ವಿರಾಟ್ 100 ನೇ ಟೆಸ್ಟ್ ಪಂದ್ಯ : ಶೇ 50 ರಷ್ಟು ಪ್ರೇಕ್ಷಕರಿಗೆ ಪಂದ್ಯ ನೋಡುವ ಅವಕಾಶ – ಬಿಸಿಸಿಐ

Team Newsnap
1 Min Read

ಮೊಹಾಲಿಯಲ್ಲಿ ಮಾರ್ಚ್ 4 ರಿಂದ ಆರಂಭವಾಗಲಿರುವ ಶ್ರೀಲಂಕಾ ಹಾಗೂ ಭಾರತದ ನಡುವೆ ಟೆಸ್ಟ್ ಪಂದ್ಯ ವಿರಾಟ್‌ ವೃತ್ತಿ ಬದುಕಿನ 100ನೇ ಟೆಸ್ಟ್‌ ಪಂದ್ಯವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುವ ಸಲುವಾಗಿ ಬಿಸಿಸಿಐ ಅವಕಾಶ ಮಾಡಿಕೊಟ್ಟಿದೆ.

ಮಾರ್ಚ್‌ 4ರಿಂದ ಶುರುವಾಗಲಿರುವ ಈ ಪಂದ್ಯಕ್ಕೆ ಶೇ.50 ರಷ್ಟು ಪ್ರೇಕ್ಷಕರು ಕ್ರೀಡಾಂಗಣ ಪ್ರವೇಶಿಸಬಹುದು ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಹೇಳಿದೆ.

ಪ್ರವಾಸಿ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿದ್ರೆ ವಿರಾಟ್ ಕೊಹ್ಲಿಯ ವೃತ್ತಿ ಬದುಕಿನ 100ನೇ ಟೆಸ್ಟ್‌ ಪಂದ್ಯ ಆಗಲಿದೆ.

ಟೆಸ್ಟ್ ಪಂದ್ಯ ವೀಕ್ಷಿಸಲು ಕ್ರೀಡಾಂಗಣಕ್ಕೆ ಪ್ರವೇಶ ಇಲ್ಲ ಎಂದು ಬಿಸಿಸಿಐ ಈ ಹಿಂದೆ ಹೇಳಿತ್ತು. ಇದಕ್ಕೆ ವಿರಾಟ್ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಅದಕ್ಕೆ ಸ್ಪಂದಿಸಿ ಬಿಸಿಸಿಐ ಈ ಅವಕಾಶ ನೀಡಿದೆ.

Share This Article
Leave a comment