂದು ಪ್ರಶ್ನೆಯನ್ನೂ ಮಾಡಿದ್ದಾರೆ.
- ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಬಿಡುಗಡೆ
- ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
- ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
- ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ
- ಡಿ.ಕೆ. ಸುರೇಶ್ ತಂಗಿ ಎಂದು ಹೇಳಿಕೊಂಡು 8.41 ಕೋಟಿ ಚಿನ್ನಾಭರಣ ವಂಚನೆ: ಎಫ್ಐಆರ್ ದಾಖಲು
- ಮುಡಾ ಹಗರಣ: ಬದಲಿ ನಿವೇಶನ ಹಂಚಿಕೆಯಲ್ಲಿ ಅವ್ಯವಹಾರ, ತನಿಖಾ ವರದಿ ಆಧರಿಸಿ ಸರ್ಕಾರದ ಕ್ರಮ
More Stories
ಮೈಸೂರಿನ ಪ್ರಮುಖ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರು: ಪಾಲಿಕೆ ತೀರ್ಮಾನಕ್ಕೆ ಆಕ್ಷೇಪಣೆಗಳು
ಸಿ.ಟಿ. ರವಿ ಪ್ರಕರಣ CID ಗೆ ಹಸ್ತಾಂತರ: ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ
ಶಾಲಾ ಕೊಠಡಿಯಲ್ಲಿ ಯುವತಿಯ ಅತ್ಯಾಚಾರ: ಆರೋಪಿ ಬಂಧನ