December 19, 2024

Newsnap Kannada

The World at your finger tips!

credit , war , ramnagar

Ramanagara: Development credit war between HDK - CPY: EE suspension ರಾಮನಗರ: ಎಚ್‌ಡಿಕೆ - ಸಿಪಿವೈ ನಡುವೆ ಅಭಿವೃದ್ಧಿ ಕ್ರೆಡಿಟ್ ವಾರ್: ಇಇ ಅಮಾನತು

ಕುಮಾರಸ್ವಾಮಿ 14 ತಿಂಗಳು ಸಿಎಂ ಆಗಿದ್ದಾಗ ವೆಸ್ಟ್ಂಡ್ ನಲ್ಲಿ ರಾಸಲೀಲೆ ಆಡಿಕೊಂಡಿದ್ದರು : ಸಿಪಿವೈ

Spread the love

ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ 14 ತಿಂಗಳು ಸಿಎಂ ಆಗಿದ್ದ ವೇಳೆ ರಾಸಲೀಲೆ ಆಡಿಕೊಂಡೆ ಕಾಲ ಕಳೆದರು ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಚನ್ನಪಟ್ಟಣದಲ್ಲಿ ಸೋಮವಾರ ಆರೋಪಿಸಿದರು.

ಚನ್ನಪಟ್ಟಣದಲ್ಲಿ ಸುದ್ದಿಗಾರರಜೊತೆ ಮಾತನಾಡಿದ ಸಿಪಿವೈ ಕುಮಾರಸ್ವಾಮಿ ಸಿಎಂ ಆಗಿ ಅವರ ಸಾಧನೆ ಏನು..? 14 ತಿಂಗಳು ಸಿಎಂ ಆಗಿದ್ದ ವೇಳೆ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ರಾಸಲೀಲೆ ಆಡಿಕೊಂಡಿದ್ರು. 14 ತಿಂಗಳು‌ ಸಿಎಂ ಆಗಿದ್ದ ವೇಳೆ ಚನ್ನಪಟ್ಟಣಕ್ಕೆ ಬರುತ್ತಿರಲಿಲ್ಲ. ಇದೀಗ ಚನ್ನಪಟ್ಟಣ ತಾಲೂಕಿಗೆ ಬಂದು ಜನರ ಮುಂದೆ ಕಣ್ಣೀರಿಟ್ಟು ನಾಟಕ ಮಾಡ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನಾನು ಇನ್ನು ಮುಂದೆ ಈ ಕುಮಾರಸ್ವಾಮಿ ಬಗ್ಗೆ ಬಹುವಚನದಲ್ಲಿ ಮಾತನಾಡೋದಿಲ್ಲ. ಏಕವಚನದಲ್ಲೇ ಮಾತನಾಡುತ್ತೀನಿ. ಕುಮಾರಸ್ವಾಮಿಗೆ ಈಗಾಗಲೇ ಕ್ಷೇತ್ರದ ಜನರು ಉತ್ತರ ನೀಡಿದ್ದಾರೆ. ನನ್ನಿಂದ ಯಾಕಪ್ಪ ಹೆಚ್​​ಡಿ ಕುಮಾರಸ್ವಾಮಿ ಆಣಿಮುತ್ತುಗಳನ್ನು ಕೇಳ್ತೀರಾ..? ನೇರಾನೇರ ನನ್ನ ಮುಂದೆ ಕೂರಿಸಿ ವೈಯಕ್ತಿಕ ಹಾಗೂ ಸಾರ್ವಜನಿಕ ವಿಚಾರಗಳನ್ನು ಬಹಿರಂಗವಾಗಿ ಮಾತಾಡೋಣ.

ಕುಮಾರಸ್ವಾಮಿ ಬಹಿರಂಗ ಚರ್ಚೆಗೆ ಬರಲಿ, ನಾನು ಚರ್ಚೆಗೆ ಸಿದ್ಧನಿದ್ದೇನೆ. ನನ್ನ ಬಗ್ಗೆ ಏಕವಚನದಲ್ಲಿ ಮಾತಾಡಿದ್ರೆ ನಾನೂ ಕೂಡ ಏಕವಚನದಲ್ಲೇ ಮಾತನಾಡುತ್ತೇನೆ. ರಾಸಲೀಲೆ ಬಗ್ಗೆ ಕುಮಾರಸ್ವಾಮಿ ಅವರನ್ನು ಕೇಳಿ ಅವರು ಹೇಳಿಲ್ಲ ಅಂದ್ರೆ ನಾನೇ ಹೇಳ್ತೀನಿ ಎಂದು ಸವಾಲು ಎಸೆದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!